ಡಿವೈಎಫ್ಐ ಸಮ್ಮೇಳನಕ್ಕೆ ಧನ ಸಹಾಯ ನೀಡಿ

2 years ago

ಆತ್ಮೀಯರೇ, ಡಿವೈಎಫ್ಐ ಯುವಜನ ಸಂಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೋಷಿತ ಸಮುದಾಯದ ಧ್ವನಿಯಾಗಿ ಧೀರತೆಯಿಂದ ಜನ ಚಳುವಳಿಯನ್ನು ಬಹಳ ಬದ್ಧತೆಯಿಂದ ಮುನ್ನಡೆಸಿಕೊಂಡು ಬಂದು ಜನರ ಪ್ರೀತಿ ವಿಶ್ವಾಸವನ್ನು ಗಳಿಸಿವೆ.

ನಮ್ಮ ಸಂಘಟನೆಯ 12ನೇ ಕರ್ನಾಟಕ ರಾಜ್ಯ ಸಮ್ಮೇಳನ ಈ ಬಾರಿ ಮಂಗಳೂರಿನಲ್ಲಿ ಫೆಬ್ರವರಿ 25 ರಿಂದ 27ರವರೆಗೆ ನಡೆಯಲಿದೆ. ಅನೇಕ ಸವಾಲು ಸಂಘರ್ಷಗಳ ನಡುವೆ ಸಮ್ಮೇಳನವನ್ನು ಯಶಸ್ವಿಗೊಳಿಸಲಿದ್ದೇವೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಪ್ರತಿನಿಧಿಗಳು, ಸಹಸ್ರಾರು ಜನರ ಭಾಗವಹಿಸುವಿಕೆಯೊಂದಿಗೆ ನಡೆಯಲಿರುವ ಯೂತ್ ಮಾರ್ಚ್, ವಿಚಾರ ಸಂಕಿರಣ, ಬಹಿರಂಗ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಬಲಿಷ್ಠ ಯುವಜನ ಚಳುವಳಿಯನ್ನು ಕಟ್ಟುವ ಗುರಿಯನ್ನು ಹೊಂದಿದ್ದೇವೆ.

ಬಂಧುಗಳೇ, ಎಂತಹ ಕಠಿಣ ಸವಾಲುಗಳನ್ನು ರಾಜಿ ಇಲ್ಲದೆ ಎದುರಿಸುವ, ಉಳ್ಳವರ ಹಿತ ಕಾಯದೆ ಸದಾ ಜನಸಾಮಾನ್ಯರ ನ್ಯಾಯದ ಪರ ಗಟ್ಟಿಯಾಗಿ ನಿಲ್ಲುವ ಡಿವೈಎಫ್ಐ ಸಂಘಟನೆಯ ಚಳುವಳಿಯ ಜೊತೆ ಪ್ರಜ್ಞಾವಂತ ನಾಗರಿಕರು ನಿಲ್ಲಬೇಕಿದೆ. ಈ ಸಮ್ಮೇಳನಕ್ಕೆ ಸಾರ್ವಜನಿಕರು ಆರ್ಥಿಕ ಸಹಾಯ ನೀಡಿ ನಮ್ಮ ಚಳುವಳಿಯನ್ನು ಪ್ರೋತ್ಸಾಹಿಸಬೇಕೆಂದು ಈ ಮೂಲಕ ಕೋರುತ್ತೇವೆ.

  • ಸುನಿಲ್ ಕುಮಾರ್ ಬಜಾಲ್, DYFI ಮಾಜಿ ರಾಜ್ಯಾಧ್ಯಕ್ಷ

ಧನ ಸಹಾಯ ನೀಡುವವರು ಈ ಕೆಳಗಿನ ಖಾತೆಗೆ ಜಮಾ ಮಾಡಿ

ಬ್ಯಾಂಕ್ ವಿವರ ಈ ಕೆಳಗಿನಂತಿವೆ.
DEMOCRATIC YOUTH FEDERATION OF INDIA (DYFI)
AC NO: 11750200016357
IFSC: FDRL0001175

Leave a Reply