ಪೌರಕಾರ್ಮಿಕರ ನೇಮಕದಲ್ಲಿ ಮಧ್ಯವರ್ತಿಗಳ ಮೊರೆಹೋಗದಿರಿ

2 years ago

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕರ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿ, ಪರಿಶೀಲನೆ ಹಂತದಲ್ಲಿ ಇದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಹಾಲಿ ನೇರಪಾವತಿ, ಕ್ಷೇಮಾಭಿವೃದ್ದಿ, ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಂದ ಮಧ್ಯವರ್ತಿ, ಅನ್ಯ ವ್ಯಕ್ತಿಗಳು ಕೆಲಸ ಕೊಡಿಸುವುದಾಗಿ ತಿಳಿಸಿ, ಹಣ ವಸೂಲಿ ಮಾಡುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿರುತ್ತದೆ ಎಂದಿದ್ದಾರೆ.

ಈ ನೇಮಕಾತಿ ಪ್ರಕ್ರಿಯೆ ಸರ್ಕಾರದ ಅಧಿಸೂಚನೆಯಂತೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದ್ದು, ಅರ್ಜಿದಾರರು ಯಾವುದೇ ವ್ಯಕ್ತಿಗಳಿಗೆ ಹಣ ನೀಡಬಾರದು. ಒಂದು ವೇಳೆ ಅರ್ಜಿದಾರರು ಮಧ್ಯವರ್ತಿ, ಅನ್ಯ ವ್ಯಕ್ತಿಗಳಿಗೆ ಹಣ ನೀಡಿ ಮೋಸ ಹೋದಲ್ಲಿ ಅದಕ್ಕೆ ಪಾಲಿಕೆಯು ಜವಾಬ್ದಾರರಾಗುವುದಿಲ್ಲ ಎಂದಿದ್ದಾರೆ.

Leave a Reply