ಬೆಂಗಳೂರು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಸಫಾಯಿ ಕರ್ಮಚಾರಿ ಅಂದೋಲನ್ ಸಂಚಾಲಕ ಜಿ.ಎನ್.ನಾಗೇಂದ್ರ ಅವರು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಬಿ.ಮಲ್ಲಿಕಾರ್ಜುನರವರಿಗೆ ಮ್ಯಾನುವೇಲ್ ಸ್ಕೃಾವೆಂಜರ್ಸ್ ಗಳಿಗೆ ನಿಗಮದಿಂದ ಸಾಲ ಸೌಲಭ್ಯ ಮತ್ತು ಪುನರ್ವಸತಿ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.

ಮನವಿ ಸಲ್ಲಿಸಿದ ನಂತರ ಮಾತನಾಡಿದ ಜಿ.ಎನ್.ನಾಗೇಂದ್ರ, ಮ್ಯಾನುವೇಲ್ ಸ್ಕೃಾವೆಂಜರ್ಸ್ ಗಳ ಜೀವನ ಸುಧಾರಣೆ ಅವರ ಸಹ ಮನುಷ್ಯರಂತೆ ಬಾಳಬೇಕು ಎಂಬ ಉದ್ದೇಶ ನಮ್ಮದು ಎಂದು ಹೇಳಿದರು.
ಮ್ಯಾನುವೇಲ್ ಸ್ಕೃಾವೆಂಜರ್ಸ್ ಗಳಿಗೆ ಮನೆ ಇಲ್ಲ. ಅವರು ಗುಡಿಸಲುಗಳಲ್ಲಿ ಹೀನಾಯ ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಕನಿಷ್ಠ 10 ಲಕ್ಷ ರೂಪಾಯಿ ಸಹಾಯಧನ ನೀಡಿ ಉತ್ತಮ ವಸತಿ ಸೌಕರ್ಯ ನೀಡಬೇಕು ಎಂದರು.

ಆರ್ಥಿಕವಾಗಿ ಹಿಂದುಳಿದ ಮ್ಯಾನುವೇಲ್ ಸ್ಕೃಾವೆಂಜರ್ಸ್ ಕುಟುಂಬಗಳಿಗೆ ಆರ್ಥಿಕವಾಗಿ ಸಬಲರಾಗಲು ನಿಗಮದಿಂದ ಸೌಲ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಮಲ್ಲಿಕಾರ್ಜುನ ಮಾತನಾಡಿ, ಮ್ಯಾನುವೇಲ್ ಸ್ಕೃಾವೆಂಜರ್ಸ್ ಮತ್ತು ಸಫಾಯಿ ಕರ್ಮಚಾರಿಗಳಿಗೆ ನಮ್ಮ ನಿಗಮದಿಂದ ನೀಡುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಅವರ ಖಾತೆಗೆ ಅನುದಾನ ಹಣ ಜಮೆ ಮಾಡಲಾಗುತ್ತಿದೆ. ಈಗಾಗಲೆ ರಾಜ್ಯದ್ಯಂತ ಸಾವಿರಾರು ಜನರು ಇದರ ಲಾಭವನ್ನು ಪಡೆದಿರುತ್ತಾರೆ ಎಂದು ಹೇಳಿದರು.
ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಯೋಜನೆಗಳಿಗೆ ಸಲ್ಲಿಸುವ ಅರ್ಜಿದಾರರಿಗೆ ವಿಳಂಬ ಮಾಡದೇ ತರಿತ್ವಗತಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಸರ್ಕಾರದ ಯೋಜನೆ ಸಮಪರ್ಕವಾಗಿ ತಲುಪಿಸುವ ಜವಾಬ್ದಾರಿ ನಮ್ಮದು ಎಂದರು.




