ಮಾಜಿ ಮೇಯರ್ ಎಂ.ಗೌತಮ್ ಕುಮಾರ್ ಹುಟ್ಟಹಬ್ಬ

1 year ago

ದೇಶ ಮೊದಲು ಎಂದು ರಾಷ್ಟ್ರಭಕ್ತಿ ಕಲಿಸಿದ ಪಕ್ಷ ಬಿಜೆಪಿ

ಬಿಜೆಪಿ ಪಕ್ಷದ ಕಾರ್ಯನೆಂದರೆ ಹೆಮ್ಮೆ ಪಡುವ ಸಂಗತಿ

ಮಾಜಿ ಮಹಾಪೌರ ಎಂ.ಗೌತಮ್ ಕುಮಾರ್

ಬೆಂಗಳೂರು: ಶಾಂತಿನಗರ ಜನಸಂಪರ್ಕ ಕಛೇರಿಯಲ್ಲಿ  ಶಾಂತಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ವತಿಯಿಂದ ಬಿಜೆಪಿ ಮುಖಂಡರು, ಮಾಜಿ ಮೇಯರ್ ಎಂ.ಗೌತಮ್ ಕುಮಾರ್ ಹುಟ್ಟಹಬ್ಬ

ಎಂ.ಗೌತಮ್ ಕುಮಾರ್  ದನಗಳಿಗೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ, ಎಲ್ಲರಿಗೂ ಸಿಹಿ ವಿತರಿಸಿದರು. ಶಾಂತಿನಗರ ಮಂಡಲ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಲಕ್ಷ್ಮಿನಾರಾಯಣ್, ರಾಜಕೀಯ ಮುಖಂಡ ಅಭಿಲಾಶ್ ರೆಡ್ಡಿ, ಕೇಂದ್ರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯದುಕುಮಾರ್ ಗೌಡ, ಬಿಜೆಪಿ ಮುಖಂಡರಾದ ನಾಗರಾಜ್ ರೆಡ್ಡಿ, ಕೃಷ್ಣಮೂರ್ತಿ, ಭೈರಪ್ಪ, ರವೀಂದ್ರನಾಥ್, ಉಮಾವತಿ, ಕೋಮಲರೆಡ್ಡಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಎಂ.ಗೌತಮ್ ಕುಮಾರ್ ಮಾತನಾಡಿ, ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷ , ವಿಶ್ವದ ಅತಿಡೊಡ್ಡ ಪಕ್ಷ ಎಂಬ ಕೀರ್ತಿಗಳಿಸಿದೆ. ದೇಶ ಮೊದಲು ಎಂಬ ರಾಷ್ಟ್ರ ಭಕ್ತಿ ಸಂದೇಶ ಸಾರಿದ ಬಿಜೆಪಿ ಪಕ್ಷದ ಕಾರ್ಯಕರ್ತ ಎಂದರೆ ಹೆಮ್ಮೆ ಪಡುವ ಸಂಗತಿ ಎಂದರು.

ಬಿಜೆಪಿ ಪಕ್ಷದಲ್ಲಿ 25 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದೇನೆ, ಪಕ್ಷ ನನ್ನನ್ನು ಗುರುತಿಸಿ ಎರಡು ಬಾರಿ ಬಿಬಿಎಂಪಿ ಚುನಾವಣೆ ಸ್ಪರ್ಧೆ ಮಾಡಲು ಅವಕಾಶ ನೀಡಿತು, ನಂತರ ಬೆಂಗಳೂರುನಗರ ಅಭಿವೃದ್ದಿ ಮಾಡಲು, ಜನರ ಸೇವೆ ಮಾಡಲು ಮಹಾಪೌರರಾಗಿ ನನ್ನನು ಆಯ್ಕೆ ಮಾಡಿತು ಎಂದರು.

ಪಕ್ಷ ತಾಯಿ ಸಮಾನ ನನಗೆ, ಎಲ್ಲ ಅವಕಾಶ ನೀಡಿದೆ, ಬಿಜೆಪಿ ಪಕ್ಷ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರದ ಜನರು ನನ್ನ ಹೋರಾಟ ಮತ್ತು ಸಮಾಜಸೇವೆ ಸದಾ ಸಹಕಾರ ಬೆಂಬಲ ನೀಡುತ್ತಾ ಬಂದಿದೆ ಎಂದರು.

ನನ್ನ ರಾಜಕೀಯ ಯಶ್ವಸಿಗೆ ಕಾರಣಕರ್ತರಾದ ಬಿಜೆಪಿ, ಮುಖಂಡರು, ಕಾರ್ಯಕರ್ತರು ಹಾಗೂ ವಿಧಾನಸಭಾ ಕ್ಷೇತ್ರದ ಜನರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದರು.

Leave a Reply