50% ಪರ್ಸೆಂಟ್ ಕಮಿಷನ್ ಪ್ರಭಾವದಿಂದ ಬೆಂಗಳೂರು ನೀರಿನಲ್ಲಿ ಮುಳುಗಡೆ: ರಾಮಲಿಂಗಾ ರೆಡ್ಡಿ

4 years ago

ಬೆಂಗಳೂರು: ಬಿಜೆಪಿ ಸರ್ಕಾರದ ನಿರ್ಲಕ್ಷತನದಿಂದ ಬೆಂಗಳೂರು ನಗರ ಪ್ರವಾಹ ನಿಯಂತ್ರಣವನ್ನು ಕೈಗೊಳ್ಳದಿರುವುದರಿಂದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಉದ್ಯಮಿಗಳು ಬೆಂಗಳೂರನ್ನು ಬಿಟ್ಟು ಹೊರಡಲು ಅಣಿಯಾಗುತ್ತಿರುವುದು ದುರದೃಷ್ಟಕರ ಎಂದು ಕೆಪಿಸಿಸಿ ಪ್ರತಿಭಟನೆ ನಡೆಸಿತು.

ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟಯಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸುವ ನಗರ ಬೆಂಗಳೂರಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನು ಬಿಜೆಪಿ ಹರಾಜು ಹಾಕುತ್ತಿದೆ ಎಂದು ಆರೋಪಿಸಿತು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಬೃಹತ್ ಪ್ರತಿಭಟನೆ ಯನ್ನು ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಮಾತಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಬಿ.ಜೆ.ಪಿ. ಪಕ್ಷ ಭ್ರಷ್ಟಚಾರದ ಕೂಪವಾಗಿದೆ. ಪ್ರತಿಯೊಂದು ಕೆಲಸದಲ್ಲಿ ಶೇಕಡ 40% ಮತ್ತು 50% ಪರ್ಸೆಂಟ್ ಕಮಿಷನ್ ಪ್ರಭಾವದಿಂದ ಕಳಪೆ ಕಾಮಗಾರಿಯಿಂದ ಬೆಂಗಳೂರುನಗರ ನೀರಿನಲ್ಲಿ ಮುಳುಗಡೆಯಾಗಿದೆ ಎಂದರು.

ನಗರದ ಪರಿಸ್ಥಿತಿ ನೋಡಿದ ಪ್ರತಿಷ್ಠಿತ ಐ.ಟಿ.ಬಿ.ಟಿ. ಕಂಪನಿಗಳು ಬರಲು ಹೆದರುತ್ತಿವೆ ಮತ್ತು ಇರುವ ಕಂಪನಿಗಳು ಬೆಂಗಳೂರು ಬಿಟ್ಟು ಹೊರಹೋಗುತ್ತಿವೆ. ಜನರ ಜೀವನಕ್ಕೆ ನರಕವಾಗಿರುವ ಬಿ.ಜೆ.ಪಿ. ಆಡಳಿತಕ್ಕೆ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, ಶಾಸಕರಾದ ಕೃಷ್ಣಭೈರೇಗೌಡ, ಸೌಮ್ಯ ರೆಡ್ಡಿ, ರಿಜ್ವಾನ್ ಅರ್ಹದ್, ಮಾಜಿ ಮೇಯರ್ ಗಳಾದ ಜಿ.ಪದ್ಮಾವತಿ, ಮಂಜುನಾಥರೆಡ್ಡಿ, ಜೆ.ಹುಚ್ಚಪ್ಪ, ಜಿಲ್ಲಾ ಅಧ್ಯಕ್ಷ ಜಿ.ಶೇಖರ್, ಕೃಷ್ಣಪ್ಪ, ನಾಯಕ ಎಮ್.ಶಿವರಾಜು, ಮಹಾನಗರ ಪಾಲಿಕೆ ಮಾಜಿ ಸದಸ್ಯರಾಳಾದ ಎಸ್.ಕೇಶವಮೂರ್ತಿ, ಮೋಹನ್ ಕುಮಾರ್ ಮತ್ತು ಶ್ರೀ ರಾಮಮಂದಿರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೆಂಕಟೇಶ್, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಆಪಲ್ ನಾಗರಾಜ್, ರವರು ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply