ಗೆಲುವಿಗೆ ಶ್ರಮಿಸಿದ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣೆ

2 years ago

ಬೆಂಗಳೂರು: ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಅವರ ಗೆಲುವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣೆ ಸಮಾರಂಭವನ್ನು ರಾಜಾಜಿನಗರ ವಿಧಾನಸಭಾ ಮಂಡಲ ಬಿಜೆಪಿ ವತಿಯಿಂದ ಆಯೋಜಿಸಲಾಗಿತ್ತು.

ಭಾರತಾಮಾತೆ, ಶ್ಯಾಮಪ್ರಸಾದ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾ, ಜಯಪ್ರಕಾಶ್ ನಾರಾಯಣ್ ರವರ ಭಾವಚಿತ್ರಕ್ಕೆ ಮಾಜಿ ಶಿಕ್ಷಣ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್, ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಪ್ತಗಿರಿಗೌಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್, ಮಹೇಂದ್ರ ಮೋದಿ ಪುಷ್ಪನಮನ ಸಲ್ಲಿಸಿದರು.

ಇದೇ ವೇಳೆ ಮಾತಾಡಿದ ಎಸ್.ಸುರೇಶ್ ಕುಮಾರ್, 10ವರ್ಷ ಪ್ರಧಾನಮಂತ್ರಿಯಾಗಿ ದೇಶ ಸೇವೆ ಸಲ್ಲಿಸಿ, ಮೂರನೇ ಬಾರಿಗೆ ಪ್ರಧಾನಿ ಮಂತ್ರಿಯಾಗವುದು ಬಹಳ ಕಷ್ಟಕರ ಸಂಗತಿಯಾಗಿದೆ. ನರೇಂದ್ರಮೋದಿರವರ ಆಡಳಿತದಲ್ಲಿ ಆರ್ಥಿಕ ವ್ಯವಸ್ಥೆ ಉತ್ತಮವಾಗಿದೆ ಮತ್ತು ಮೋದಿರವರು ಸರ್ವವ್ಯಾಪಿ ವಿಶ್ವದ ನಾಯಕರಾಗಿ ಬೆಳದಿದ್ದಾರೆ ಎಂದರು.

ಮೋದಿ ಪ್ರಧಾನಿಯಾಗಿರುವುದು ದೇಶದ ಜನರು ಬಹಳ ಖುಷಿಯಾಗಲಿದ್ದಾರೆ. ಇ.ವಿ.ಎಮ್ ಕುರಿತು ವಿರೋಧ ಪಕ್ಷ ಈ ಬಾರಿ ಮೌನವಹಿಸಿರುವ ಕಾರಣವೇನು? ಕೆಪಿಸಿಸಿ ಅಧ್ಯಕ್ಷರು ತಮ್ಮನ ಸೋಲಿನಿಂದ ಇ.ವಿ.ಎಮ್.ಕುರಿತು ತಗಾದೆ ತೆಗೆದಿದ್ದಾರೆ. ಕಾರ್ಯಕರ್ತರಿಗೆ, ದೇಶದ ಜನರ ಸೇವೆ ಮಾಡಲು 18 ಗಂಟೆ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರಮೋದಿರವರ ಹೆಸರಿನ ಬಲದಿಂದ ನಾನು ಮತ್ತು ಪಿ.ಸಿ.ಮೋಹನ್ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದರು.

4 ವಿಧಾನಸಭಾ ಕ್ಷೇತ್ರಗಳಾದ ಮಹದೇವಪುರ, ರಾಜಾಜಿನಗರ, ಗಾಂಧಿನಗರ, ಸಿ.ವಿ.ರಾಮನ್ ನಗರ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಮತಗಳು ಲಭಿಸಿದೆ. ಶೇಕಡ 66ರಷ್ಟು ಮತಗಳು ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಲಭಿಸಿದೆ. ಬೆಂಗಳೂರು ನಗರ ಮತದಾರ ನೀಡಿದ ಮತಗಳಿಗೆ ಋಣ ತೀರಿಸುವ, ವಾಪಸ್ಸು ಕೊಡುವ ಕೆಲಸ ಮಾಡಬೇಕು. ಬೆಂಗಳೂರು ನಗರ, ಗ್ರಾಮೀಣ ಸೇರಿ ನಾಲ್ಕು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬೆಂಗಳೂರು ನಗರದ ಬಿಜೆಪಿ ಲೋಕಸಭಾ ಸದಸ್ಯರು ಮತ್ತು ಶಾಸಕರು ಪ್ರತಿ ತಿಂಗಳು ಸಭೆ ಮಾಡಿ ಬೆಂಗಳೂರು ನಗರ ಸಮಸ್ಯೆ ಪರಿಹಾರ ಮತ್ತು ಯೋಜನೆಗಳು ಕುರಿತು ಸಮಗ್ರ ಯೋಜನೆಗಳ ತಯಾರಿಸಲು ಸಭೆ ನಡೆಸಬೇಕು. ಪ್ರತಿಯೊಬ್ಬ ಮತದಾರರಿಗೆ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಧನ್ಯವಾದಗಳು, ಕೃತಜ್ಞತೆಗಳು ಎಂದರು.

ಪಿ.ಸಿ.ಮೋಹನ್ ಮಾತನಾಡಿ, 4 ಬಾರಿ ಲೋಕಸಭಾ ಸದಸ್ಯನಾಗಿ ಗೆಲುವು ಸಾಧಿಸಲು ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. 2009ರಲ್ಲಿ ನಾನು ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ಮೊದಲ ಚುನಾವಣೆ ಪ್ರಚಾರವನ್ನು ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ಜರುಗಿತು. ಸುರೇಶ್ ಕುಮಾರ್ ರವರು 18 ಸಾವಿರ ಮನೆಗಳಿಗೆ ಭೇಟಿ ಮಾಡಿರುವ ಕಾರಣದಿಂದ ನನಗೆ 40 ಸಾವಿರ ಅತ್ಯಧಿಕ ಲೀಡ್ ರಾಜಾಜಿನಗರದಲ್ಲಿ ಪಡೆಯಲು ಸಾಧ್ಯವಾಯಿತು ಎಂದರು.

ಸುರೇಶ್ ಕುಮಾರ್ ರವರು ನಾಡಿನ ಉತ್ತಮ ರಾಜಕಾರಣಿಯಾಗಿ ಜನಮನ ಗೆದ್ದಿದ್ದಾರೆ. ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಿ ದೇಶಕ್ಕೆ ಮಾದರಿಯಾದರು ಎಂದರು.

ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರಮೋದಿರವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ, ಬೆಂಗಳೂರು ನಗರದ ಕುರಿತು ಪ್ರಧಾನಿಯವರು ಅಪಾರ ಆಸಕ್ತಿವಹಿಸಿದ್ದಾರೆ. ರಾಜಾಜಿನಗರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಹೃತ್ವೂರ್ವಕ ಧನ್ಯವಾದಗಳು ಎಂದರು.

ಮಾಜಿ ಉಪ ಮೇಯರ್ ರಂಗಣ್ಣ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ಮಂಜುಳ ವಿಜಯಕುಮಾರ್, ದೀಪಾ ನಾಗೇಶ್, ಪ್ರತಿಮಾ, ಬಿ.ಎನ್.ಶ್ರೀನಿವಾಸ್, ಗಿರೀಶ್ ಗೌಡ, ಸತೀಶ್ ಭಗವಾನ್, ಯಶಸ್ ನಾಯಕ್,ರಾಕೇಶ್, ಕಿರಣ್, ಅಮಿತ್ ಜೈನ್, ಕೃಷ್ಣಮೂರ್ತಿ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply