ರಾಯ್ ಪುರ: ವಿಷಾಹಾರ ಸೇವಿಸಿ 51 ಮಕ್ಕಳು ಸೇರಿದಂತೆ 100 ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಛತ್ತೀಸ್ಗಢದ ಅನ್ಷುಲಾ ಗ್ರಾಮದಲ್ಲಿ ಸಮಾರಂಭದಲ್ಲಿ ಊಟ ಮಾಡಿದ ನಂತರ 100 ಜನ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಜಿಲ್ಲಾಧಿಕಾರಿ ಧೋಮನ್ ಸಿಂಗ್ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು, ಶಂಕರ ಆಸ್ಪತ್ರೆ ಮುಖ್ಯ ವೈದ್ಯ ಎಂ.ಸಿಂಗ್, ಅಸ್ವಸ್ಥಗೊಂಡಿದ್ದವರಲ್ಲಿ ಬಹುತೇಕರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸುಧಾರಣೆ ಕಂಡುಬರದಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಇನ್ನೆರಡು ದಿನಗಳಲ್ಲಿ ಎಲ್ಲರೂ ಬಿಡುಗಡೆ ಆಗಲಿದ್ದಾರೆ ಎಂದರು.