ಹಣಗಳಿಸಿ ಆ್ಯಪ್ ಗಳ ಕುರಿತು ಇರಲಿ ಎಚ್ಚರ

5 years ago

ಬೆಂಗಳೂರು: ಆನ್ಲೈಿನ್ ಮೂಲಕ ಹಣಗಳಿಸುವ ಆ್ಯಪ್ ಗಳ ಕುರಿತು ಎಚ್ಚರ ವಹಿಸಬೇಕಾದ ಅನಿವಾರ್ಯತೆ ಇದೆ. ಇವುಗಳನ್ನು ಬಳಸಿ ಹಣ ಗಳಿಕೆ ಮಾಡಿ ಎಂದು ಮೋಸ ಮಾಡುತ್ತಿದ್ದ ತಂಡವನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

“ಸೂಪರ್ ಲೈಕ್ ಅಪ್ಲಿಕೇಷನ್” ಹಾಗೂ “ಆನ್ಲೈಣನ್ ಮೂಲಕ ಪಾರ್ಟ್ ಟೈಮ್ ಜಾಬ್” ನೀಡುವುದಾಗಿ ಮೋಸಮಾಡಿ ಹಣ ಸುಲಿಯಲಾಗಿದೆ. ಬಂಧಿತರ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ 16.4 ಕೋಟಿ ರೂ.ಗೂ ಅಧಿಕ ಹಣವನ್ನು ವಹಿವಾಟು ನಡೆಸದಂತೆ ನಿರ್ಬಂಧಿಸಲಾಗಿದೆ. 14.11 ಲಕ್ಷ ರೂ. ನಗದು, 7ಕ ಮೊಬೈಲ್ಗ್ಳು, 2 ಲ್ಯಾಪ್ಟಾಿಪ್, 2 ಕಾರು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದಾರೆ.

ಆನ್ ಲೈನ್ ಮೂಲಕ ಹಣಗಳಿಸುವ ಆಮಿಶ ಒಡ್ಡಿ ಜನರನ್ನು ಸುಲಿಯುತ್ತಿದ್ದ 20 ದರೋಡೆಕೋರರ ತಂಡವನ್ನು ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇವರು ಕೋಟ್ಯಾಂತರ ರೂ.ಗಳನ್ನು ಗಳಿಸಿ, ಬಳಕೆದಾರರಿಗೆ ಮೋಸ ಮಾಡಿದ್ದಾರೆ.

ಕೊರೊನಾ ಕಾರಣದಿಂದಾಗಿ ಉದ್ಯೋಗ ಕಳೆದುಕೊಂಡು ಮನೆಯಲ್ಲಿ ಕುಳಿತವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣವಾದ ಫೇಸ್ಬುಗಕ್, ಇನ್ಸ್ಟಾಗ್ರಾಮ್, ವಾಟ್ಸ್ ಆಪ್, ಟ್ವಿಟರ್ ಮೂಲಕ ಸಂಪರ್ಕಿಸಿ, ಆನ್ಲೈ‍ನ್ ಹಣಗಳಿಕೆ ಆ್ಯಪ್ ಹೆಸರಿನಲ್ಲಿ ಸುಲಿಗೆ ಮಾಡಲಾಗಿದೆ.

Leave a Reply