ರಾಯಚೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿ ಶವವನ್ನು ನದಿಗೆ ಎಸೆದಿದ್ದ ಘಟನೆ ಲಿಂಗಸುಗೂರು ತಾಲೂಕಿನ ಹಂಚಿನಾಳದಲ್ಲಿ ನಡೆದಿದ್ದು ತಡವಾಗಿ ವರದಿಯಾಗಿದೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಯುವಕನ ವಿರುದ್ಧದ ಪೋಕ್ಸೋ ಪ್ರಕರಣದ ವಿಚಾರಣೆ ವೇಳೆ ಆರೋಪಿಯೇ ನ್ಯಾಯಾಲಯದಲ್ಲಿ ಸತ್ಯ ವಿಚಾರ ತಿಳಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಕಳೆದ 2024ರ ಸೆಪ್ಟೆಂಬರ್ 29ರಂದು ಪುತ್ರಿ ರೇಣುಕಾಳನ್ನು (18) ಕೊಲೆ ಮಾಡಿದ್ದ ತಂದೆ ಲಕ್ಕಪ್ಪ ಕಂಬಳಿ ಶವವನ್ನು ಮೂಟೆಕಟ್ಟಿ ಕೃಷ್ಣಾ ನದಿಗೆ ಎಸೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ರೇಣುಕಾ ಗ್ರಾಮದ ಅನ್ಯ ಜಾತಿಯ ಯುವಕ ಹನುಮಂತನನ್ನು ಪ್ರೀತಿಸಿದ್ದಳು. ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಇಬ್ಬರೂ ಗ್ರಾಮ ಬಿಟ್ಟು ಓಡಿಹೋಗಿದ್ದರು. ಆಗ ರೇಣುಕಾಗೆ 17 ವರ್ಷ ವಯಸ್ಸಾಗಿತ್ತು. ಮಗಳು ಅಪ್ರಾಪ್ತ ವಯಸ್ಕಳಾಗಿದ್ದರಿಂದ ಆಕೆಯ ತಂದೆ ಲಕ್ಕಪ್ಪ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರ ಪ್ರಕಾರ, ಹನುಮಂತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು.
ಪೋಕ್ಸೋ ಪ್ರಕರಣದಡಿ ಪೊಲೀಸರು ಹನುಮಂತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ರೇಣುಕಾ ಮಾತ್ರ ಹನುಮಂತನನ್ನೇ ಮದುವೆ ಆಗುತ್ತೇನೆಂದು ಪಟ್ಟು ಹಿಡಿದಿದ್ದಳು. ಇದಾದ ಕೆಲ ದಿನಗಳ ನಂತರ ಹನುಮಂತ ಜಾಮೀನು ಮೇಲೆ ಹೊರ ಬಂದಿದ್ದ. ಬಳಿಕ ಆತನ ಜೊತೆ ರೇಣುಕಾ ಓಡಾಟ ನಡೆಸಿದ್ದಳು. ಎಷ್ಟೇ ಬುದ್ಧಿ ಹೇಳಿದರೂ ಕೇಳದೆ, ಹನುಮಂತನನ್ನೇ ಮದುವೆ ಆಗುವೆ ಎಂದಿದ್ದಳು. ಇದರಿಂದ ಕೋಪಗೊಂಡು ಮಗಳನ್ನು ಕೊಲೆ ಮಾಡಿರುವುದಾಗಿ ತಂದೆ ಲಕ್ಕಪ್ಪ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಪೋಕ್ಸೋ ಪ್ರಕರಣದ ವಿಚಾರಣೆಗೆ ಹಲವು ಬಾರಿ ಪುತ್ರಿ ರೇಣುಕಾ ಗೈರಾದ ಬಗ್ಗೆ ಕೋರ್ಟ್ ಪ್ರಶ್ನೆ ಮಾಡಿತ್ತು. ಮಗಳನ್ನು ವಿಚಾರಣೆಗೆ ಹಾಜರುಪಡಿಸುವಂತೆ ಕೋರ್ಟ್ ತಾಕೀತು ಮಾಡಿತ್ತು. ಈ ವೇಳೆ ಲಕ್ಕಪ್ಪ ಅನಿವಾರ್ಯವಾಗಿ ತಪ್ಪೊಪ್ಪೊಕೊಳ್ಳಬೇಕಾಗಿ ಬಂತು.
ಮಗಳನ್ನು ಕೊಲೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿರುವುದಾಗಿ ಲಕ್ಕಪ್ಪ ಕೋರ್ಟ್ಗೆ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ ಮರ್ಯಾದೆಗೇಡು ಹತ್ಯೆ ಪ್ರಕರಣ ಬಹಿರಂಗವಾಗಿದೆ.




