ಹೂ ಮಾರಾಟಗಾರರಿಗೆ ಆಹಾರ ಕಿಟ್, ಕೆಟಲ್ ವಿತರಣೆ

5 years ago

ಬೆಂಗಳೂರು: ಕೊರೋನ ಲಾಕ್ ಡೌನ್ ಮುಗಿದರೂ ಹೂವಿನ ವ್ಯಾಪಾರ ಚೇತರಿಕೆ ಕಂಡಿಲ್ಲ. ಆರ್ಥಿಕ ಸಂಕಷ್ಟದಲ್ಲಿ ಇರುವ ಜೋಗುಪಾಳ್ಯ ವಾರ್ಡ್ ನಲ್ಲಿ ಬೀದಿಬದಿಯಲ್ಲಿ ಹೂ ಮಾರಾಟ ಮಾಡುವ ಕುಟುಂಬಗಳಿಗೆ ಮಾಜಿ ಮೇಯರ್ ಗೌತಮ್ ಕುಮಾರ್ ಆಹಾರ ಸಾಮಾಗ್ರಿಗಳ ದಿನಸಿ ಕಿಟ್ ಮತ್ತು ಕುಡಿಯವ ನೀರು ಬಿಸಿ ಮಾಡುವ ಕೆಟಲ್ ಗಳನ್ನು ವಿತರಿಸಿದರು.

ಬಿಸಿ ನೀರು ಕುಡಿಯುವುದರಿಂದ ಕೊರೋನ ಸಾಂಕ್ರಮಿಕ ರೋಗ ನಿಯಂತ್ರಣ ಸಾಧ್ಯ ಎಂದು ಆಯುಷ್ ವೈದ್ಯಕೀಯ ಸಂಸ್ಥೆ ವರದಿ ನೀಡಿತ್ತು. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡವರಿಗೆ ಕೆಟಲ್ ಗಳನ್ನು ಖರೀದಿಸಲು ಕಷ್ಟ. ಆದ್ದರಿಂದ ಅವರ ಆರೋಗ್ಯ ರಕ್ಷಣೆಗೆ ಉಚಿತವಾಗಿ ಕೆಟಲ್ ಗಳನ್ನು  ವಿತರಿಸಲಾಯಿತು.

Leave a Reply