ಪ್ರಾಣಿಗಳ ದತ್ತು ಸ್ವೀಕಾರ

5 years ago

ಮೈಸೂರು: ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಬೆಂಗಳೂರಿನ ನಾಗೇಂದ್ರ ಸುಬ್ಬಣ್ಣ ಅವರು 80,000 ರೂ.ಗಳನ್ನು ಪಾವತಿಸಿ ಬೇಟೆ ಚಿರತೆ, ಚುಕ್ಕಿ ಜಿಂಕೆ, ನಕ್ಷತ್ರದಾಮೆ ನವಿಲು ಮತ್ತು ಟಾನಿ ಈಗಲ್‍ ಅನ್ನು, ಮೈಸೂರಿನ ಎನ್.ಗಿರೀಶ್ ಅವರು 5,000 ರೂ.ಗಳನ್ನು ಪಾವತಿಸಿ ರಿಂಗ್ ಟೈಲ್ ಲೆಮರ್, ಮೈಸೂರಿನ ಕೆ.ಟಿ.ನರಸಿಂಹಮೂರ್ತಿ ಅವರು 5,000 ರೂ.ಗಳನ್ನು ಪಾವತಿಸಿ ಸ್ಮಾಲ್ ಇಂಡಿಯನ್ ಸಿವೆಟ್, ಬಳ್ಳಾರಿಯ ವಿನಯ್ ಕುಮಾರ್ ದೊಡ್ಡಬಸಪ್ಪ ಅವರು 50,000 ಸಾವಿರ ರೂ.ಗಳನ್ನು ಪಾವತಿಸಿ ಬೇಟೆ ಚಿರತೆಯನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯದ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Leave a Reply