ಬೆಂಗಳೂರು: ರಾಜ್ಯ ಸರ್ಕಾರ ತಜ್ಞರ ವರದಿಗಳು, ಶಿಫಾರಸುಗಳನ್ನು ಆಧರಿಸಿ ರಾಜ್ಯದಲ್ಲಿ ಶಾಲಾಕಾಲೇಜುಗಳನ್ನು ಆರಂಭಿಸಿದೆ. ಆದರೆ, ಅಡ್ಡಿಆತಂಕಗಳು ಆರಂಭವಾಗಿವೆ. ಬೆಂಗಳೂರಿನ ಒಂದೇ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ಬೆಂಗಳೂರಿನ ಹೊರಮಾವಿನಲ್ಲಿರುವ ನ್ಯೂಕ್ರಿಶ್ಚಿಯನ್ ಕಾಲೇಜಿನ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವ ಸಂಗತಿ ಖಚಿತವಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಪಶ್ಚಿಮ ಬಂಗಾಳ, ಕೇರಳ ಮೂಲದವರು ಎಂಬ ಸಂಗತಿ ಬಹಿರಂಗವಾಗಿದೆ. ರಾಜ್ಯಕ್ಕೆ ಅವರು ಬರುವ ವೇಳೆ ಕೋವಿಡ್ ನ ನಕಲಿ ನಗೆಟಿವ್ ವರದಿ ತಂದಿರುವ ಸಾಧ್ಯತೆ ಇದೆ. ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆ ಮಾಡಿದ ಸಮಯದಲ್ಲಿ ಸೋಂಕು ಧೃಡಪಟ್ಟಿದೆ ಎಂದು ವರದಿಯಾಗಿದೆ.




