ಕಲಾಶಾಲೆ ಮಕ್ಕಳಿಂದ ಪರಿಸರ ಸ್ನೇಹಿ ಗಣೇಶಮೂರ್ತಿ ಅಭಿಯಾನ

2 years ago

ಬೆಂಗಳೂರು/ಆನೇಕಲ್: ಮನೆಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸುವ ಮೂಲಕ ಜಲಸಂಪನ್ಮೂಲಗಳನ್ನು ಸಂರಕ್ಷಿಸಿಕೊಳ್ಳಬೇಕೆಂದು ಕಲಾ ಶಾಲೆಯ ಮಕ್ಕಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸುಭಾಶ್ ಸೇವಾ ಸಂಸ್ಥೆ, ಕಲಾಶಾಲೆ, ಪ್ರಜಾತಾರೆ ಮಕ್ಕಳಿಂದ ತಾಲ್ಲೂಕಿನ ಕಲಾ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಕುರಿತ ಅಭಿಯಾನದಲ್ಲಿ ಮಾತನಾಡಿದ ಮಕ್ಕಳು, ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಕಡಿಮೆ ಆಗುತ್ತಿದೆ. ಪರಿಸ್ಥಿತಿ ಈಗಿರುವ ರಾಸಾಯನಿಕ ಯುಕ್ತವಾದ ಗಣೇಶ ಮೂರ್ತಿಗಳನ್ನು ನೀರಿಗೆ ಬಿಡುವುದು ಸರಿಯಲ್ಲ ಎಂದರು.

ಈ ವೇಳೆ ಕಲಾ ಶಾಲೆಯ ಶಿಕ್ಷಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅನುರಾಧಾ ಮಾತನಾಡಿ, ನೈಸರ್ಗಕ ಸಂಪನ್ಮೂಲಗಳಲ್ಲಿ ನೀರು ಅಮೂಲ್ಯವಾದದ್ದು. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಮಕ್ಕಳೇ ಸ್ವ ಪ್ರೇರಣೆಯಿಂದ ಪರಿಸರ ಗಣೇಶ ಮೂರ್ತಿ ಕುರಿತು ಅಭಿಯಾನ ನಡೆಸುತ್ತಿರುವುದು ಸಂತಸದ ವಿಚಾರವೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಗಿನಾಡು ಲಯನ್ಸ್ ಕ್ಲಬ್ ನ ಮುಖಂಡ ಚಾಮರಾಜ್ ಮಾತನಾಡಿ, ಮಕ್ಕಳು ಪರಿಸರ ಕುರಿತು ಕಾಳಜಿ ವಹಿಸುತ್ತಿರುವುದು ಭವಷ್ಯದ ಕುರಿತು ಭರವಸೆ ಮೂಡುವಂತೆ ಮಾಡಿದೆ ಎಂದರು.

ಈ ವೇಳೆ ರಾಗಿನಾಡು ಲಯನ್ಸ್ ಕ್ಲಬ್ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆ ರೂಪಾ, ಅಭ್ಯುದಯ ಸೇವಾ ಸಂಸ್ಥೆಯ ಕುಸುಮಾ, ಪತ್ರಿಕಾ, ಮಾಲಿನಿ, ಕಾವ್ಯಾ, ವೀಣಾ, ಕಲಾಶಾಲೆಯ ಮಕ್ಕಳು ಹಾಗೂ ನ್ಯಾಯವಾದಿ ಪುರಷೋತ್ತಮ ಚಿಕ್ಕಹಾಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply