ಮನಸ್ಸುಗಳ ಕದಡಬೇಡಿ
ತಮ್ಮದೇ ಆದ ರೀತಿಯಲ್ಲಿ ದುಡಿಯುತ್ತಾ ಬದುಕನ್ನು ಕಟ್ಟಿಕೊಂಡು ಜೀವನವನ್ನು ನಡೆಸುತ್ತಿರುವ ಜನರ ಬದುಕಿಗೆ ಮಾರಕವಾಗುವ ರೀತಿಯಲ್ಲಿ, ಧರ್ಮ ಮತ್ತು ಇತರ ವಿಚಾರಗಳ ಮುಂದಿಟ್ಟುಕೊಂಡು ಮನಸ್ಸುಗಳ ಕದಡಬೇಡಿ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಎಲ್ಲರೂ ಅವರವರ ಪಾಡಿಗೆ ಹೊಂದಾಣಿಕೆಯೊಂದಿಗೆ ಪ್ರೀತಿ ವಿಶ್ವಾಸದಿಂದ ನೆಮ್ಮದಿಯೊಂದಿಗೆ ಹಳ್ಳಿ ಹಳ್ಳಿಯಲ್ಲಿ ಬದುಕುತ್ತಿದ್ದಾರೆ ಇಂತಹ ವಿಶ್ವಾಸ ಪ್ರೀತಿಯ ಬದುಕಿಗೆ ಬೆಂಕಿಯನ್ನು ಹಚ್ಚಬೇಡಿ.
ಕರೋನಾ ಸಂದರ್ಭದಲ್ಲಿ ಹೆಣಗಳು ಉರುಳಿ ಬಿದ್ದಾಗ, ಹೆಣಗಳ ಎತ್ತಿ ಸ್ಮಶಾನಕ್ಕೆ ಹೊತ್ತುಕೊಂಡು ಹೋಗಿ, ಸಂಸ್ಕಾರಗಳ ಮಾಡುವಲ್ಲಿ ಯಾವ ಜಾತಿ ಧರ್ಮಗಳು ನೆರವಿಗೆ ಬರಲಿಲ್ಲ, ಬಂದದ್ದು ಮಾನವ ಧರ್ಮವೊಂದೇ.
ಭೂಕಂಪನಗಳಾಗಿ, ಪ್ರವಾಹಗಳು ಬಂದು ಜೀವ ರಾಶಿಗಳು ಕೊಚ್ಚಿ ಹೋದಾಗ, ಹೆಣಗಳ ಎತ್ತಿ ಹಾಕಲು, ಬದುಕಿರುವವರ ಉಳಿಸಲು ಪ್ರಾಣದ ಹಂಗು ತೊರೆದು ದುಡಿಯುವ ಮಂದಿ ಯಾವ ಜಾತಿ ಧರ್ಮವನ್ನು ಎಣಿಸಿರುವುದಿಲ್ಲ..
ನಾವೆಲ್ಲಾ ಆರಾಧಿಸುವ ಮೂರ್ತಿಗಳ ಮಾಡುವ ಸಲುವಾಗಿ ಎಲ್ಲಿಂದಲೋ ಕಲ್ಲುಗಳ ಹೊತ್ತು ತಂದವರು ಯಾರೆಂಬುದು ಯಾರಿಗೆ ಗೊತ್ತು. ಗುಡಿ ಗೋಪುರಗಳ ಕಟ್ಟಿದವರು ಯಾರೆಂಬುದು ಯಾರಿಗೆ ಗೊತ್ತು. ದೇವರಿಗೆ ಅರ್ಪಿಸುವ ಪುಷ್ಪ, ನೈವೇದ್ಯಕ್ಕಾಗಿ ಬಳಸುವ ತೆಂಗಿನ ಕಾಯಿ ಬಾಳೆಹಣ್ಣುಗಳು ಯಾವ ಧರ್ಮದ ತೋಟದ್ದು ಯಾರಿಗೆ ಗೊತ್ತು, ಯಾವ ಧರ್ಮದವರ ಬೆವರು ಅದರಲ್ಲಿ ಬೆರೆತಿದೆಯೋ ಬಲ್ಲವರು ಯಾರು.
ಸಾಧು ಸಂತರು ಮೆಟ್ಟುವ ಮೆಟ್ಟು ಸಿದ್ಧಪಡಿಸಿದವರಾರು ಯಾರು ಅರಿತವರಾರು, ಅವರು ಧರಿಸುವ ಕಾವಿ ಬಟ್ಟೆಗಳ ನೇಕಾರ ಯಾರು, ತಿಳಿದಿದೆಯೇ ಯಾರ ಜಮೀನಿನ ಹತ್ತಿ ಇದರ ಮೂಲ ಬಲ್ಲವರು ಯಾರು.
ಇರುವುದು ಒಂದೇ ಸೂರ್ಯ, ಇರುವುದು ಒಂದೇ ಭೂಮಿ, ಎಲ್ಲರಿಗೂ ಅದೇ ನದಿ, ಅದುವೇ ಸಮುದ್ರಗಳು, ಮಳೆಯ ನೀರು ಎಲ್ಲರಿಗೂ ಒಂದೇ, ಹುಟ್ಟುವ ಸ್ಥಳವು ಒಂದೇ,ಸತ್ತಾಗ ಎಲ್ಲಾ ಹೆಣಗಳು ಕಸವೇ ಆದರೂ, ರೋಗಿಷ್ಟ ಮನಸ್ಸುಗಳು, ಮತ್ತೆ ಮತ್ತೆ ಬಿತ್ತುತ್ತಿದ್ದಾರೆ ಧರ್ಮದ ವಿಷ ಬೀಜಗಳ, ಇವರಿಗಿಲ್ಲ ಹಸಿವಿನ ಬಾಧೆ, ದುಡಿಯಬೇಕೆಂಬ ಅನಿವಾರ್ಯತೆ, ಮಾಡಲು ಇಲ್ಲ ಕೆಲಸಗಳು, ಅಸ್ತಿತ್ವಕ್ಕಾಗಿ ಇವರಿಗೆ ಗೊತ್ತಿರುವುದು ಒಂದೇ ಧರ್ಮ, ಜಾತಿ ಇವುಗಳ ಕಿಚ್ಚು ಹಚ್ಚುವುದು, ಆ ಬೆಂಕಿಯಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದು,
ಅರಿವಿರಲಿ ಪ್ರಚೋದಿಸುವ ಇವರುಗಳು ಯಾರು ಎಂದಿಗೂ, ಸತ್ತಿಲ್ಲ ಇವರ ಮನೆಯ ಮಂದಿಯು ಸತ್ತಿಲ್ಲ, ಸಾಯುವುದು, ನೋವು ತಿನ್ನುವುದು, ಬದುಕು ಕಳೆದುಕೊಳ್ಳುವುದು, ಇವರ ವಿಕೃತ ಮನಸ್ಸಿನ ಮಾತುಗಳ ನಂಬಿ ಹುಚ್ಚೆದ್ದು ಕುಣಿಯುವ ಮುಗ್ಧ ಮಂದಿ.
– ಕೆ ಎಸ್ ನಾಗರಾಜ್, ಬೆಂಗಳೂರು



