ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಕಿವಿಮಾತು
ಲೋಕಾಯುಕ್ತ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಾಗಾರ
ಚಿತ್ರದುರ್ಗ: ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮಾನವೀಯ ಮೌಲ್ಯಗಳು ಹಾಗೂ ಪ್ರಾಮಾಣಿಕತೆಯನ್ನು ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಂಡು ಜನಸೇವೆ ಮಾಡುವ ಮೂಲಕ ಉತ್ತಮ ಆಡಳಿತ ನೀಡಬೇಕು ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಕಿವಿಮಾತು ಹೇಳಿದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತಂತೆ ಶಿಕ್ಷಣ, ರೇಷ್ಮೆ, ಕೃಷಿ, ತೋಟಗಾರಿಕೆ ಇಲಾಖೆಗಳು, ಆರ್‍ಟಿಒ, ಸಬ್‍ರಿಜಿಸ್ಟರ್, ಸಮಾಜ ಕಲ್ಯಾಣ, ನ್ಯಾಯಾಂಗ ಹಾಗೂ ಇತರೆ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲೋಕಾಯುಕ್ತದಲ್ಲಿ 3 ರೀತಿಯಲ್ಲಿ ದೂರು ಸ್ಲಲಿಕೆಯಾಗುತ್ತವೆ. ಮೊದಲನೆಯದಾಗಿ ಸಾರ್ವಜನಿಕರು ನೇರವಾಗಿ ಸಲ್ಲಿಸುವ ದೂರುಗಳು, ಎರಡನೆಯದು ಸರ್ಕಾರ ತನ್ನ ನೌಕರರಿಂದ ಆದ ಕರ್ತವ್ಯ ಲೋಪವನ್ನು ಪರಿಶೀಲಿಸಿ ವಿಚಾರಣೆ ನಡೆಸಲು ಸಲ್ಲಿಸುವ ದೂರು, ಮೂರನೆಯದು ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರು ತಮ್ಮ ಗಮನಕ್ಕೆ ವಿಷಯಗಳ ಬಗ್ಗೆ ಸ್ವಯಂಪ್ರೇರಿತವಾಗಿ ದಾಖಲಿಸುವ ದೂರುಗಳು ಎಂದರು.
ಇವುಗಳನ್ನು ಸರ್ಕಾರಿ ಹಾಗೂ ಸಾರ್ವಜನಿಕ ನೌಕರರ ಮೇಲೆ ಮಾತ್ರ ಸಲ್ಲಿಸಬಹುದು. ಸರ್ಕಾರಿ ಹಾಗೂ ಸಾರ್ವಜನಿಕ ನೌಕರರ ಎಂದರೆ ಯಾರು ಎಂಬುದರ ಬಗ್ಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಬಂದ ದೂರುಗಳನ್ನು ಪರಿಶೀಲಿಸಲು ಲೋಕಾಯುಕ್ತಕ್ಕೆ ಜಿಲ್ಲಾ ನ್ಯಾಯಾಧೀಶರು, ಸಿವಿಲ್ ನ್ಯಾಯಾಧೀಶರು, ಆಡಳಿತ ವರ್ಗ ಹಾಗೂ ತಾಂತ್ರಿಕ ಸಲಹಾ ತಂಡಗಳು ಇವೆ ಎಂದರು.
ಈ ತನಿಖಾ ಪಡೆಗಳು ಬಂದ ದೂರು, ಅವುಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಟಿಪ್ಪಣಿ ನೀಡುತ್ತಾರೆ. ದೂರಿನಲ್ಲಿ ಮೇಲ್ನೋಟಕ್ಕೆ ಸಾಬೀತು ಆಗಬಹುದಾದ ಅಂಶಗಳಿವೆ ಎಂದು ಎನಿಸಿದಾಗ ಮಾತ್ರ ಲೋಕಾಯುಕ್ತ ಸರ್ಕಾರಿ ನೌಕರರಿಗೆ ನೋಟಿಸು ನೀಡಿ ವಿವರಣೆ ಕೇಳುತ್ತದೆ. ಕೆಲವು ಪ್ರಕರಣಗಳಲ್ಲಿ ಸಾಕ್ಷ್ಯಗಳ ಸಂಗ್ರಹಕ್ಕೆ ಸರ್ಚ್ ವಾರೆಂಟ್ ನೀಡಲಾಗುತ್ತದೆ. ಆದರೆ ಸಾಕಷ್ಟು ನೌಕರರು ನೋಟಿಸಿಗೆ ಉತ್ತರಿಸದೇ ಅಸಡ್ಡೆ ತೋರುತ್ತಾರೆ. ಇದರಿಂದಾಗಿ ವಿಚಾರಣೆಯ ವೇಳೆ ಸಂಕಷ್ಟ ಒಳಗಾಗುತ್ತಾರೆ. ಲೋಕಾಯುಕ್ತ ನೋಟಿಸಿಗೆ ಉತ್ತರಿಸದೇ ಇರುವುದು, ಲೊಕಾಯುಕ್ತ ಸೂಚನೆಗಳನ್ನು ಪಾಲಿಸದೇ ಇರುವುದು ನ್ಯಾಯಾಂಗ ಉಲ್ಲಂಘನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕವಾಗಿ ಸರ್ಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಯಾವುದೇ ಅಧಿಕಾರಿ, ನೌಕರರ ಮೇಲೆ ದುರುದ್ದೇಶಪೂರಿತವಾದ, ಸತ್ಯಾಂಶವಿಲ್ಲದ, ಅವಮಾನದ ಉದ್ದೇಶ, ಕಾನೂನು ಬಾಹಿರವಾಗಿ ತಮ್ಮ ಕೆಲಸ ಮಾಡಿಕೊಳ್ಳಲು ಯತ್ನಿಸುವ ನಿಟ್ಟಿನಲ್ಲಿ ಸುಳ್ಳು ದೂರು ದಾಖಲು ಮಾಡಿದ ಸಂದರ್ಭದಲ್ಲಿ, ಅಂತಹ ದೂರುದಾರನ ಮೇಲೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, 06 ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಂತಹ ನೌಕರರು ಕೂಡ ತಮಗಾದ ಅವಮಾನಕ್ಕಾಗಿ ನ್ಯಾಯ ಪಡೆಯಲು ಲೋಕಾಯುಕ್ತ ಸಂಸ್ಥೆಗೆ ಮನವಿ ಸಲ್ಲಿಸಬಹುದು. ಇದಕ್ಕೆ ಸರ್ಕಾರದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಅಲ್ಲದೆ ಅಂತಹ ಸುಳ್ಳು ದೂರುದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಈ ಅಂಶಗಳನ್ನು ಕೂಡ ಸರ್ಕಾರಿ ನೌಕರರು ಅರಿತಿರಬೇಕು ಎಂದರು.
ದೂರುಗಳಿಗೆ ನೌಕರರು ಸರಿಯಾದ ರೀತಿಯಲ್ಲಿ ವಿವರಣೆ ನೀಡಿದರೇ, ಪ್ರಾಥಮಿಕ ಹಂತದಲ್ಲಿಯೇ ಪ್ರಕರಣಗಳು ವಿಲೇವಾರಿಯಾಗುವ ಸಂದರ್ಭವಿರುತ್ತದೆ. ಇದು ಕಾಯ್ದೆಯಲ್ಲಿ ಸರ್ಕಾರಿ ನೌಕರರಿಗೆ ಒದಗಿಸಿರುವ ರಕ್ಷಣೆಯಾಗಿದೆ. ವಿವರಣೆಯೊಂದಿಗೆ ಅಗತ್ಯ ದಾಖಲೆಗಳನ್ನು ಸಹ ಸಲ್ಲಿಸಬಹುದು. ಪ್ರಕರಣ ದಾಖಲಾಗಿ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರು, ಸೂಕ್ತ ವಕೀಲರು ಅಥವಾ ಅನುಭವಿ ನೌಕರರ ಸಹಾಯವನ್ನು ಪಡೆಯಲು ಅವಕಾಶವಿದೆ. ಇಲ್ಲವಾದರೇ ಸ್ವತಃ ನೌಕರರೇ ಪ್ರಕರಣದಲ್ಲಿ ವಾದಿಸಬಹುದು. ವಿಚಾರಣೆ ನಂತರ ಆರೋಪ ಸಾಬೀತಾದರೆ ಲೋಕಾಯುಕ್ತ ಮುಚ್ಚಿದ ಲಕೋಟೆಯಲ್ಲಿ ಮುಂದಿನ ಕ್ರಮ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಈ ಸಂದರ್ಭದಲ್ಲಿಯೂ ಸಹ ಸರ್ಕಾರ ನೌಕರರಿಂದ ವಿವರಣೆ ಕೇಳುತ್ತದೆ. ಇದು ಸಹ ಕಾಯ್ದೆಯಲ್ಲಿ ನೌಕರರಿಗೆ ನೀಡಿರುವ ರಕ್ಷಣೆಯಾಗಿದೆ. ಇದನ್ನು ಉಪಯೋಗಿಸಿಕೊಂಡು ನೌಕರರು ದೂರು ಹಾಗೂ ಆರೋಪ ನಿರಾಧಾರವೆಂದು ಸಾಬೀತು ಮಾಡಬಹುದಾಗಿದೆ. ಮಾನವೀಯ ಮೌಲ್ಯಗಳ ಆಧಾರದಲ್ಲಿ ಕೆ.ಸಿ.ಎಸ್.ಆರ್ ನಿಯಮಾವಳಿಗಳ ರಚನೆ ಮಡಲಾಗಿದೆ. ಈ ನಿಯಮಗಳ ಪಾಲನೆ ಮಾಡದಿದ್ದರೆ, ಕಾನೂನಿನ ಉಲಂಘನೆ ಆಧಾರದಲ್ಲಿ ಶಿಕ್ಷೆ ವಿಧಿಸಲಾಗುವುದು. ಪ್ರತಿಯೊಬ್ಬ ಸರ್ಕಾರಿ ನೌಕರರು ಕೆ.ಎಸ್.ಎಸ್.ಆರ್ ನಿಯಾಮಾವಳಿ ಹಾಗೂ ಲೋಕಾಯುಕ್ತ ಕಾಯ್ದೆಯನ್ನು ಸರಿಯಾಗಿ ಓದಿ ತಿಳಿದುಕೊಳ್ಳಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಮಾತನಾಡಿ, ಎಲ್ಲರಿಗೂ ಸರ್ಕಾರಿ ನೌಕರಿ ಪಡೆಯುವ ಭಾಗ್ಯ ದೊರೆಯುವುದಿಲ್ಲ. ನೌಕರರು ಜಾಗೃತಿಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸರ್ಕಾರಿ ನೌಕರರಿಗೂ ಕೂಡ ಸಾಕಷ್ಟು ಒತ್ತಡವಿದೆ, ಸಿಬ್ಬಂದಿಯ ಕೊರತೆ, ಕಚೇರಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಆದಾಗ್ಯೂ ಇರುವಷ್ಟು ಸೌಲಭ್ಯಗಳ ನಡುವೆ ಸಾಧ್ಯವಾದಷ್ಟು ಉತ್ತಮ ಸೇವೆ ನೀಡಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಹಿರಿಯ ನ್ಯಾಯಧೀಶ ರೋಣ ವಾಸುದೇವ್, ಲೋಕಾಯುಕ್ತದ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ್, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯಕ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಮೊದಲಾದವರು ಹಾಜರಿದ್ದರು.



