ಬೆಂಗಳೂರು: ಬೆಂಗಳೂರಿಗರು ತಮ್ಮ ದೈನಂದಿನ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಬಳಸುವಂತೆ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲಾ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದ ವೇಳೆ ತುರ್ತಾಗಿ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಬೇಕಾಗಿದ್ದ ಕಾರಣ ಕೆಂಗೇರಿಯಿಂದ ವಿಧಾನಸೌಧದವರೆಗೆ ʻನಮ್ಮ ಮೆಟ್ರೋʼದಲ್ಲಿ ಸಾರ್ವಜನಿಕರ ಜೊತೆ ಪ್ರಯಾಣಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಮೆಟ್ರೋ ಸೌಲಭ್ಯವನ್ನು ಬಳಸುವುದರಿಂದ ವಾಯುಮಾಲಿನ್ಯ ತಪ್ಪಿಸುವುದರ ಜೊತೆಗೆ ಅಮೂಲ್ಯ ಸಮಯದ ಉಳಿತಾಯವಾಗಲಿದೆ. ಬೆಂಗಳೂರಿಗರು ತಮ್ಮ ದೈನಂದಿನ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆ ಬಳಸುವಂತೆ ನಾನು ಸಲಹೆ ನೀಡುತ್ತೇನೆ ಎಂದು ಹೇಳಿದ್ದಾರೆ.




