ದಾವಣಗೆರೆ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬಂಜಾರ (ಲಂಬಾಣಿ) ಜನಜಾಗೃತಿ ಅಭಿಯಾನ ಸಮಿತಿ ದಾವಣಗೆರೆ ಪ್ರೆಸ್ ಕ್ಲಬ್ ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಂಜಾರ ಸಮಿತಿ ಗೌರವ ಅಧ್ಯಕ್ಷ ರಾಘವೇಂದ್ರ ನಾಯಕ್, ರುದ್ರಪ್ಪ ಲಮಾಣಿಯವರು ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಿದ್ದು, ಮೊದಲ ಸಚಿವ ಸಂಪುಟದಲ್ಲಿಯೇ ಅವರನ್ನು ಸಚಿವರನ್ನಾಗಿ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಲಂಬಾಣಿ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದಂತೆ ಕಾಣುತ್ತದೆ ಎಂದರು.
ಬಂಜಾರ ಸಮುದಾಯ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ ಆಗಿತ್ತು. ಹಾಗಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಲಂಬಾಣಿಗರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು ಕೂಡ ಸಚಿವ ಸ್ಥಾನ ನೀಡುವಲ್ಲಿ ಲಂಬಾಣಿಗರನ್ನು ನಿರ್ಲಕ್ಷಿಸಲಾಗಿದೆ ಎಂದರು.
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಬಂಜಾರ ಸಮುದಾಯ ರಾಜಕೀಯವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯ. ಆ ಕಾರಣಕ್ಕೆ ಲಂಬಾಣಿ ಜನಾಂಗದವರಿಗೆ ರಾಜ್ಯಸಭೆ, ವಿಧಾನಪರಿಷತ್ ಮತ್ತು ಸರ್ಕಾರದ ನಿಗಮ ಮಂಡಳಿಗಳಲ್ಲಿ ಸಮಾನ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಹನುಮಂತನಾಯ್ಕ, ಆಲೂರಹಟ್ಟಿ ಗಂಗಾನಾಯ್ಕ, ರವಿನಾಯ್ಕ, ರಾಂಪುರ ಮಂಜುನಾಯ್ಕ, ಜಮಾಪುರ ಚಂದ್ರಶೇಖರ್ ನಾಯ್ಕ, ಶಾಂತನಾಯ್ಕ, ಬಂಜಾರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಿಂಗರಾಜ್ ನಾಯ್ಕ, ವೆಂಕಟೇಶ್ ನಾಯ್ಕ, ಕಾರ್ಪೋರೇಟರ್ ಮಂಜುನಾಯ್ಕ, ವೆಂಕಟೇಶ್ ನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಮೌಲಾನಾಯಕ್ ಮುಂತಾದ ಯುವ ಮುಖಂಡರು ಹಾಜರಿದ್ದರು.
ಹೊಳಲ್ಕೆರೆ ಲಂಬಾಣಿ ಸಮಾಜ ಆಗ್ರಹ: ರುದ್ರಪ್ಪ ಲಮಾಣಿ ಅವರಿಗೆ ಸಚಿವರನ್ನಾಗಿ ಮಾಡುವಂತೆ ಹೊಳಲ್ಕೆರೆ ತಾಲ್ಲೂಕು ಲಂಬಾಣಿ ಸಮಾಜದ ಮುಖಂಡರು ಆಗ್ರಹಿಸಿದರು.
ಸಭೆಯಲ್ಲಿ ರಾಘವೇಂದ್ರ ನಾಯ್ಕ, ನರೇನಹಳ್ಳಿ ಅರುಣ್ ಕುಮಾರ್, ಕಾರ್ಪೋರೇಟರ್ ಮಂಜು, ಜಾಮಾಪುರ ಚಂದ್ರಶೇಖರ್ ನಾಯ್ಕ, ಆರ್.ನುಲೇನೂರ ಪುಟ್ಟ ನಾಯ್ಕ,ಅಂತಪುರ ನಂದಿಹಳ್ಳಿ ಬಸವರಾಜ್ ನಾಯ್ಕ, ಹೊಳಲ್ಕೆರೆ ಲಂಬಾಣಿ ಹಟ್ಟಿ ಕುಮಾರ್ ನಾಯ್ಕ, ಚಂದ್ರುನಾಯ್ಕ ಹಾಜರಿದ್ದರು.



