ಬಂಜಾರ ಸಮುದಾಯದ ನೂತನ ಶಾಸಕರು, ಉಪ ಸಭಾಪತಿಗಳಿಗೆ ಸನ್ಮಾನ ಸಮಾರಂಭ

3 years ago

#Honoring #ceremony #MLA #DeputySpeakers #Banjara #community

ಒಳಮೀಸಲಾತಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗದಂತೆ ಒತ್ತಾಯಿಸಲು ನಿರ್ಣಯ ಸ್ವೀಕಾರ

ಬೆಂಗಳೂರು: ಬಂಜಾರ ವಿದ್ಯಾರ್ಥಿ ಹಾಗೂ ಇತರೆ ಸಂಘ-ಸಂಸ್ಥೆಗಳಿಂದ ಬಂಜಾರ ಜನಸ್ಪಂದನಾ ಹಾಗೂ ನೂತನ ಶಾಸಕರು, ಉಪ ಸಭಾಪತಿಗಳಿಗೆ ಸನ್ಮಾನ ಸಮಾರಂಭ ನಡೆಯಿತು.
ಬಂಜಾರ ವಿದ್ಯಾರ್ಥಿಗಳ ಸಂಘ, ಯುವಕರ ಸಂಘ ಹಾಗೂ ಇತರೆ ಬಂಜಾರ ಸಂಘ-ಸಂಸ್ಥೆಗಳು ಮತ್ತು ಸಾಹಿತಿ, ಕಲಾವಿದರ, ಚಿಂತಕರ ಒಕ್ಕೂಟದಿಂದ ಹಾಲಿ ಆಯ್ಕೆ ಹೊಂದಿರುವ ನೂತನ ಶಾಸಕರು ಹಾಗೂ ಉಪ ಸಭಾಪತಿಗಳಿಗೆ ಶಾಸಕರ ಭವನದ ಸಭಾಂಗಣದಲ್ಲಿಗೌರವಾರ್ಪಣೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಮನೋಹರ ಐನಾಪುರ ವಹಿಸಿದ್ದರು.
ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಉಪ ಸಭಾಪತಿ ರುದ್ರಪ್ಪ ಲಮಾಣಿ ಮುಂತಾದ ನಾಯಕರು ಗೌರವ ಸ್ವೀಕರಿಸಿದರು. ಸಮಾರಂಭದ ಆಯೋಜನಾ ಮಂಡಳಿಯಲ್ಲಿ ಮನೋಹರ ಐನಾಪುರ, ಡಾ.ಪರಮೇಶ್ ಮುಂತಾದವರು ಇದ್ದರು. ರಂಗತಜ್ಞ, ಕಲಾವಿದ ಡಾ.ಎ.ಆರ್.ಗೋವಿಂದಸ್ವಾಮಿ, ಕೆ.ಶಿವಮೂರ್ತಿ ಸಮಾರಂಭದಲ್ಲಿ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ಮುಂತಾದವರು ಉಪಸ್ಥಿತರಿದ್ದರು.
ಉಪ ಸಭಾಪತಿ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ವಿವಿಧ ಜಿಲ್ಲೆಗಳಿಂದ ಸಂಘ-ಸಂಸ್ಥೆಗಳಿಂದ ಆಗಮಿಸಿದ ಮುಖಂಡರು ತೆಗೆದುಕೊಂಡ ನಿರ್ಣಯಗಳು ಇಂತಿವೆ.

  1. ಸ್ವಾತಂತ್ರ್ಯ ನಂತರದಲ್ಲಿ ಇಷ್ಟು ವರ್ಷಗಳಾದರು ಸಮುದಾಯ ಆರ್ಥಿಕ ಪ್ರಗತಿ ಕಂಡಿಲ್ಲ. ಹೀಗಾಗಿ ಬಂಜಾರ ಸಮುದಾಯದ ಎಲ್ಲಾ ನಾಯಕರು ಪಕ್ಷಾತೀತವಾಗಿ ಒಂದಾಗಿ ಸಮುದಾಯ ಪ್ರಗತಿಗೆ ಸಂವಿಧಾನಾತ್ಮಕ ನೆಲೆಯಲ್ಲಿ ಕೆಲಸ ನಿರ್ವಹಿಸುವುದು. (Collectiveapprochನಲ್ಲಿ)
  2. ಬಂಜಾರರ ರಾಜ್ಯ ಮಟ್ಟದ ಉನ್ನತ ಮಟ್ಟದ ಚಿಂತಕರ ಛಾವಡಿ ರಚನೆ ಹಾಗೂ ಪ್ರಗತಿಗೆ ಪೂರಕವಾಗಿ ಸರ್ಕಾರದ ನೇಮಕಾತಿಗೆ ಸಾಧನೆ, ಪಾರದರ್ಶಕತೆ, ಪ್ರಾಮಾಣಿಕತೆ, ಭ್ರಷ್ಟಚಾರರಹಿತವಾದ, ಶೈಕ್ಷಣಿಕ ಅರ್ಹತೆ ಹಾಗೂ ಸಾಮಾಜಿಕ ಸಾಧನೆಯಂತಹ ಮಾನದಂಡಗಳನ್ನು ಪರಿಗಣಿಸಿ ನೇಮಿಸಲು ಒಂದು ಸಮಿತಿ ರಚನೆ ನಿರ್ಣಯ
  3. ಸ್ವಾರ್ಥ ನಾಯಕರನ್ನು, ಭ್ರಷ್ಟ ನಾಯಕರನ್ನು ಸಮಾಜದಿಂದ ರಾಜಕೀಯದಿಂದ ದೂರ ಇಡುವುದು, ಸಮುದಾಯಕ್ಕೆ ಪ್ರಾಮಾಣಿಕ ಸೇವೆ ಮಾಡುವವರನ್ನು ಮಾತ್ರ ಈ ಸಮಿತಿಯು ಶಾಸಕರಾಗಲು, ಲೋಕಸಭೆಗೆ ಸ್ಪರ್ಧಿಸಲು ಮತ್ತು ಸಚಿವರಾಗಲು, ಅಧ್ಯಕ್ಷರಾಗಲು ನಾಮ ನಿರ್ದೇಶನ ಮಾಡಲು ಶಿಫಾರಸ್ಸು ಮಡುವುದು.
  • ಮೀಸಲಾತಿಗೆ ಅನುಗುಣವಾಗಿನಮ್ಮ ಹಕ್ಕನ್ನು ವಿಶ್ವವಿದ್ಯಾಲಯಗಳು, ನಿಗಮ / ಮಂಡಳಿಗಳು / ಅಕಾಡೆಮಿಗಳು, ರಾಜಕೀಯ ಹಾಗೂ ಇತರೆ ವಲಯಗಳ ಪ್ರಾಧಿನಿಧಿತ್ವವನ್ನು ಸಂಪೂರ್ಣವಾಗಿ ಪಡೆಯುವುದು.
  • ಒಳಮೀಸಲಾತಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಯಾಗದಂತೆ ಒತ್ತಾಯಿಸುವುದು.
  • ಬಂಜಾರರ ಪರವಾಗಿ ಕೆಲಸ ನಿರ್ವಹಿಸುವ ಧರ್ಮ ಗುರುಗಳು, ಸಾಹಿತ್ಯ ಹಾಗೂ ಕಲಾ ವಿಭಾಗಗಳ ನಾಯಕರ, ಚಿಂತಕರ ಆಯ್ಕೆ ಮಾಡುವುದು.
  • ಬಂಜಾರ ಸಮಾಜ ಚಿಂತನಾತ್ಮಕವಾಗಿ, ಪ್ರಗತಿಗೆ ಪೂರಕವಾಗಿ, ನಿಸ್ವಾರ್ಥವಾಗಿ ಕೆಲಸ ಮಾಡುವವರನ್ನುಗುರುತಿಸುವುದು. ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ಸಮುದಾಯಕ್ಕೆ ಲೋಕಸಭಾ ಚುನಾವಣೆ ನಂತರ ಮಂತ್ರಿ ಸ್ಥಾನಕ್ಕಾಗಿ ಕೋರುವುದು.
  • ಉಪ ಸಭಾಪತಿ ಹುದ್ದೆಯನ್ನು ಸಮುದಾಯಕ್ಕೆ ನೀಡಿದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳಿಗೆ ಗೌರವಿಸುವುದು ಎಂದು ನಿರ್ಣಯಿಸಲಾಯಿತು.

ಸನ್ಮಾನ ಸ್ವೀಕರಿಸಿದ ಉಪ ಸಭಾಪತಿ ಮಾತನಾಡಿ, ಸಭಾಪತಿ ಹುದ್ದೆ ಪ್ರಮುಖವಾಗಿದ್ದು, ವಿರೋಧಪಕ್ಷದವರು ಹೇಳುವ“ಕೊಟ್ಟ ಕುದುರೆ ಏರಲಾರದವರು, ವೀರರೂ ಅಲ್ಲ, ಶೂರರು ಅಲ್ಲ”ಎಂಬ ಮಾತನ್ನು ಸವಲಾಗಿ ಸ್ವೀಕರಿಸಿ ಈ ಹುದ್ದೆ ಅಲಂಕರಿಸಿರುತ್ತೇವೆ ಎಂದರು.

ಸಮುದಾಯದವರನ್ನು ಸರ್ಕಾರದ ನಿಗಮ ಮಂಡಳಿ ಅಕಾಡೆಮಿ ಕೆಪಿಎಸ್ಸಿ ಮುಂತಾದ ಕಡೆ ನೇಮಿಸಲು ಶಾಸಕರು, ಲೋಕಸಭೆಗೆ ಆಯ್ಕೆ ಮಾಡಲು ಉನ್ನತ ಮಟ್ಟದ ರಾಜ್ಯವಾರು ಆಯ್ದ ಚಿಂತಕರ ಛಾವಡಿ ರಚಿಸಿ ಅಲ್ಲಿ ಪಾರದರ್ಶಕವಾಗಿ, ಮೆರಿಟ್ ಆಧಾರದ ಮೇಲೆ ಒಂದು ಮಾನದಂಡ ಮಾಡಿ ಅರ್ಹರನ್ನು ನೇಮಿಸುತ್ತೇವೆ, ಲಂಚ ಪಡೆಯುವುದಿಲ್ಲ, ಪ್ರಗತಿಗೆ, ಪ್ರತಿಭೆಗೆ, ಸಮೂದಾಯಕ್ಕೆ ಕೆಲಸ ಮಾಡಿರುವವರು, ಪ್ರಾಮಾಣಿಕರನ್ನು ನೇಮಿಸಲಾಗುವುದು. ಬಗರ್ ಹುಕ್ಕುಂ ಸಾಗುವಳಿ ಕೇಂದ್ರ ಸರಕಾರದಿಂದ ಅಡೆತಡೆ ನಿವಾರಣೆ ಮಾಡಲಾಗುವುದು ಎಂದರು.

ಸಮಾರಂಭದಲ್ಲಿ ಜಯದೇವ ನಾಯ್ಕ, ಸುಭಾಶ್ ರಾಥೋಡ್, ಮಧ್ಯಪ್ರದೇಶದ ನಾಯಕ ಡಾ. ಖಂಡೊಬ, ರಾಹುಲ್, ಹನುಮಂತ ನಾಯ್ಕ, ಬಾಬುಹೊನ್ನಾ ನಾಯಕ್, ವಸುಂದರ ಐನಾಪುರ, ವಕೀಲರಾದ ಮಲ್ಲೇಶ ನಾಯ್ಕ, ಗಜೇಂದ್ರ ನಾಯ್ಕ, ಮನು ರಾಠೋಡ್, ಲಕ್ಷ್ಮಣ ನಾಯಕ್, ಬಂಜಾರ ನಿಗಮದ ಎಂ.ಡಿ.ಶಿವಶಂಕರ್ ನಾಯಕ್ ಮುಂತಾದ ನಾಯಕರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು, ಕಲಾವಿದರು, ಚಿಂತಕರು ಉಪಸ್ಥಿತರಿದ್ದರು.

Leave a Reply