ಜ್ಞಾನಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರರ ಹುಟ್ಟು ಹಬ್ಬದ ದಿನ. ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಂತಹ ಚಂದ್ರಶೇಖರ್ ರವರಿಗೆ ಇಂದು 9ನೇ ವರ್ಷದ ಹುಟ್ಟುಹಬ್ಬ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ನಾಟಕಕಾರರಾಗಿ, ಕವಿಯಾಗಿ, ಚಲನಚಿತ್ರ ಗೀತೆ ರಚನಕಾರರಾಗಿ, ವಿಮರ್ಶಕರಾಗಿ, ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರದ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿರುವ ಇವರು ಇವರ ಒಟ್ಟಾರೆ ಸಾಹಿತ್ಯ ಕೃಷಿಗೆ ರಾಷ್ಟ್ರದ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.
ಜನವರಿ 2 1937 ರಲ್ಲಿ ಹುಟ್ಟಿದಂತ ಇವರು ಕನ್ನಡದಲ್ಲಿ ಅಪಾರವಾದ ಶ್ರದ್ಧೆಯಿಂದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿ ಉನ್ನತ ಮಟ್ಟದ ಶಿಕ್ಷಣವನ್ನು ಪಡೆದು ಹಲವಾರು ಪದವಿಗಳನ್ನು ಗಳಿಸಿರುತ್ತಾರೆ.
ಇವರ ನಾಟಕಗಳು ಮತ್ತು ಬರಹಗಳು ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಪರಿಚಯಿಸಿದೆ ಜೊತೆಗೆ ಗ್ರಾಮೀಣ ಪ್ರದೇಶದ ಬದುಕು ಇವರ ಬರಹದ ಮೂಲ ಆಶಯವಾಗಿದೆ.
ಇವರಿಗೆ ಎಸ್ಎಂ ಕೃಷ್ಣರವರು ವಿಧಾನ ಪರಿಷತ್ತಿಗೆ ನಾಮಕರಣ ಸದಸ್ಯರನ್ನಾಗಿ ನೇಮಕ ಮಾಡಿ ವಿಧಾನ ಪರಿಷತ್ತಿನಲ್ಲಿ ಆರು ವರ್ಷಗಳ ಕಾಲ ಸೇವೆ ಮಾಡಲು ಅವಕಾಶವನ್ನು ಕಲ್ಪಿಸಿಕೊಟ್ಟರು. ಇವರು ವಿಧಾನ ಪರಿಷತ್ ನಲ್ಲಿ ಗಂಭೀರವಾದ ವಿಚಾರಗಳನ್ನು ಪ್ರಸ್ತಾಪಿಸುತ್ತಾ ತಮ್ಮ ಸದಸ್ಯತ್ವವನ್ನ ನಾಡಿನ ಭಾಷೆ ಸಂಸ್ಕೃತಿ, ಇವುಗಳ ವಿಚಾರದಲ್ಲಿ ಹೆಚ್ಚಿನ ಬೆಳಕು ಚೆಲ್ಲಿರುತ್ತಾರೆ ಜೊತೆಗೆ ಕನ್ನಡ ಭಾಷೆಗೆ ತಂತ್ರಾಂಶವನ್ನು ರೂಪಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿರುತ್ತಾರೆ. ಕನ್ನಡಿಗರ ಅನೇಕ ಸಮಸ್ಯೆಗಳನ್ನು ಸರ್ಕಾರದ ಮುಂದೆ ಪ್ರಸ್ತಾಪಿಸಿ ಅವುಗಳಿಗೆ ಪರಿಹಾರವನ್ನು ದೊರಕಿಸಿ ಕೊಡುವಂತೆ ಶ್ರದ್ಧೆಯಿಂದ ಕರ್ತವ್ಯವನ್ನು ನಿರ್ವಹಿಸಿದ್ದಾರೆ.
ಜೋಕುಮಾರಸ್ವಾಮಿ, ಸಂಗ್ಯಾ ಬಾಳ್ಯಾ, ಹರಕೆಯ ಕುರಿ, ಆಲಿಬಾಬ, ನಾಯಿಕತೆ, ಶಿವರಾತ್ರಿ, ಬೋಳೇಶಂಕರ, ನೆರಳು ಮುಂತಾದ 30ಕ್ಕೂ ಹೆಚ್ಚು ನಾಟಕಗಳು, ಮಹಾಕಾವ್ಯ, ಕಾದಂಬರಿ, ಸಂಪಾದಿಸಿದ ಕೃತಿಗಳು, ಸಂಶೋಧನ ಕೃತಿಗಳು ಇವರ ಸಾಹಿತ್ಯ ಕೃಷಿಯ ಆಸ್ತಿಯಾಗಿರುತ್ತದೆ.
ಕಾಡು ಕುದುರೆ ಎಂಬ ಇವರ ಗೀತೆಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಜಾನಪದ ತಜ್ಞರಾಗಿ ಅಲ್ಲಿಯೂ ಸಹ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಠಾಗೂರ್ ಪ್ರಶಸ್ತಿ, ಕಾಳಿದಾಸ ಸನ್ಮಾನ ಪ್ರಶಸ್ತಿ, ಪಂಪ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಹೀಗೆ ಲೆಕ್ಕವಿಲ್ಲದಷ್ಟು ಗೌರವ ಇವರ ಸಾಹಿತ್ಯ ಸಾಧನೆಗೆ ಸಂದಿರುತ್ತದೆ. ಇವರ ಸಾಹಿತ್ಯ ಸೇವೆಯನ್ನ ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಗೌರವಿಸಿದೆ.
ಕನ್ನಡ ನಾಡು ಕಂಡಂತಹ ಬಹು ಪ್ರಕಾರದಲ್ಲಿ ಸಾಹಿತ್ಯ ಸೇವೆ ಸಲ್ಲಿಸಿರುವ ಪ್ರಮುಖರಲ್ಲಿ ಚಂದ್ರಶೇಖರ ಕಂಬಾರರು ಒಬ್ಬರಾಗಿರುತ್ತಾರೆ.
ಕನ್ನಡ ಭಾಷೆ ಇಂತಹ ಮಹಾನ್ ಪ್ರತಿಭಾವಂತರಿಂದ ಮತ್ತಷ್ಟು ಸಮೃದ್ಧವಾಗಿದೆ. ಇವರ ಸೇವೆ ಮತ್ತು ಸಾಹಿತ್ಯ ಕೃಷಿ ಮತ್ತಷ್ಟು ದಶಕಗಳ ಕಾಲ ಕನ್ನಡಕ್ಕೆ ದೊರೆಯುವಂತಾಗಲಿ.
– ಕೆ ಎಸ್ ನಾಗರಾಜ್, ಬೆಂಗಳೂರು




