ಈ ಸಲ ಗಣಪತಿ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆ ಒಟ್ಟಿಗೇ ಬಂದಿದ್ದ ಹಿನ್ನೆಲೆಯಲ್ಲಿ ಕೋಮು ಸೂಕ್ಷ್ಮ ಶಿವಮೊಗ್ಗದಲ್ಲಿ ಒಂದು ತಿಂಗಳಿಂದಲೂ ಪೊಲೀಸರು ಮತ್ತು ಜಿಲ್ಲಾಡಳಿತ ಮುತುವರ್ಜಿ ವಹಿಸಿದ್ದರು. ಯಾವುದೇ ರೀತಿಯಲ್ಲಿ ಶಾಂತಿ ಕದಡದಂತೆ ಎರಡೂ ಮೆರವಣಿಗೆಗಳು ಶಾಂತಿಯಿಂದ ನಡೆಯುವಂತೆ ಏರ್ಪಾಡು ಮಾಡಿದ್ದರು. ಶಿವಮೊಗ್ಗದ ಸೌಹಾರ್ದ ಸಹಬಾಳ್ವೆ ಬಯಸುವ ನಾಗರಿಕರು, ನಮ್ಮ ಕೆ ಪಿ ಶ್ರೀಪಾಲ್ ಅವರಂತಹ ವಕೀಲರು, ಹಿಂದು ಮುಸ್ಲಿಮ್ ಕ್ತೈಸ್ತ ದಾರ್ಮಿಕ ಮುಕಂಡರು ಎಲ್ಲರೂ ಈ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಇವರಿಗೆಲ್ಲರಿಗೂ ಅಬಿನಂದನೆಗಳು.
ಆದರೆ ನೆನ್ನೆ ಶಿವಮೊಗ್ಗದ ಒಂದು ಏರಿಯಾದಲ್ಲಿ ಒಂದು ಸಣ್ಣ ಅಹಿತಕರ ಗಟನೆ ನಡೆದಿದೆ. ಇದಕ್ಕೆ ಕಾರಣರಾದವರನ್ನೂ ಗುರುತು ಹಿಡಿಯಲಾಗಿದೆ. ಬಂದಿಸಲಾಗಿದೆ. ಈ ಮುಸುಕಿದಾರಿ ಕಿಡಿಗೇಡಿಗಳಲ್ಲಿ ಹಿಂದು – ಮುಸ್ಲಿಂ ಇಬ್ಬರೂ ಇರುವುದು ನೋಡಿದರೆ ಇದೊಂದು ಪೂರ್ವಯೋಜಿತ ಕೃತ್ಯ. ಆದರೆ ಇದನ್ನು ತಹಬಂದಿಗೆ ತರುವಲ್ಲಿ ಶಿವಮೊಗ್ಗ ಪೊಲೀಸರು ಮತ್ತು ಜಿಲ್ಲಾಡಳಿತ ನಡೆಸಿರುವ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.
ಆದರೆ, ಈ ಗಟನೆ ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಕೋಮುದ್ವೇಷ ಹರಡಲು ಪ್ರಯತ್ನ ಮಾಡಿರುವುದು ಸುವರ್ಣ ಟಿವಿ ವರದಿಗಾರ ರಾಜೇಶ್ ಕಾಮತ್ ಎಂಬ ಮುಟ್ಟಾಳ ಮತ್ತು ಟಿ ವಿ 9 ವರದಿಗಾರ. ಇವರಿಬ್ಬರು ಇಡೀ ಜಿಲ್ಲಾಡಳಿತ ಮತ್ತು ಪೊಲೀಸರ ಯಾವ ಪ್ರಯತ್ನಗಳನ್ನಾಗಲೀ, ಅಲ್ಲಿನ ವಾಸ್ತವಗಳನ್ನಾಗಲೀ ತೋರಿಸದೆ, ನಡೆದ ಗಟನೆಗಳನ್ನು ತಿರುಚಿ ಟಿವಿ ಚಾನಲ್ ಮೂಲಕ ತಪ್ಪು ಸಂದೇಶ ನೀಡುವ ಪ್ರಯತ್ನ ನಡೆಸಿದ್ದಾರೆ. ಮುಸ್ಲಿಮರ ವಿರುದ್ಧ ಹಿಂದುಗಳನ್ನು ಎತ್ತಿಕಟ್ಟುವ ಪ್ರಯತ್ನ ಎಡೆಬಿಡದೆ ಮಾಡಿದ್ದಾರೆ. ಇವರ ವರದಿ ನೋಡಿದರೆ ಇಡೀ ಶಿವಮೊಗ್ಗ ಹೊತ್ತಿ ಉರಿಯುತ್ತಿದೆ ಎನ್ನಬೇಕು. ಆದರೆ ಇಡೀ ಶಿವಮೊಗ್ಗ ಶಾಂತಿಯುತವಾಗಿಯೇ ಇದೆ.
ಈ ಹಿಂದೆ ಹಿಜಾಬ್ ಗಲಾಟೆ ಸಮಯದಲ್ಲಿ ಇಂತದೇ ಹಲ್ಕಾ ಕೆಲಸ ಮಾಡಿ ಕೊನೆಗೆ ಇಡೀ ಮಾದ್ಯಮ ಲೋಕಕ್ಕೆ ಕೆಟ್ಟ ಹೆಸರು ತಂದಿದ್ದು ಇದೇ ರಾಜೇಶ್ ಕಾಮತ್ ಎಂಬ ಚೆಡ್ಡಿ ಪತ್ರಕರ್ತ. ಕೊನೆಗೆ ಯಾವಾಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ನೋಟೀಸ್ ನೀಡಿ, ವಿಚಾರಣೆಗೆ ಕರೆಸಿತೋ ಆಗ ತಲೆ ತಗ್ಗಿಸಿಕೊಂಡು ಮುಚ್ಚಳಿಕೆ ಕೊಟ್ಟು ಬಂದಿದ್ದ ಇದೇ ರಾಜೇಶ್ ಕಾಮತ್.
ಇಲ್ಲಿ ಮಾದ್ಯಮದ ಹೊಣೆಗಾರಿಕೆ ಪ್ರಶ್ನೆ ಬರುತ್ತದೆ. ಒಂದು ಊರಿನಲ್ಲಿ ಅತವಾ ನಗರದಲ್ಲಿ ಯಾವುದೋ ಒಂದು ಏರಿಯಾದಲ್ಲಿ ಕೋಮು ಉದ್ವಿಗ್ನತೆ ಶುರುವಾದರೆ ಅದನ್ನು ಮಾದ್ಯಮ ಹೇಗೆಬಿತ್ತರಿಸಬೇಕು ಹೇಗೆ ಬಿತ್ತರಿಸಬಾರದು ಎಂಬುದನ್ನು ಒಬ್ಬ ಪತ್ರಕರ್ತ ಕಲಿತಿರಬೇಕು. ಅವನ ಕೆಲಸ ಸಮುದಾಯಗಳ ನಡುವಿನ ಹಗೆತನ ದೊಡ್ಡದು ಮಾಡಿ ತನ್ನ ಬೇಳೆಕಾಳು ಬೇಯಿಸಿಕೊಳ್ಳುವುದಲ್ಲ. ಬದಲಿಗೆ ಆ ಹಗೆತನ ಕಡಿಮೆ ಮಾಡಿ ಸಹಬಾಳ್ವೆ ಸಾದಿಸುವುದಾಗಿರಬೇಕು. ಒಂದು ವೇಳೆ ಈ ವಿಷಯದಲ್ಲಿ ಪೊಲೀಸ್ ಜಿಲ್ಲಾಡಳಿತ ಎಡವಿದರೂ ಅವರನ್ನು ಎಚ್ಚರಿಸಬೇಕಾದ ಹೊಣೆಗಾರಿಕೆ ಪತ್ರಕರ್ತ ಮತ್ತು ಮೀಡಿಯಾಗಳಿಗೆ ಇರುತ್ತದೆ. ಆದರೆ ಶಿವಮೊಗ್ಗದಲ್ಲಿ ಇದಕ್ಕೆ ತದ್ವಿರುದ್ದ. ಇಲ್ಲಿ ಪತ್ರಕರ್ತ ವೇಷದ ಕೋಮುಕ್ರಿಮಿನಲ್ ಗಳು ಬೆಂಕಿ ಹಚ್ಚಿ ಅದಕ್ಕೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.
ನಾನು ಒಬ್ಬ ಶಿವಮೊಗ್ಗ ಜಿಲ್ಲೆಯ ನಾಗರಿಕನಾಗಿ ಮತ್ತು ಪತ್ರಕರ್ತನಾಗಿ ಇದನ್ನು ಜಿಲ್ಲೆಯ ಜನರ ಹಿತದಿಂದಲೇ ಬರೆಯುತ್ತಿದ್ದೇನೆ. ಇಂತಹ ಮತಿಗೇಡಿ ಪತ್ರಕರ್ತರ ವೇಷದ ಗೋಮುಕ ಹುಲಿಗಳ ಕುರಿತು ನಾಗರಿಕರು ಎಚ್ಚರ ವಹಿಸಬೇಕಿದೆ. ಇವರು ಮಾದ್ಯಮದಲ್ಲಿ ಬಿಂಬಿಸುವುದನ್ನೇ ನಿಜ ಎಂದುಕೊಂಡರೆ ಮತ್ತಷ್ಟು ದ್ವೇಷ ವ್ಯಾಪಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನಾಗರಿಕರು ಇಂತಹ ಅವಿವೇಕಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಬೇಕು. ಇವರ ಚಾನೆಲ್ ಗಳ ಮುಕ್ಯಸ್ತರ ನೇಲೆ hate speech ಪ್ರಕರಣ ದಾಕಲಿಸಿ ಕ್ರಮ ಕೈಗೊಳ್ಳಬೇಕು.
– ಹರ್ಷಕುಮಾರ್ ಕುಗ್ವೆ, ಪತ್ರಕರ್ತ




