ಬೆಂಗಳೂರು: ರಾಜಾಜಿನಗರ ಬಿಜೆಪಿ ಮಂಡಲ ಯುವ ಮೋರ್ಚಾ ವತಿಯಿಂದ ಹೌದು ನಾನು ಹಿಂದೂ, ಕಾಶ್ಮೀರ ಪೆಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಹಿಂದೂಗಳ ಜಾಗೃತಿಗಾಗಿ ಸಿಗ್ನೇಚರ್ ಕ್ಯಾಂಪೇನ್(ಸಹಿ ಸಂಗ್ರಹ) ಮತ್ತು ಹುತಾತ್ಮರಿಗೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು.
- ಪ್ರತಾಪ್ ಸಿಂಹ ‘ದೇಶಭ್ರಷ್ಟರ’ ಪೋಸ್ಟ್ಗೆ ನೆಟ್ಟಿಗರ ಕಟು ವಿಮರ್ಶೆ
- ಹೆರಿಗೆಯಾದ ಗಂಟೆಯೊಳಗೆ ಮಗುವಿಗೆ ಎದೆಹಾಲು ನೀಡಿ: ಶಿವಾನಂದ ವಿ.ಪಿ
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
ರಾಜಾಜಿನಗರ ಹಳೆಯ ಪೊಲೀಸ್ ಠಾಣೆಯಿಂದ ಶ್ರೀರಾಮಮಂದಿರ ಡಾ.ರಾಜ್ ಪ್ರತಿಮೆ ವರಗೆ ಕ್ಯಾಂಡಲ್ ಲೈಟ್ ಮೂಲಕ ಮೌನ ಮೆರವಣಿಗೆ ನಡೆಯಿತು.
ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕ್ಯಾಂಡಲ್ ಲೈಟ್ ಮೌನ ಮೆರವಣಿಗೆಯಲ್ಲಿ ಭಾಗವಹಿಸಿ, ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಎಸ್.ಸುರೇಶ್ ಕುಮಾರ್, ಬಾಲ್ ಕೋಟ್ ನಲ್ಲಿ ಉಗ್ರರು ದಾಳಿ ನಂತರ ಪೆಹಲ್ಗಾಮ್ ದುರಂತದಲ್ಲಿ 27 ಜನ ಹುತಾತ್ಮರಾದರು. ಉಗ್ರರು ಕಲ್ಮಾ ಹೇಳಿ ಎಂದು ಕೇಳಿದ್ದಾರೆ. ಬರಲ್ಲ ಅಂದವರಿಗೆ ಗುಂಡಿಕ್ಕಿದ್ದಾರೆ. ಹಾಗಾದರೆ ನಾವು ಹಿಂದೂ ಎಂದು ಹೇಳುವುದು ತಪ್ಪಾ ಎಂದು ಪ್ರಶ್ನಿಸಿದರು.
ಯುವಕ ಮದುವೆಯಾಗಿ ಒಂದು ವಾರವಾಗಿತ್ತು ಮತ್ತು ಕರ್ನಾಟಕದ ಇಬ್ಬರು ಹುತಾತ್ಮರಾಗಿದ್ದಾರೆ.ನಾವು ಎಲ್ಲರು ಒಗ್ಗಾಟ್ಟಿಗಿದ್ದರೆ ಮಾತ್ರ ಬದುಕಲು ಸಾಧ್ಯ. ಎದೆ ತಟ್ಟಿ ಹೇಳಿ ನಾನು ಹಿಂದೂ ಎಂದು. ಪೆಹಾಲ್ಗಾಮ್ ದುರಂತಕ್ಕೆ ಎದಿರೇಟು ನೀಡಲು ಪ್ರಧಾನಿ ನರೇಂದ್ರಮೋದಿ ಸಜ್ಜಾಗಿದ್ದಾರೆ. ಭಾರತದ ಸೈನಿಕರಿಗೆ ಮತ್ತು ಹುತಾತ್ಮರಾದ ಕುಟುಂಬಗಳಿಗೆ ತಾಯಿ ಚಾಮುಂಡೇಶ್ವರಿ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಮಂಡಲ ಅಧ್ಯಕ್ಷ ಸುದರ್ಶನ್, ಪಾಲಿಕೆ ಮಾಜಿ ಸದಸ್ಯರುಗಳಾದ ಎಂ.ಮುನಿರಾಜು, ರಾಜಣ್ಣ, ಹೆಚ್.ಆರ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ದೀಪಾ ನಾಗೇಶ್ ಮತ್ತು ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್ ಯುವ ಮೋರ್ಚಾ ಅಧ್ಯಕ್ಷ ಸಂಜಯ್ ಕುಮಾರ್ ಮತ್ತು ಸ್ಥಳೀಯ ನಿವಾಸಿಗಳು, ಕಾರ್ಯಕರ್ತರು ಹಾಜರಿದ್ದರು.



