ಬೆಂಗಳೂರು: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆಪ್ಟಂಬರ್ 15, ಬೆಳಿಗ್ಗೆ 10 ಗಂಟೆಗೆ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದುವುದರ ಮುಖಾಂತರ ಪ್ರಜಾಪ್ರಭುತ್ವ ದಿನವನ್ನು ಆಚರಿಸಲು ನಿರ್ಧರಿಸಿದೆ.

ಆ ಮುಖಾಂತರ ಜಗತ್ತಿನ ಹೆಚ್ಚು ಜನರು ಏಕಕಾಲಕ್ಕೆ ಸಂವಿಧಾನದ ಪ್ರಸ್ತಾವನೆಯನ್ನು ಓದಿದ ವಿಶ್ವ ದಾಖಲೆಯನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿಕೊಂಡಿದೆ. ಪ್ರಯುಕ್ತ ಮಹತ್ವದ ಕಾರ್ಯದಲ್ಲಿ ತಾವೂ ಕೂಡ ಕೈಜೋಡಿಸಲು ಈ ಕೆಳಕಂಡ ಲಿಂಕ್ thepreamble-swdkar.in/#home ಮುಖಾಂತರ ಸೆಪ್ಟಂಬರ್ 12ರ, ಸಂಜೆ 6 ಗಂಟೆ ಒಳಗಾಗಿ ನೋಂದಣಿ ಮಾಡಿಕೊಂಡು, ಸೆಪ್ಟಂಬರ್ 15ರಂದು ಬೆಳಿಗ್ಗೆ 10 ಗಂಟೆಗೆ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗಲು ಕರೆ ನೀಡಲಾಗಿದೆ.



