ಟಿಕಾಯತ್ ಮೇಲೆ ಗುಂಡಿನ ದಾಳಿ: ದಾಳಿಕೋರರು ಯಾರು?

5 years ago

ಜೈಪುರ: ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಪ್ರಯಾಣಿಸುತ್ತಿದ್ದ  ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ. ಆಲ್ವಾರ್ ನ ತತಾರಪುರದ ಸರ್ಕಲ್ ಬಳಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ಯಾರಿಗೂ ತೊಂದರೆಯಾಗಿಲ್ಲ.

ಈ ಕುರಿತು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ರಾಕೇಶ್ ಟಿಕಾಯತ್, ಬಿಜೆಪಿ ಗೂಂಡಾಗಳು ನಮ್ಮ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ರೂಪಿಸಿ, ಜಾರಿಗೆ ತಂದಿದ್ದ ವಿವಾದಾಸ್ಪದ ಮೂರು ಕೃಷಿ ಮಸೂದಸೆಗಳ ವಿರುದ್ಧ ರೈತರಿಗೆ ಜಾಗೃತಿ ಮೂಡಿಸಲು ಹಾಗೂ ರೈತ ಹೋರಾಟವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ರಾಕೇಶ್ ಟಿಕಾಯತ್ ದೇಶಾದ್ಯಮತ ಸಂಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಸ್ತಾನದ ಅಲ್ವಾರ್ ಜಿಲ್ಲೆಯ ಹರಸೋಲಿಯಲ್ಲಿ ಆಯೋಜಿಸಲಾಗಿದ್ದ ರೈತ ಮಹಾ ಪಂಚಾಯತ್ ನಲ್ಲಿ ಭಾಗವಹಿಸಲು ಅವರು ತೆರಳಿದ್ದರು.

ಕಾರ್ಯಕ್ರಮ ಮುಗಿದ ನಂತರ ರಾಕೇಶ್ ಟಿಕಾಯತ್ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ದಾಳಿ ನಡೆಸಿದ ದುಷ್ಕರ್ಮಿಗಳು ಪರಾರಿಯಾದರು. ದಾಳಿಕೋರರು ಬಿಜೆಪಿ ಗೂಂಡಾಗಳು ಎಂದು ಆರೋಪಿಸಿರುವ ಟಿಕಾಯತ್ ಬೆಂಬಲಿಗರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ದಾಳಿ ನಡೆಸಿದ ವ್ಯಕ್ತಿಯನ್ನು ಕುಲದೀಪ್ ಯಾದವ್ ಎಂದು ಗುರುತಿಸಲಾಗಿದ್ದು, ಈತ ಬಿಜೆಪಿ ನಾಯಕರೊಂದಿಗೆ ನಂಟು ಹೊಂದಿದ್ದಾನೆ ಎಂದು ಪತ್ರಕರ್ತ ಮಂದೀಪ್ ಪುನಿಯಾ ಆರೋಪಿಸಿದ್ದಾರೆ.

ಟಿಕಾಯತ್ ಅವರ ಮೇಲೆ ನಡೆದ ದಾಳಿ ಕುರಿತು ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಮಂದೀಪ್, ಘಟನೆಯ ವಿವರ ಹಾಗೂ ಆರೋಪಿಯ ಹಿನ್ನೆಲೆಯನ್ನು ವಿವರಿಸಿದ್ದಾರೆ.

Leave a Reply