ಬೆಂಗಳೂರು: ನಮ್ಮ ರಕ್ಷಣೆಗೆ ಬ್ರಾಹ್ಮಣ ಸಮುದಾಯದ ಜನಪ್ರತಿನಿಧಿಗಳು ಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹೇಳಿದರು.
ರಾಜಾಜಿನಗರದ ಶಂಕರ ಸೇವಾ ಸಮಿತಿಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲ ವಿಪ್ರರಿಗೆ ನಮ್ಮ ರಾಜಾಜಿನಗರ ವಿಪ್ರ ಸ್ನೇಹ ಕೂಟ ವತಿಯಿಂದ ಮತದಾನ ಜಾಗೃತಿ ಬಗ್ಗೆ ವಿಪ್ರರ ಪಾತ್ರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ರವರ ಆಗಲಿಕೆಯಿಂದ ವಿಪ್ರ ಸಮುದಾಯ ಮತ್ತು ರಾಜ್ಯಕ್ಕೆ ಅಪಾರ ನಷ್ಟವಾಗಿದೆ. ಹಿಂದೂ ಎಂದು ಹೇಳುವುದು ಹೆಮ್ಮೆಯ ವಿಷಯವಾಗಿದೆ. ನನ್ನ ಧರ್ಮ ಪಾಲಿಸಿ, ಅಚರಣೆ ಮಾಡುವುದರಲ್ಲಿ ತಪ್ಪಿಲ್ಲ. ಇತ್ತಿಚೇಗೆ ದಿನಗಳಲ್ಲಿ ಬ್ರಾಹ್ಮಣರ ಮೇಲೆ ಅಕ್ರಮಣ ನಡೆಯುತ್ತಿದೆ ಎಂದರು.
ನಾಗಮೋಹನ್ ದಾಸ್ ವರದಿ ತಿರಸ್ಕಾರ ಮಾಡಿ ಎಂದು ಸರ್ಕಾರ ಹೇಳಿದೆ. ಮೀಸಲಾತಿ ಕೊಡಿ ಬೇಡ ಅನ್ನುವುದಿಲ್ಲ. ಕೇಂದ್ರ ಸರ್ಕಾರ ಶೇಕಡ 10 ಆರ್ಥಿಕವಾದ ದುರ್ಬಲರಿಗೆ ಮೀಸಲಾತಿ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದರು.
ರಾಜಕೀಯ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಬ್ರಾಹ್ಮಣರು ಪಾಲ್ಗೊಳ್ಳಬೇಕು. ಸರಳ ವ್ಯಕ್ತಿ ಎಸ್.ಸುರೇಶ್ ಕುಮಾರ್ ರವರಂತವರು ಗೆಲ್ಲಬೇಕು. ಬ್ರಾಹ್ಮಣ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಇರಬೇಕು ಮತ್ತು ಸಮುದಾಯದ ರಕ್ಷಣೆ ಬೇಕಾಗುತ್ತದೆ ಎಂದು ಹೇಳಿದರು.
ತೇಜಸ್ವಿನಿ ಆನಂತ್ ಕುಮಾರ್ ಮಾತನಾಡಿ, ರಾಜಾಜಿನಗರ ವಿದ್ಯಾವಂತರು ಇರುವ ಕ್ಷೇತ್ರ. ಅನಂತ್ ಕುಮಾರ್ ರವರು ರಾಜಾಜಿನಗರ ಕ್ಷೇತ್ರದ ಬಗ್ಗೆ ಅಪಾರ ಒಲವು ಹೊಂದಿದ್ದರು. ಜೀವನದ ಮುಂದಿನ ಗುರಿ ಎಂದರೆ ಮನುಷ್ಯ ಧರ್ಮ ಉಳಿಯಬೇಕು, ಧರ್ಮವನ್ನು ಉಳಿಸಿದವರು ವಿಪ್ರರು. ಪ್ರಜಾಪ್ರಭುತ್ವ ಪಡೆಯಲು ವಿಪ್ರರು ಕೊಡುಗೆ ನೀಡಿದ್ದಾರೆ. ವಿಪ್ರ ಉತ್ತಮ ಅವಕಾಶ ಸಿಗುತ್ತಿಲ್ಲ. ಆದರೂ ಧರ್ಮ ಮತ್ತು ಸಂಸ್ಕೃತಿ ಉಳಿಸಲು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
ಚಲನಚಿತ್ರ ನಟಿ ರೂಪ ಆಯ್ಯರ್ ಮಾತನಾಡಿ, ಬ್ರಾಹ್ಮಣರು ಮನೆಯಿಂದ ಹೊರಬರುವುದು ಕಷ್ಟ. ಯುವ ಸಮುದಾಯದವರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.
ಮತದಾನ ಯೋಗ್ಯರಿಗೆ ಮಾಡಬೇಕು, ಉತ್ತಮ ಜನಪ್ರತಿನಿಧಿಯನ್ನ ಆಯ್ಕೆ ಮಾಡಬೇಕು. ಬಿಜೆಪಿ ಪಕ್ಷದವರು ವಿಪ್ರ ಬಾಂದವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸತ್ಯಂ ಶಿವಂ ಸುಂದರಂ ಎನ್ನುವಂತೆ ಸತ್ಯದ ಕಡೆ ನಾವು ಇರಬೇಕು. ಬ್ರಾಹ್ಮಣರು ಪ್ರಜ್ಞಾವಂತರು, ಬುದ್ದಿವಂತರು. ಈ ಬಾರಿಗೆ ಬ್ರಾಹ್ಮಣ ಮತದಾನ ಮಾಡುವ ಜೊತೆಯಲ್ಲಿ ಅಕ್ಕಪಕ್ಕದ ಮನೆಯವರ ಸಹ ಬಿಜೆಪಿಗೆ ಮತ ಹಾಕುವಂತೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜಾಜಿನಗರ ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್, ಗುಜರಾತ್ ಶಾಸಕರಾದ ಅಶೋಕ್ ಬಾಯ್ ಪಟೇಲ್,ಖ್ಯಾತ ನಟಿ, ನಿರ್ದೇಶಕಿ ಡಾ.ರೂಪ ಆಯ್ಯರ್ ಬ್ರಾಹ್ಮಣ ಸಮುದಾಯದ ಮುಖಂಡರಾದ ರಾಮ್ ಪ್ರಸಾದ್, ಹರಿಪ್ರಸಾದ್ ಭಾಗವಹಿಸಿದ್ದರು.