ಬಿಜೆಪಿಗೆ ಈ ಬಾರಿ 130ಕ್ಕಿಂತ ಹೆಚ್ಚು ಸ್ಥಾನ: ಅಣ್ಣಾಮಲೈ

4 years ago

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ತಮಿಳುನಾಡು ಬಿಜೆಪಿ ಪಕ್ಷದ ಅಧ್ಯಕ್ಷ, ರಾಜ್ಯ ಉಸ್ತುವಾರಿಗಳಾದ ಅಣ್ಣಾಮಲೈ ಬೃಹತ್ ರೋಡ್ ಶೋ ಕಾರ್ಯಕ್ರಮ ಮಾಡಿದರು.

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್, ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಗುಜರಾತ್ ಗಾಂಧಿನಗರ ಶಾಸಕ ಅಶೋಕ್ ಭಾಯಿ ಪಟೇಲ್, ಉತ್ತರಖಂಡ್ ರಾಜ್ಯ ಮಾಜಿ ಸಚಿವ, ಶಾಸಕರಾದ ಅರವಿಂದ್ ಪಾಂಡೆ ಮತ್ತು ಮಂಡಲ ಬಿಜೆಪಿ ಅಧ್ಯಕ್ಷ ರಾಘವೇಂದ್ರರಾವ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಮುನಿರಾಜುರವರು ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿದ್ದರು.

ದಯಾನಂದನಗರ ಮತ್ತು ಪ್ರಕಾಶನಗರ ವಾರ್ಡ್ ನ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಕಾರ್ಯಕರ್ತರು ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿಗೆ ಈ ಬಾರಿ 130ಕ್ಕಿಂತ ಹೆಚ್ಚು ಸ್ಥಾನ ಬರಲಿದೆ, ಬೆಂಗಳೂರುನಗರದಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂದರು.

ನಾಡಿನ ಜನರ ಜೋಡಣೆ ಮಾಡಲು ನಾವು ಬಂದಿದ್ದೇವೆ, ಆದರೆ ಕಾಂಗ್ರೆಸ್ ಪಕ್ಷದವರು ಟಿಪ್ಪು ಜಯಂತಿ ಮಾಡಲು ಮುಂದಾಗಿದ್ದಾರೆ. ಇದರಿಂದ ಕರ್ನಾಟಕ ಹತ್ತು ವರ್ಷ ಹಿಂದೆ ಹೋಗುತ್ತದೆ. ಕಿಚಿಡಿ ಸರ್ಕಾರ ಬೇಡ ಸಂಪೂರ್ಣ ಬಹುಮತದಿಂದ ಸರ್ಕಾರ ಮಾಡಬೇಕು. ಪ್ರಧಾನಿ ನರೇಂದ್ರಮೋದಿರವರು ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ ಭೇಟಿ ನೀಡಲಿದ್ದಾರೆ ಎಂದರು.

ಸುರೇಶ್ ಕುಮಾರ್ ರವರು 5 ಬಾರಿ ಶಾಸಕರಾಗಿ ಉತ್ತಮ ಜನಸೇವೆ ಮಾಡಿದ್ದಾರೆ. ಅವರನ್ನು ಅತ್ಯಧಿಕ ಮತಗಳಿಂದ ಜಯಗಳಿಸುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಎಸ್.ಸುರೇಶ್ ಕುಮಾರ್ ಮಾತನಾಡಿ, ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದೆ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರು ಅತಿ ಹುಮಸ್ಸು, ಉತ್ಸಾಹದಿಂದ ಇದ್ದಾರೆ. ಮತದಾರರು ಸ್ವಯಂಪೇರಿತರಾಗಿ ಬಿಜೆಪಿ ಪರ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ, ಮತದಾರ ಆತ್ಮವಿಶ್ವಾಸದಿಂದ ಬಿಜೆಪಿ ಪಕ್ಷಕ್ಕೆ ಮೇ 10ನೇ ತಾರೀಖು ಮತ ನೀಡಲಿದ್ದಾನೆ ಎಂದು ಹೇಳಿದರು.

ಮಾಜಿ ಉಪ ಮಹಾಪೌರ ರಂಗಣ್ಣ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಕೀಲ ಮುನಿರಾಜು, ರಾಜಣ್ಣ, ರವೀಂದ್ರನ್, ಕೃಷ್ಣಪ್ಪ, ಪುಷ್ಪಲತಾ ರಾಜಣ್ಣ, ದೀಪಾ ನಾಗೇಶ್ ಪ್ರತಿಮಾರವರು ಭಾಗವಹಿಸಿದ್ದರು.

Leave a Reply