ಕುರುಹಿನ ಶೆಟ್ಟಿ ಸಮುದಾಯ ಸಂಘಟನೆ ಮತ್ತು ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಬಿ.ಲಿಂಗೇಶ್ವರ್ ಭರವಸೆ
ಬೆಂಗಳೂರು: ಕುರುಹಿನಶೆಟ್ಟಿ ಕೇಂದ್ರ ಸಂಘ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಬಿ.ಲಿಂಗೇಶ್ವರ್ ಅತ್ಯಧಿಕ ಮತಗಳು ಪಡೆದು ಆಯ್ಕೆಯಾದರು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಲ್ಲಿ ಮತಕೇಂದ್ರಗಳು ಸ್ಥಾಪಿಸಲಾಗಿತ್ತು. ನಾಲ್ಕು ಹಂತಗಳಲ್ಲಿ ಮತದಾನ ನಡೆದಿತ್ತು.
ಬಿಬಿಎಂಪಿ ಮಾಜಿ ಸದಸ್ಯರಾದ ರೂಪಲಿಂಗೇಶ್ವರ್, ಹಿರಿಯ ಮುಖಂಡರಾದ ಸೋಮಶೇಖರ್ ಮತ್ತು ಸಮಾಜದ ಮುಖಂಡರುಗಳು ಬಿ.ಲಿಂಗೇಶ್ವರ್ ಅವರಿಗೆ ಶುಭ ಕೋರಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ಲಿಂಗೇಶ್ವರ್ ಮಾತನಾಡಿ, ಕುರುಹಿನಶೆಟ್ಟಿ ಸಮುದಾಯ ರಾಜ್ಯದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಷ್ಟು ಇದ್ದಾರೆ. ಪ್ರಮುಖ ಉದ್ಯಮ ನೇಕಾರಿಕೆಯಾಗಿದೆ ಎಂದರು.
ಕುರುಹಿನಶೆಟ್ಟಿ ಸಮುದಾಯ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಹಿಂದೆ ಉಳಿದಿದೆ. ಸಮಾಜದ ಮುಖ್ಯವಾಹಿನಿಗೆ ತರಲು ನಮ್ಮ ಸಮುದಾಯದ ಸಂಘಟನೆ ಮಾಡುವುದು ಪ್ರಥಮ ಆದ್ಯತೆ ಎಂದರು.
ಬೆಂಗಳೂರು ನಗರ ಸಾಕಮ್ಮ ಭವನವದ ನವೀಕರಣ ಕಾರ್ಯ ಮತ್ತು ಶೈಕ್ಷಣಿಕವಾಗಿ ಅಭಿವೃದ್ದಿಯಾಗಲು ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ, ಸಹಕಾರ ಮತ್ತು ನೇಕಾರಿಕೆ ಮಾಡುವ ನಮ್ಮ ಸಮುದಾಯದವರಿಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಸಾಲ ಸೌಲಭ್ಯ, ವಸತಿ ಸೌಲಭ್ಯ ವಿವಿಧ ಯೋಜನೆಗಳನ್ನು ತಲುಪುವಂತೆ ಮಾಡುವ ಕಾರ್ಯ ಹಾಗೂ ಸಹಾಯ ನೀಡಲು ಮನವಿ ಮಾಡಲಾಗುವುದು ಎಂದರು.








