ವಿಕಲಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ, ವಿಶೇಷ ಶಿಕ್ಷಕರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ

1 year ago

ವಿಶೇಷ ಶಿಕ್ಷಕರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಹಾಸನ: ಪ್ರತಿ ವರ್ಷದಂತೆ ಡಿಸೆಂಬರ್ 03ರಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಆಚರಿಸುವ ಸಂಬಂಧವಾಗಿ, ವಿಕಲಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ, ವಿಶೇಷ ಶಿಕ್ಷಕರಿಗೆ ಮತ್ತು ವೈಯಕ್ತಿಕವಾಗಿ ನೀಡುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸಕ್ತಿ ಹೊಂದಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಶಿಕ್ಷಕರು ಮತ್ತು ವೈಯಕ್ತಿಕವಾಗಿ ದಿನಾಂಕ 30-09-2025 ರೊಳಗೆ ಅರ್ಜಿಗಳನ್ನು ತಮ್ಮ ಸಾಧನೆಯ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 9ನೇ ಕ್ರಾಸ್, ಕೆ.ಆರ್.ಪುರಂ, ಹಾಸನ. ದೂರವಾಣಿ ಸಂಖ್ಯೆ 08172-264546/295546 ನಿಗದಿತ ಅರ್ಜಿ ನಮೂನೆಗಾಗಿ ಮೇಲ್ಕಂಡ ವಿಳಾಸವನ್ನು ಸಂಪರ್ಕಿಸಲು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Leave a Reply