ಕುರುಬ ಸಮುದಾಯ ಎಸ್.ಟಿ.ಮೀಸಲಾತಿ ಕುರಿತು ಅಭಿಪ್ರಾಯ ಸಂಗ್ರಹ, ಚರ್ಚೆ
ಬೆಂಗಳೂರು: ಶಾಸಕರ ಭವನ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕುರುಬರ ಎಸ್/ಟಿ.ಹೋರಾಟ ಸಮಿತಿ ವತಿಯಿಂದ ಎಸ್.ಟಿ. ಮೀಸಲಾತಿ ಕುರಿತು ಕುರುಬ ಸಮುದಾಯದವರು ಅನಿಸಿಕೆ, ಅಭಿಪ್ರಾಯ ಮತ್ತು ಚರ್ಚೆ ನಡೆಸಲಾಯಿತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ, ಸಮುದಾಯದ ಮುಖಂಡರಾದ ಟಿ.ವಿ.ಬೆಳಗಾವಿ, ಬಿಬಿಎಂಪಿ ಮಾಜಿ ಸದಸ್ಯ ಬಿ.ಸೋಮಶೇಖರ್ರು, ಸಂಚಾಲಕರಾದ ಸಿ.ಎಂ.ನಾಗರಾಜು, ಶಿವರಾಜ್ ಕುಮಾರ್, ಜಗದೀಶ್ ಖನ್ನೂರು, ಬಿ.ಹರೀಶ್, ದಾಸೇಗೌಡ, ಪ್ರಧಾನ ಕಾರ್ಯದರ್ಶಿ ರವಿರಾಜ ಕಂಬಳಿ, 31 ಜಿಲ್ಲೆಗಳಿಂದ ಕುರುಬ ಸಮುದಾಯದ ಮುಖಂಡರು, ಸಂಘ, ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಕುರುಬರಿಗೆ ಮೀಸಲಾತಿಯ ಅವಶ್ಯಕತೆ ಇದೆ ಎಂದು ಹೋರಾಟಕ್ಕೆ ಬಂದಿದ್ದಾರೆ. ಕುರುಬರಿಗೆ ಎಸ್.ಟಿ. ಮೀಸಲಾತಿ 1996ರಲ್ಲಿ ಆರಂಭವಾಯಿತು. ಕುಲಶಾಸ್ತ್ರ ಅಧ್ಯಯನಕ್ಕೆ 80 ಲಕ್ಷ ರೂಪಾಯಿ ಬೇಕು ಎಂದು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿರವರಿಗೆ ಮನವಿ ಸಲ್ಲಿಸಿ ಕುಲಶಾಸ್ತ್ರ ಅಧ್ಯಯನಕ್ಕೆ ಚಾಲನೆ ನೀಡಲಾಯಿತು ಎಂದರು.
ಕುರುಬ ಸಮಾಜದ ಮಹಿಳೆಯರಿಗೆ ರಕ್ಷಣೆ ಇಲ್ಲ ಮತ್ತು ನಮ್ಮ ಸಮಾಜದವರ ಮೇಲೆ ಜಾತಿ ನಿಂದನೆ ಕೇಸು ದಾಖಲಿಸುತ್ತಿದ್ದಾರೆ. ಎಸ್.ಟಿ. ಹೋರಾಟಕ್ಕೆ ಸ್ವಾಮೀಜಿಗಳು, ಶಾಸಕರು ಬಂದರು ಸರಿಯೆ, ಬರದೇ ಇದ್ದರು ಸರಿಯೆ ನಮ್ಮ ಹೋರಾಟ ನಿಲ್ಲದು. ಕುರುಬರ ಮೀಸಲಾತಿ ಕುರಿತು ಕೇಂದ್ರ ಸರ್ಕಾರದಿಂದ 8 ತಿಂಗಳು ಹಿಂದೆ ಬಂದಿರುವ ಪತ್ರದ ಕುರಿತು ಸರ್ಕಾರ ಗಮನಹರಿಸಲಿಲ್ಲ ಎಂದರು.
ಕನಕದಾಸರಂತೆ ಪ್ರೀತಿಯಿಂದ ಮೀಸಲಾತಿ ಪಡೆಯೋಣ. ಕುರುಬರನ್ನ 2A ಸೇರಿಸಿ ಎಲ್.ಜಿ.ಹಾವನೂರು ಸೇರಿಸಿ ತಪ್ಪು ಮಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಕುರುಬರು ಶೇಕಡ 85ರಷ್ಟು ಮತ ನೀಡಿದ್ದೇವೆ. ಅಧಿಕಾರ ಹಂಚಿಕೆಯಲ್ಲಿ ಕುರುಬರಿಗೆ ಅನ್ಯಾಯವಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ ಚಳುವಳಿ ಮತ್ತು ಡಿಸೆಂಬರ್ ನಲ್ಲಿ ದೆಹಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಹೋರಾಟ ಮಾಡುವುದು ಅನಿವಾರ್ಯವಾಗಿದೆ. ನವದೆಹಲಿಯಲ್ಲಿ ಪ್ರತಿಭಟನೆ ಮೂಲಕ ಕೇಂದ್ರ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಟಿ.ವಿ.ಬೆಳಗಾವಿ ಮಾತನಾಡಿ, ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ಕೊಡಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನು ಭೇಟಿ ಮಾಡಿ, ಮನವವರಿಕೆ ಮಾಡಿಕೊಡಲಾಯಿತು. ರಾಜ್ಯದಲ್ಲಿ ಕುರುಬರು ಜನಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿ ಇದ್ದೀವಿ. ಪ್ರತಿ ಜಿಲ್ಲೆಯಲ್ಲಿ ಹೋರಾಟ ಮಾಡಬೇಕು ಎಂದರು.
ಬಿ.ಸೋಮಶೇಖರ್ ಮಾತನಾಡಿ, 2021ರಲ್ಲಿ ಕುರುಬರ ಸಮುದಾಯಕ್ಕೆ ಎಸ್.ಟಿ. ಮೀಸಲಾತಿಗಾಗಿ ಕಾಗಿನೆಲೆಯಿಂದ ಬೆಂಗಳೂರಿನ ವರಗೆ ಪಾದಯಾತ್ರೆ ಅತ್ಯಂತ ಯಶ್ವಸಿಯಾಗಿ ಜರುಗಿತು. ನಾವು ಯಾವ ಸಮುದಾಯದವರ ವಿರುದ್ದವಿಲ್ಲ, ಹಲವಾರು ವರ್ಷಗಳ ಹೋರಾಟವಿದೆ. ಎಸ್.ಟಿ.ಸಮುದಾಯಕ್ಕೆ ಕುರುಬರನ್ನು ಸೇರಿಸಬೇಕು ಎಂದು ಹೋರಾಟ ಮಾಡಲಾಗುವುದು ಎಂದರು.
2023ರಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಸರ್ಕಾರದಲ್ಲಿ ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು ಎಂದು ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ನಂಬಿಕೆ, ವಿಶ್ವಾಸಕ್ಕೆ ಪಾತ್ರವಾದ ಕುರುಬ ಸಮುದಾಯ. ನ್ಯಾಯಯುತ ಬೇಡಿಕೆಯಾಗಿದೆ. ನಮ್ಮ ಸಮಾಜದ ಸಿದ್ದರಾಮಯ್ಯರವರು ಎರಡು ಬಾರಿ ಮುಖ್ಯಮಂತ್ರಿಯಾಗಿರುವುದು ಸಂತಸದ ಸುದ್ದಿ. ರಾಜ್ಯಾದ್ಯಂತ ಸಭೆ ಮತ್ತು ಹೋರಾಟದ ಮೂಲಕ ಕುರುಬ ಸಮುದಾಯದ ಸ್ವಾಮಿಗಳು ಮತ್ತು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.




