ಬಿಜೆಪಿಯವರ ಉಪದೇಶ ನಮಗೆ ಬೇಕಿಲ್ಲ
ಶ್ರೀ ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿಗಳಾದಾಗ ದೇವಾಲಯಗಳಿಗೆ ನೀಡುತ್ತಿದ್ದ ತಸ್ತಿಕ್ ಹನ್ನೆರಡು ಸಾವಿರದಿಂದ 24,000 ಕ್ಕೆ ಏರಿಕೆಯನ್ನು ಮಾಡಿದರು. ಮತ್ತೆ 2015ರಲ್ಲಿ ಈ ಮೊತ್ತವನ್ನು 36,000ಕ್ಕೆ ಹೆಚ್ಚಿಸಿದರು. 2017ರಲ್ಲಿ ಈ ಮೊತ್ತವನ್ನು 48000ಗಳಿಗೆ ಏರಿಸಿದರು. ಮತ್ತೆ 2023ರಲ್ಲಿ ಇದರ ಮೊತ್ತ 60,000ಗಳಿಗೆ ಹೆಚ್ಚಾಗಿದೆ. ಈ ರೀತಿಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೇ ಈ ಮೊತ್ತವನ್ನು ಬೇರೆ ಎಲ್ಲಾ ಸರ್ಕಾರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯನ್ನು ಮಾಡಿ ದೇವಾಲಯಗಳ ದೈನಂದಿನ ಖರ್ಚಿಗೆ ಹೆಚ್ಚಿನ ನೆರವನ್ನು ನೀಡಿರುತ್ತಾರೆ.
ಅದೇ ರೀತಿಯಲ್ಲಿ ಆಯಾ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ಆಯಾ ದೇವಾಲಯಗಳ ಅಭಿವೃದ್ಧಿಗೆ ಬಳಸಬೇಕೆಂಬ ಕಟ್ಟುನಿಟ್ಟಿನ ಆದೇಶವನ್ನು ಸಹ ಹೊರಡಿಸಿರುತ್ತಾರೆ.
65 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಶೀಘ್ರ ದರ್ಶನದ ವ್ಯವಸ್ಥೆ, ದೇವಾಲಯಗಳಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕವಾದ ಕ್ಯಾಬಿನ್ ರಚಿಸಿ ಕೊಟ್ಟಿರುತ್ತಾರೆ.
ಮುಜರಾಯಿ ಇಲಾಖೆಗೆ ಶ್ರೀರಾಮಲಿಂಗ ರೆಡ್ಡಿಯವರು ಸಚಿವರಾಗುತ್ತಿದ್ದಂತೆ ಹೊಸ ರೀತಿಯ ಆಯಾಮವನ್ನು ನೀಡುತ್ತಾ ಬಂದಿರುತ್ತಾರೆ. ಮುಜರಾಯಿ ಇಲಾಖೆಗೆ ಶ್ರೀ ಗುಂಡೂರಾಯರು ಪ್ರತ್ಯೇಕವಾದ ಸಚಿವರನ್ನು ನೇಮಕ ಮಾಡಿದರು. ಅದೇ ರೀತಿಯಲ್ಲಿ ಪ್ರಥಮ ಬಾರಿಗೆ ಅರ್ಚಕರಿಗೆ ಸಂಬಳ ಮತ್ತು ಕೆಲವು ಸೌಕರ್ಯಗಳನ್ನು ಒದಗಿಸಿಕೊಟ್ಟರು.
ಶ್ರೀ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಸಣ್ಣ ದೇವಾಲಯಗಳ ಅಭಿವೃದ್ಧಿಗೆ ಆರಾಧನಾ ಎಂಬ ಹೊಸ ಯೋಜನೆ ಜಾರಿಗೆ ತಂದರು. ಈ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರಗಳು ಮುಜರಾಯಿ ದೇವಾಲಯಗಳಿಗೆ ಆದ್ಯತೆಯನ್ನು ನೀಡುತ್ತಾ, ಬದ್ಧತೆಯನ್ನು ಪ್ರದರ್ಶಿಸಿರುತ್ತಾರೆ.
ಬಿಜೆಪಿಯವರ ರೀತಿಯಲ್ಲಿ ನಮ್ಮ ಸರ್ಕಾರಗಳು ಕೇವಲ ಮಾತನಾಡುವ ಸರ್ಕಾರಗಳಾಗಿರಲಿಲ್ಲ. ನಮ್ಮ ಸರ್ಕಾರಗಳು ಕೆಲಸ ಮಾಡಿ ಜನರಿಗೆ ನ್ಯಾಯವನ್ನು ಕೊಟ್ಟಂತಹ ಸರ್ಕಾರಗಳಾಗಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಂದ ಹಿಂದೂ ಸಂಸ್ಕೃತಿಯ ಬಗ್ಗೆ, ಹಿಂದುತ್ವದ ಬಗ್ಗೆ ಉಪದೇಶ ಬೇಕಿಲ್ಲ. ಸಲಹೆಗಳೂ ಬೇಕಿಲ್ಲ.
– ಕೆ ಎಸ್ ನಾಗರಾಜ್., ಬೆಂಗಳೂರು




