ಹಿಂದೂಗಳಿಗಿಂತ ಮುಸ್ಲೀಮರು ಹೆಚ್ಚಿದ್ದಾರಂತೆ :
ಹೇಳಿಕೊಳ್ಳಲು ಯಾವ ಸಾಧನೆಗಳೂ ಇಲ್ಲದ ಬಿಜೆಪಿಗರು ಲೋಕಸಭಾ ಚುನಾವಣೆಯ ಕಾರಣಕ್ಕಾಗಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ನಗು ತರಿಸುವಂತಹ ಮಾತುಗಳನ್ನು ಕೆಲವು ದಿನಗಳಿಂದ ಹುಟ್ಟುಹಾಕುತ್ತಿದ್ದು ಇವರ ಮಾತಿಗೂ ಮತ್ತು ವಾಸ್ತವ ಸ್ಥಿತಿಗೂ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನು ಅಂಕಿ ಅಂಶಗಳೇ ನಮಗೆ ತಿಳಿಸಿಕೊಡುತ್ತವೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
1900 ನಂತರ ಅಂದರೆ, ಬಂಗಾಳ ವಿಭಜನೆಯಾಗಿ, ಪಂಜಾಬ್ ಭೂಮಿ ಒತ್ತುವರಿ ಕಾಯ್ದೆ, ಹಾಗೂ 1909 ರ ಭಾರತ ಕೌನ್ಸಿಲ್ ಕಾಯ್ದೆಯು ಮುಸ್ಲೀಮರಿಗೆ ಪ್ರತ್ಯೇಕ ಮತಕ್ಷೇತ್ರವನ್ನು ನೀಡಿದ ಮೇಲೆ ಮುಸ್ಲೀಮರ ಸಂಖ್ಯೆ ಹಿಂದೂಗಳಿಗಿಂತಲೂ ಹೆಚ್ಚುತ್ತಿದೆ ಎಂಬ ಮಾತುಗಳು ಹೆಚ್ಚು ಮುನ್ನಲೆಗೆ ಬರುತ್ತಿವೆ.
2004 ರಲ್ಲಿ ಉತ್ತರ ಗುಜರಾತ್ ಪ್ರಾಂತ್ಯದ ವಿಶ್ವ ಹಿಂದೂ ಪರಿಷತ್ ನ ಕಾರ್ಯಾಧ್ಯಕ್ಷರಾಗಿದ್ದ ಚಿನುಭಾಯಿ ಪಟೇಲ್ ಅವರು 2001 ನೇ ಜನಗಣತಿಯ ವೇಳೆಗೆ ಮುಸ್ಲೀಮರ ಜನಸಂಖ್ಯೆಯು 36% ನಷ್ಟು ಹೆಚ್ಚಾಗಿದ್ದು “ಕ್ರಮೇಣ ಭಾರತವು ಹಿಂದೂ ರಾಷ್ಟ್ರದಿಂದ ಮುಸ್ಲಿಂ ರಾಷ್ಟ್ರವಾಗುವ ಅಪಾಯವಿದೆ” ಎಂದು ಹೇಳಿದ್ದರು. ಇನ್ನು 2019 ರ ಅಕ್ಟೋಬರ್ ನಲ್ಲಿ ಬಿಜೆಪಿ ನಾಯಕರಾದ ಸುರೇಂದ್ರ ಸಿಂಗ್ ಅವರು ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ತರದೇ ಇದ್ದರೆ ಮುಂದಿನ 50 ವರ್ಷಗಳ ಅವಧಿಯಲ್ಲಿ ಹಿಂದುತ್ವ ಅಪಾಯಕ್ಕೆ ಸಿಲುಕಲಿದೆ ಎಂದು ಅವರು ಹೇಳಿದ್ದರು.
ಆದರೆ ಜನಸಂಖ್ಯೆಗೆ ಸಂಬಂಧಿಸಿದ ಈ ಭ್ರಮೆಗಳನ್ನು ಎಸ್.ವೈ ಖುರೇಶಿಯವರು ತಮ್ಮ ಸುದೀರ್ಘ ಅಧ್ಯಯನ ಮತ್ತು ಸಮೀಕ್ಷೆಗಳಿಂದ ಸಂಗ್ರಹಿಸಿದ ಬೃಹತ್ ಮಾಹಿತಿಯ ಮೂಲಕ ಕಳಚುವ ಪ್ರಯತ್ನ ಮಾಡಿದ್ದಾರೆ. ಇವರ ಅಧ್ಯಯನದ ಪ್ರಕಾರ ಕಳೆದ 70 ವರ್ಷಗಳಲ್ಲಿ ಎಂದಿಗೂ ಕೂಡಾ ಮುಸ್ಲೀಮರ ಜನಸಂಖ್ಯೆಯು ಹಿಂದೂಗಳ ಜನಸಂಖ್ಯೆಗೆ ಸವಾಲಾಗೇ ಇಲ್ಲ.
ಅಷ್ಟೇ ಏಕೆ?
ಮುಂದಿನ 2101 ನೇ ಇಸವಿಯಲ್ಲಿ ಈಗಿನ ಜನಸಂಖ್ಯಾ ಅಭಿವೃದ್ಧಿ ದರದಲ್ಲಿ ಭಾರತದ ಜನಸಂಖ್ಯೆಯು 1.7 ಬಿಲಿಯನ್ ಇರಲಿದ್ದು ಈ ಪೈಕಿ ಹಿಂದೂಗಳು 1.27 ಬಿಲಿಯನ್ ಹಾಗೂ ಮುಸ್ಲೀಮರ ಸಂಖ್ಯೆ 320 ಮಿಲಿಯನ್ ಇರಲಿದೆ.
ಒಂದು ವೇಳೆ ಭಾರತವೇನಾದರೂ ವಿಶ್ವಸಂಸ್ಥೆ ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಅಂಶಗಳನ್ನು ಸರಿಯಾಗಿ ಅಳವಡಿಸಿಕೊಂಡಿದ್ದೇ ಆದರೆ 2100 ನೇ ಇಸವಿಯ ಹೊತ್ತಿಗೆ ಭಾರತದ ಜನಸಂಖ್ಯೆಯು 929 ಮಿಲಿಯನ್ ಗೆ ಇಳಿಕೆಯಾಗಲಿದೆ ಎಂದು ಕಳೆದ ವರ್ಷದ ಲಾನ್ಸೆಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು ಚುನಾವಣೆಯ ಕಾರಣಕ್ಕಾಗಿ ಜನರಲ್ಲಿ ಭಯ ಮೂಡಿಸುವ ಯತ್ನ ಮಾಡುತ್ತಿರುವ ಬಿಜೆಪಿ ಮತ್ತದರ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿರುವ ಮಾಧ್ಯಮಗಳು ಕೂಡಲೇ ಸುಳ್ಳುಗಳನ್ನು ಹರಡುವ ತಮ್ಮ ಪ್ರವೃತ್ತಿಗೆ ಕಡಿವಾಣ ಹಾಕಬೇಕು.
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ


