ವಕ್ಫ್ ಆಸ್ತಿಯ ಸಂರಕ್ಷಣೆ ವಿಷಯದಲ್ಲಿ ಅತಿದೊಡ್ಡ ವಿವಾದ ಸೃಷ್ಟಿಸುವ ಅನಗತ್ಯ ಹುನ್ನಾರ ನಡೆಸುತ್ತಿರುವ ಬಿಜೆಪಿಗರು ಕಾಂಗ್ರೆಸ್ ಅವಧಿಯಲ್ಲಿ ವಕ್ಫ್ ಹೆಸರಲ್ಲಿ ರೈತರ ಜಮೀನುಗಳಿಗೆ ನೋಟಿಸ್ ನೀಡಿ ಅದನ್ನು ಕಿತ್ತುಕೊಳ್ಳಲಾಗುತ್ತಿದೆ, ಹಿಂದೂಗಳಿಗೆ ಇದರಿಂದ ಅಪಾಯವಿದೆ ಎಂಬ ಸುಳ್ಳುಗಳನ್ನು ಹರಿ ಬಿಡುತ್ತಿದ್ದಾರೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಆದರೆ ಅಂಕಿ ಅಂಶಗಳನ್ನು ಗಮನಿಸಿದರೆ ಕಾಂಗ್ರೆಸ್ ಅವಧಿಯಲ್ಲಿ ಭೂಮಾಲೀಕರಿಗೆ 1201 ನೋಟಿಸ್ ಗಳನ್ನು ನೀಡಿದ್ದರೆ ಬಿಜೆಪಿಗರು ಬರೋಬ್ಬರಿ 1735 ನೋಟಿಸ್ ಗಳನ್ನು ಹೊರಡಿಸಿದ್ದಾರೆ.
ವಿಷಯವೇ ಅಲ್ಲದ ವಿಷಯದಲ್ಲಿ ರಾಜಕೀಯ ಮಾಡುತ್ತಿರುವಾಗಲೂ ಇವರದ್ದೇ ಸಮಸ್ಯೆ ಇಟ್ಟುಕೊಂಡ ಬಿಜೆಪಿಗರು ನಮ್ಮ ಸರ್ಕಾರದ ಮೇಲೆ ಅಪಪ್ರಚಾರ ಮಾಡುತ್ತಿದ್ದು ಇದಕ್ಕೆ ಈಗಾಗಲೇ ಇವರು ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಆಡಳಿತದ ಗಂಧ ಗಾಳಿ ಇಲ್ಲದೇ, ವಿರೋಧ ಪಕ್ಷದ ಜವಾಬ್ದಾರಿಯೂ ತಿಳಿಯದೇ ವರ್ತಿಸುತ್ತಿರುವ ಬಿಜೆಪಿಗರಿಂದ ಕೇವಲ ಹಿಂದೂಗಳು ಮಾತ್ರವಲ್ಲದೇ ಎಲ್ಲ ವರ್ಗದವರೂ ತೊಂದರೆಗೆ ಒಳಗಾಗಿದ್ದಾರೆ.
ಇಂತಹ ಪಕ್ಷಗಳು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕಿಂತ ತಮ್ಮ ಪಕ್ಷವನ್ನು ತಾವೇ ವಜಾಗೊಳಿಸಿಕೊಂಡರೆ ಜನರಿಗೆ ಮಹದುಪಕಾರ ಮಾಡಿದಂತೆ ಆಗುತ್ತದೆ
– ಡಾ ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




