ವಕ್ಫ್ ಬೋರ್ಡ್ ನೋಟೀಸ್ ಕುರಿತಂತೆ ಬಿಜೆಪಿಗರ ದುರುದ್ದೇಶವನ್ನು ದಾಖಲೆ ಸಮೇತ ಸೋಮವಾರ ಕಂದಾಯ ಸಚಿವರು, ವಸತಿ ಮತ್ತು ವಕ್ಫ್ ಸಚಿವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯದ ಜನತೆಯ ಗಮನಕ್ಕೆ ತಂದಿದ್ದೇವೆ.
ಪತ್ರಿಕಾಗೋಷ್ಠಿಗೂ ಮುನ್ನ ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಿದ್ದೇವೆ.
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
ಜಿಲ್ಲೆಯ ಹೊನವಾಡ ಗ್ರಾಮಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ಕಂತೆ ಕಂತೆ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಅಲ್ಲಿನ ರೈತರಿಗೆ ವಕ್ಫ್ ಬೋರ್ಡ್ ನಿಂದ ಒಂದೇ ಒಂದು ನೋಟೀಸ್ ಕೂಡ ಜಾರಿಯಾಗಿಲ್ಲ.
ಬಿಜೆಪಿಗರು ಹೇಳುವಂತೆ ಹೊನವಾಡದಲ್ಲಿ ವಕ್ಫ್ ಆಸ್ತಿ ಇರುವುದು 1,200 ಎಕರೆ ಜಮೀನಲ್ಲ. 11 ಎಕರೆ ಮಾತ್ರ. (ಇದು ಬಹುತೇಕ ಸ್ಮಶಾನಭೂಮಿ) ಇಲ್ಲಿ ಯಾವೊಬ್ಬ ರೈತರಿಗೂ ಅನ್ಯಾಯವಾಗಿಲ್ಲ.
ವಕ್ಫ್ ಆಸ್ತಿ ಹೆಸರಿನಲ್ಲಿ ಬಿಜೆಪಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಉಪಚುನಾವಣೆ ಹತ್ತಿರ ಬಂದಿರುವುದರಿಂದ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವುದು ಅತ್ಯಂತ ಹೇಯ!
ಆಪರೇಷನ್ ಕಮಲದ ಸರಕಾರವಿದ್ದಾಗ 2022ರಲ್ಲಿ ಹಲವಷ್ಟು ರೈತರಿಗೆ ನೋಟೀಸ್ ನೀಡಲಾಗಿದ್ದು, ಇವುಗಳನ್ನು ಈಗಾಗಲೇ ಬಹಿರಂಗ ಪಡಿಸಿದ್ದೇವೆ. ಬಿಜೆಪಿಗರ ಸತ್ಯಶೋಧನಾ ಸಮಿತಿಗೆ ದಮ್ಮು ತಾಕತ್ತು ಇದ್ದರೆ ಈ ಕುರಿತಂತೆ ಮೊದಲು ಉತ್ತರ ನೀಡಲಿ!
ಅಧಿಕಾರವಿದ್ದಾಗ 40% ಕಮೀಷನ್… ಹಿಜಾಬ್ ಹಲಾಲ್ , ಕೇಸರಿ ಶಾಲುಗಳಲ್ಲೇ ಕಾಲಹರಣ ಮಾಡಿದ್ದರು. ಉಪಚುನಾವಣೆಯ ವೇಳೆಯಲ್ಲಿ ಮೇಲೆದ್ದು ಮೊಸಳೆ ಕಣ್ಣೀರು ಸುರಿಸಿದರೆ ರಾಜ್ಯದ ಜನತೆ ನಂಬುವುದಿಲ್ಲ.
– ಎಂ ಬಿ ಪಾಟೀಲ್, ಬೃಹತ್ ಕೈಗಾರಿಕಾ ಸಚಿವ




