ರಾಜ್ಯದಲ್ಲಿ ಬಿಜೆಪಿ ನಾಯಕರು 40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಲೋಕಾಯುಕ್ತದಿಂದ ಬಂದಿದೆ ಎಂದು ಹೇಳಲಾಗುವ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಕ್ಷಮೆ ಕೇಳಬೇಕೆಂದು ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ನಿಜಕ್ಕೂ ಇವರಿಗೆ ನೈತಿಕತೆ ಇದ್ದರೆ ಈ ಹಿಂದೆಯೇ ಕಾಂಗ್ರೆಸ್ ಪಕ್ಷಕ್ಕೆ ಹತ್ತಾರು ಬಾರಿ ಕ್ಷಮೆ ಕೇಳಬೇಕಾಗಿತ್ತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ತರಂಗಗಳ ಹಂಚಿಕೆ ಪ್ರಕರಣವನ್ನು ದೊಡ್ಡ ಹಗರಣವೆಂದು ಬಿಂಬಿಸಿ ಎರಡು ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರವೆಂದು ದೇಶವಿದೇಶಗಳಲ್ಲಿ ಪ್ರಚಾರವನ್ನು ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಎಷ್ಟೊಂದು ಮಾನಸಿಕ ಹಿಂಸೆಯನ್ನು ಕೊಟ್ಟಂತಹ ಬಿಜೆಪಿಯವರು ಸಿಬಿಐ ನ್ಯಾಯಾಲಯದಲ್ಲಿ ತರಂಗಗಳ ಹಂಚಿಕೆಯ ಪ್ರಕರಣ ರದ್ದಾದ ಸಂದರ್ಭದಲ್ಲಿ ಯಾಕೆ ಕ್ಷಮೆಯನ್ನು ಕೇಳಲಿಲ್ಲ?
ಇದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 2013ರಿಂದ 2018ರ ಅವಧಿಯಲ್ಲಿ ಡಿ ಕೆ ರವಿ ಸಾವಿನ ಪ್ರಕರಣ ಹಾಗೂ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ ಹಾಗೂ ಹಿಂದೂ ಕಾರ್ಯಕರ್ತರ ಸಾವಿನ ಪ್ರಕರಣಗಳನ್ನು ದೊಡ್ಡ ಸುದ್ದಿ ಮಾಡಿ ಕಾಂಗ್ರೆಸ್ ಸರ್ಕಾರದ ಸಚಿವರು ಇದರ ಹಿಂದೆ ಇದ್ದಾರೆ. ಇದೊಂದು ಕೊಲೆ ಎಂಬ ರೀತಿಯಲ್ಲಿ ನಾಡಿನಾದ್ಯಂತ ಸುದ್ದಿಯನ್ನ ಮಾಡಿ, ಯಾವುದೇ ಸಂಬಂಧವಿಲ್ಲದ ಕೆಜೆ ಜಾರ್ಜ್ ಬಳಿಯಲ್ಲಿ ಎರಡೆರಡು ಬಾರಿ ರಾಜೀನಾಮೆಯನ್ನು ಪಡೆದುಕೊಂಡು, ಅವರಿಗೆ ಎಷ್ಟೊಂದು ಮಾನಸಿಕ ಹಿಂಸೆಯನ್ನ ಕೊಟ್ಟಿದ್ದನ್ನು ಮರೆತುಬಿಟ್ಟಿದ್ದೀರಾ?
ಈ ಎಲ್ಲ ಪ್ರಕರಣಗಳ ಕುರಿತು ಸಿಬಿಐ ತನಿಖೆಯಿಂದ ಸತ್ಯ ಹೊರಬಂದು, ಇವುಗಳಲ್ಲಿ ಇವುಗಳಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಅವರುಗಳ ಸಾವಿನ ಹಿಂದೆ ಮಂತ್ರಿಗಳ ಕೈವಾಡವು ಇಲ್ಲ ಎನ್ನುವುದು ತೀರ್ಪಿನಿಂದ ಸತ್ಯ ಬಹಿರಂಗವಾಯಿತು. ಈ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಕ್ಷಮೆಯನ್ನು ಕೇಳಲು ನೆನಪು ಬರಲಿಲ್ಲವೇ?
ಇದೇ ರೀತಿಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದಾಗೆಲ್ಲ, ರಾಜ್ಯ ಸರ್ಕಾರದ ಮೇಲೆ ಹಗರಣಗಳ ಆರೋಪಗಳನ್ನ ಮಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಆರೋಪಕ್ಕೂ ಸಾಕ್ಷಿಯನ್ನು ಕೊಟ್ಟಿರುವುದಿಲ್ಲ ಮತ್ತು ಆರೋಪಗಳನ್ನ ಸಾಬೀತುಪಡಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರು ಸಹ ರಾಜ್ಯದ ಜನತೆಗೆ ಕ್ಷಮೆಯನ್ನು ಕೇಳಬೇಕು. ಈ ರೀತಿಯಲ್ಲಿ ಕ್ಷಮೆಗಳನ್ನ ಕೇಳುತ್ತಾ ಹೋದರೆ ಬಿಜೆಪಿಯವರೇ ಹತ್ತಾರು ಬಾರಿ ಕಾಂಗ್ರೆಸ್ ನಾಯಕರ ಬಳಿ ಬಹಿರಂಗವಾಗಿ ಕ್ಷಮೆಯನ್ನು ಕೇಳಬೇಕಾಗುತ್ತದೆ. ಮೊದಲು ಅವರು ಆ ಕೆಲಸವನ್ನು ಮಾಡಲಿ. ನಂತರ ಉಳಿದ ವಿಚಾರವನ್ನು ಮಾತನಾಡಲಿ.
40% ಕಮಿಷನ್ ಆರೋಪವನ್ನು ಮಾಡಿದ್ದು ಗುತ್ತಿಗೆದಾರರ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಕೆಂಪಯ್ಯನವರು. ಈಗ ಅವರು ಇಲ್ಲದೇ ಇರುವುದರಿಂದ ಕ್ಷಮೆಯನ್ನು ಯಾರಿಂದ ನಿರೀಕ್ಷಿಸಲು ಸಾಧ್ಯವಿದೆ? ಅಷ್ಟು ಬೇಕಿದ್ದರೆ ಕೆಂಪಯ್ಯನವರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಲಿ!
– ಕೆ ಎಸ್ ನಾಗರಾಜ್, ಬೆಂಗಳೂರು




