ಪರಿಸರಕ್ಕೆ ಒಳಿತು ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುವುದು
ಬೆಂಗಳೂರಿನಲ್ಲಿ ನಡೆದ 9ನೇ ವಾರ್ಷಿಕ “ಸಾಧ್ಯತೆಗಳ ವಾರ”
ಯುವ ವಿದ್ಯಾರ್ಥಿಗಳಿಗೆ ನೆರವಾಗಲು ಸ್ವಯಂ ಸೇವಕರಾದ ಆ್ಯಬ್ವೀ ಉದ್ಯೋಗಿಗಳು
ಬೆಂಗಳೂರು: ಔಷಧಗಳು ಮತ್ತು ಪರಿಹಾರೋತ್ಪನ್ನಗಳನ್ನು ರಚಿಸುವುದರ ಮೇಲೆ ಗಮನಹರಿಸಿರುವ ಜಾಗತಿಕ ಬಯೋಫಾರ್ಮಾಸ್ಯೂಟಿಕಲ್ ಕಂಪನಿ ಆಗಿರುವ ಆ್ಯಬ್ವೀ (Abbvie) ಒಂಭತ್ತನೇ ವಾರ್ಷಿಕ ‘ವೀಕ್ ಆಫ್ ಪಾಸಿಬಿಲಿಟೀಸ್’ (ಸಾಧ್ಯತೆಗಳ ವಾರ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಇದು ಜಾಗತಿಕ ಮಟ್ಟದ ಸ್ವಯಂಸೇವಕ ಕಾರ್ಯಕ್ರಮವಾಗಿದ್ದು, ಸ್ಥಳೀಯ ಸಮುದಾಯಗಳಿಗೆ ನೆರವು ನೀಡಲು ಉದ್ಯೋಗಿಗಳೆಲ್ಲಾ ಒಂದಾಗಿ ದುಡಿಯುವ ಉದ್ದೇಶವನ್ನು ಹೊಂದಿದೆ. 2024ರ 10ನೇ ಜೂನ್ ನಿಂದ 50 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸಾವಿರಾರು ಆ್ಯಬ್ವೀ ಉದ್ಯೋಗಿಗಳು ವಿಶ್ವಾಸಾರ್ಹವಾದ ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ಸಮುದಾಯ ಪಾಲುದಾರರ ಜೊತೆ ಸಹಯೋಗ ಮಾಡಿಕೊಂಡು ಸ್ಥಳೀಯ ಸಮುದಾಯಗಳಿಗೆ ಪ್ರಯೋಜನ ಒದಗಿಸುವ ಮತ್ತು ಆ ಮೂಲಕ ಪ್ರಪಂಚದಾದ್ಯಂತ ಇರುವ ಸಾವಿರಾರು ಮಂದಿಯ ಮೇಲೆ ಪರಿಣಾಮ ಬೀರುವ ಯೋಜನೆಗಳಲ್ಲಿ ಪಾಲ್ಗೊಂಡಿದ್ದಾರೆ.
ಈ ವರ್ಷ, ಮುಂಬೈ, ಚೆನ್ನೈ, ನವದೆಹಲಿ ಮತ್ತು ಬೆಂಗಳೂರು ನಗರಗಳಲ್ಲಿ ಬಹು ನಿರೀಕ್ಷಿತ ‘ವೀಕ್ ಆಫ್ ಪಾಸಿಬಿಲಿಟೀಸ್’ (ಸಾಧ್ಯತೆಗಳ ವಾರ) ಕಾರ್ಯಕ್ರಮ ನಡೆದಿದೆ.
ಈ ಕುರಿತು ಮಾತನಾಡಿದ ಆ್ಯಬ್ವೀ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಜನರಲ್ ಮ್ಯಾನೇಜರ್ ಸುರೇಶ್ ಪಟ್ಟತ್ತಿಲ್, “ಆ್ಯಬ್ವೀಯ ನಾವೆಲ್ಲರೂ ಸ್ವಯಂಸೇವಕರಾಗಿ ಬೆಂಗಳೂರಿನಲ್ಲಿರುವ ನಮ್ಮ ಸ್ಥಳೀಯ ಸಮುದಾಯಗಳಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಉರ್ದು ಶಾಲೆಯ ಕುರಿತು ತಿಳಿಸಿದ ಐವಾಲಂಟಿಯರ್ ಸಂಸ್ಥೆಯ ಜೊತೆ ಸಹಯೋಗ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ನಮ್ಮ ವಾರ್ಷಿಕ ‘ವೀಕ್ ಆಫ್ ಪಾಸಿಬಿಲಿಟೀಸ್’ ಕಾರ್ಯಕ್ರಮದ ಸಮಯದಲ್ಲಿ ಸಾವಿರಾರು ಆ್ಯಬ್ವೀ ಉದ್ಯೋಗಿಗಳು ತಮ್ಮ ಸ್ಥಳೀಯ ಸಮುದಾಯಗಳಿಗೆ ನೆರವಾಗುತ್ತಾರೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಆ್ಯಬ್ವೀ ಇಂಡಿಯಾದ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ನತಾಶಾ ತಿವಾರಿ, “ಆ್ಯಬ್ವೀ ಫೌಂಡೇಶನ್ ವಿವಿಧ ಸ್ವಯಂಸೇವಕ ಚಟುವಟಿಕೆಗಳ ಮೂಲಕ ಸ್ಥಳೀಯ ಸಮುದಾಯಗಳಲ್ಲಿ ಬದಲಾವಣೆ ಮಾಡಲು ಜಾಗತಿಕವಾಗಿ ಉದ್ಯೋಗಿಗಳನ್ನು ಒಂದುಗೂಡಿಸುತ್ತದೆ. ಆ ಮೂಲಕ ಸಮುದಾಯಗಳ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಒಳಿತಿಗೆ ಹಾಗೂ ಪರಿಸರಕ್ಕೆ ಒಳಿತು ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುವುದು” ಎಂದು ಹೇಳಿದರು.
ಬೆಂಗಳೂರಿನಲ್ಲಿ ಸ್ವಯಂಸೇವಕರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಜೊತೆ ದಿನವನ್ನು ಅತ್ಯುತ್ತಮವಾಗಿ ಆನಂದಕರವಾಗಿ ಕಳೆದರು. ಗುಂಪಿನ ಚಟುವಟಿಕೆಗಳು ಎರಡು ಅವಧಿಯಲ್ಲಿ ನಡೆದವು. ಮೊದಲಾರ್ಧದಲ್ಲಿ, ಐವಾಲಂಟಿಯರ್ ಪ್ರತಿನಿಧಿ ಸ್ವಯಂಸೇವಕರಿಗೆ ‘ಫಾಸ್ಟ್ ಫ್ಯಾಶನ್ ಮತ್ತು ಜವಳಿ ತ್ಯಾಜ್ಯದಿಂದ ಉಂಟಾಗುವ ಸಮಸ್ಯೆಗಳು’ ಎಂಬ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಟಿ-ಶರ್ಟ್ ಅನ್ನು ಸರಳವಾಗಿ ಹೇಗೆ ಬಟ್ಟೆಯ ಚೀಲ ಮಾಡಬಹುದು ಎಂಬುದರ ಕುರಿತು ತರಬೇತಿ ನೀಡಿದರು. ದ್ವಿತೀಯಾರ್ಧದಲ್ಲಿ, ಸ್ವಯಂಸೇವಕರನ್ನು 1 ಅಥವಾ 2 ವಿದ್ಯಾರ್ಥಿಗಳ ಜೊತೆ ಸೇರಿಸಿ ಅವರಿಗೆ ಟಿ-ಶರ್ಟ್ ಅನ್ನು ಸರಳವಾಗಿ ಬಟ್ಟೆಯ ಚೀಲ ಮಾಡುವ ಕುರಿತು ತರಬೇತಿ ನೀಡಲಾಯಿತು. ನಂತರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ನೀಡಲಾಯಿತು.




