ಕಲಘಟಗಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳಿಗೆ ಕಿವಿ ಆಗಲು ಬಂದಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ತಾಲೂಕಿನ ವಿವಿಧ ರೈತ ಸಂಘಟನೆಗಳ ಪ್ರಮುಖರು, ರೈತರು ಹಸಿರು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಕಳೆದ ಮೂರನಾಲ್ಕು ತಿಂಗಳು ಬಾಧಿಸಿದ್ದ ಬರಗಾಲ ಸಮಯದಲ್ಲಿ ರೈತರ ಮನವಿಗಳಿಗೆ ಸ್ಪಂದಿಸಿ, ಜನ,ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು, ಮೇವು ಬ್ಯಾಂಕ್ ತೆರೆದು ರೈತರ ಬೇಡಿಕೆಗಳಿಗೆ ದಿವ್ಯ ಪ್ರಭು ತಕ್ಷಣ ಸ್ಪಂದಿಸಿದ್ದರು.
ಕಲಘಟಗಿ ಪಟ್ಟಣಕ್ಕೆ ಆಗಮಿಸಿದ್ದ ದಿವ್ಯ ಪ್ರಭು ಅವರನ್ನು ಉಳವಪ್ಪ ಬಳಿಗಾರ, ನಿಜಗುಣಿ ಕೆಲಗೇರಿ, ರಾಮಣ್ಣ ಬಾರಕೇರ, ವಸಂತ ಡಾಕಪ್ಪನವರ, ಮಹಾದೇವ ಕಂಠೆಪ್ಪನವರ,ಯಲ್ಲಪ್ಪ ಧರೆಣ್ಣವರ ನೇತೃತ್ವದಲ್ಲಿ ರೈತರು ಡಿಸಿ ಅವರಿಗೆ ಗೌರವ ಸಲ್ಲಿಸಿದರು. ದಿವ್ಯ ಪ್ರಭು ಅವರ ಕಾರ್ಯಗಳ ಕುರಿತು ವೇದಿಕೆಯಲ್ಲಿ ಮಾತನಾಡಿದರು.




