ಬೆಂಗಳೂರು: ಕೆಪಿಸಿಸಿ ಕಛೇರಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೆಂಗಳೂರು ನಗರ ಪಾಲಿಕೆ ವಾರ್ಡ್ ವಿಂಗಡನೆ ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕಾರ್ಯಾಧ್ಯಕ್ಷ, ಸಂಸದ ಜಿ.ಸಿ.ಚಂದ್ರಶೇಖರ್, ಬಮೂಲ್ ಮಾಜಿ ಅಧ್ಯಕ್ಷ, ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷರಾದ ಸೌಮ್ಯ ರೆಡ್ಡಿ, ಹಿರಿಯ ಮುಖಂಡರಾದ ಬಿ.ಎಲ್.ಶಂಕರ್, ವಿ ಆರ್ ಸುದರ್ಶನ್, ಕೆ ಎಸ್ ಉಗ್ರಪ್ಪ, ಬಿಬಿಎಂಪಿ ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಸೂರಜ್ ಹೆಗಡೆ, ಶ್ರೀನಿವಾಸ್, ನಾಗರಾಜ್ ಯಾದವ್ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಮಂಜುನಾಥಗೌಡ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, 3ರಿಂದ 5 ಪಾಲಿಕೆಯಾಗಬೇಕು ಎಂದು ಸಮಿತಿ ವರದಿ ನೀಡಿತ್ತು. ಬೆಂಗಳೂರು ನಗರದ ಹಿತದೃಷ್ಟಿಯಿಂದ 5 ಪಾಲಿಕೆ ಮಾಡಿರುವುದು ಒಳ್ಳೆಯದು. ಬಿಜೆಪಿ ಕಾಂಗ್ರೆಸ್, ಜೆಡಿಎಸ್ ಪಕ್ಷದ ಎಲ್ಲರು ಒಪ್ಪಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಯಿತು. ಬಿಜೆಪಿಯವರು ವಿಧಾನಸಭೆಯಲ್ಲಿ ಮಾತ್ರ ವಿರೋಧ ಮಾಡಿದರು ಎಂದರು.
5 ಪಾಲಿಕೆ ಗೆಲ್ಲುವಂತಹ ಜವಾಬ್ದಾರಿ ಇದೆ. ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. ಶಕ್ತಿ ಯೋಜನೆಯಲ್ಲಿ 570 ಕೋಟಿ ಬಾರಿ ಮಹಿಳೆಯರು ಪ್ರಯಾಣಿಸಿದ್ದಾರೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳಿಂದ ಸಾರ್ವಜನಿಕರಿಗೆ ಉಪಯೋಗವಾಗಿದೆ. 140 ಕಿಲೋ ಮೀಟರ್ ಮೇಲು ಸೇತುವೆ ನಿರ್ಮಿಸಲಾಗುತ್ತಿದೆ. ಎರಡು ಟನಲ್ ರೋಡ್ ನಿರ್ಮಾಣದಿಂದ ವಾಹನ ಸಂಚಾರ ದಟ್ಟಣೆ ತಪ್ಪಲಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ 8000 ಕೋಟಿ ಸಾಲ ಮಾಡಿ ಇಟ್ಟುಹೋಗಿದ್ದರು. ಬಿಜೆಪಿ ಸರ್ಕಾರ ಬಂದಾಗ ಸಾಲ ಮಾಡಿ ಹೋಗುತ್ತಾರೆ. ಬಿಬಿಎಂಪಿಯಲ್ಲಿ ಎರಡು ಬಾರಿ ಆಡಳಿತ ಮಾಡಿದ ಬಿಜೆಪಿ ಯಾವುದೇ ಸಾಧನೆ ಮಾಡಿಲ್ಲ. ಬಿಜೆಪಿಯವರು ಒಂದು ಮೇಲು ಸೇತುವೆ ನಿರ್ಮಿಸಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರದ ಅವಧಿಯಲ್ಲಿ ಬೆಂಗಳೂರು ನಗರ ಸಾಕಷ್ಟು ಅಭಿವೃದ್ದಿಯಾಗಿದೆ. ಬಿಬಿಎಂಪಿಗೆ 110 ಹಳ್ಳಿ ಸೇರಿಸಿದ ಬಿಜೆಪಿಯವರು ಕುಡಿಯಲು ನೀರು ಕೊಟ್ಟಿಲ್ಲ. ಬಿಬಿಎಂಪಿ ಬಿಜೆಪಿ ಆಡಳಿತ ಅವಧಿಯಲ್ಲಿ ಕಸದ ಸಮಸ್ಯೆ ಕುರಿತು ಅಮೇರಿಕಾ ಪತ್ರಿಕೆಗಳಲ್ಲಿ ಪ್ರಕಟಣೆಯಾಗಿ ನಗರ ಜನರಿಗೆ ಅಪಮಾನವಾಯಿತು. ನಿಷ್ಟಾವಂತ ಗೆಲ್ಲುವಂತ ಕಾರ್ಯಕರ್ತರಿಗೆ ಪಾಲಿಕೆಗೆ ಟಿಕೇಟು ನೀಡಲಾಗುವುದು ಎಂದರು.
ಜಿ.ಸಿ.ಚಂದ್ರಶೇಖರ್ ಮಾತನಾಡಿ, ಐದು ಪಾಲಿಕೆಗಳನ್ನು ರಚನೆ ಮಾಡಲಾಗಿದೆ. ಐದು ಪಾಲಿಕೆಗಳಲ್ಲೂ ಗೆಲುವು ಪಡೆಯಲು ಯೋಜನೆ ರೂಪಿಸಬೇಕು. ನಗರ ಪ್ರದೇಶದಲ್ಲಿ ಗೆದ್ದರೆ ಮುಂದಿನ ವಿಧಾನಸಭಾ ಚುನಾವಣೆ ಗೆಲುವಿಗೆ ರಹದಾರಿಯಾಗಲಿದೆ ಎಂದರು.
ಪಾಲಿಕೆ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿಯಿಂದ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. 368 ಪಾಲಿಕೆ ಇದೆ. ಒಟ್ಟಾರೆ ಲೆಕ್ಕ ಹಾಕಿದರೆ 8 ಬರುತ್ತದೆ ಅದು ಲಕ್ಕಿಯಲ್ಲ. ಆದ್ದರಿಂದ 369 ವಾರ್ಡ್ ಮಾಡಿ ಇದೇ ಅದೃಷ್ಟದ ನಂಬರ್ 9 ಆಗುತ್ತದೆ ಎಂದರು.


