ಬೆಂಗಳೂರುನಗರ ಪಾಲಿಕೆ ವಾರ್ಡ್ ವಿಂಗಡಣೆ ಕುರಿತು ಸಂವಾದ ಕಾರ್ಯಕ್ರಮ
ಚುನಾವಣೆಗೆ ನಿಲ್ಲುವ ಆಸೆ ಇದ್ದರೆ ಇಂದೇ ವಾರ್ಡ್ ಗಳ ಜನರ ಬಳಿ ಹೋಗಿ ಸಂಪರ್ಕ ಮಾಡಿ
ಬೆಂಗಳೂರು: ಕೆಪಿಸಿಸಿ ಕಛೇರಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೆಂಗಳೂರು ನಗರ ಪಾಲಿಕೆ ವಾರ್ಡ್ ವಿಂಗಡನೆ ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕಾರ್ಯಾಧ್ಯಕ್ಷ, ಸಂಸದ ಜಿ.ಸಿ.ಚಂದ್ರಶೇಖರ್, ಬಮೂಲ್ ಮಾಜಿ ಅಧ್ಯಕ್ಷ, ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷರಾದ ಸೌಮ್ಯ ರೆಡ್ಡಿ, ಹಿರಿಯ ಮುಖಂಡರಾದ ಬಿ.ಎಲ್.ಶಂಕರ್, ವಿ ಆರ್ ಸುದರ್ಶನ್, ಕೆ ಎಸ್ ಉಗ್ರಪ್ಪ, ಬಿಬಿಎಂಪಿ ಮಾಜಿ ಸದಸ್ಯ ಎಸ್.ಕೇಶವಮೂರ್ತಿ, ಸೂರಜ್ ಹೆಗಡೆ, ಶ್ರೀನಿವಾಸ್, ನಾಗರಾಜ್ ಯಾದವ್ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರು, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಮಂಜುನಾಥಗೌಡ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಣಯಿಸಿ, ರಾಜ್ಯಪಾಲರ ಅನುಮೋದನೆ ಪಡೆಯಲಾಯಿತು. ಪ್ರಾಧಿಕಾರದ ಮೊದಲ ಸಭೆ ನಡೆಸಲಾಯಿತು. ವಾರ್ಡ್ ವಿಂಗಡಣೆಯಲ್ಲಿ ಯಾವುದಾದರು ಸಮಸ್ಯೆ ಇದ್ದಲ್ಲಿ ದೂರು ಸಲ್ಲಿಸಿ. ಸ್ಲಂ, ಮುಸ್ಲಿಂ ದಲಿತ ಸಮುದಾಯದವರನ್ನು ಸೇರಿಸಿದರೆ ಮಾತ್ರ ಗೆಲ್ಲುತ್ತೇವೆ ಎಂಬ ಭಾವನೆ ಬಿಟ್ಟುಬಿಡಿ ಎಂದರು.
ಬಸವನಗುಡಿಯಲ್ಲಿ ಬ್ರಾಹ್ಮಣರು, ಒಕ್ಕಲಿಗರ ಮತದಾರರ ಸಂಖ್ಯೆ ಹೆಚ್ಚಿದ್ದರೂ ದಲಿತ ಸಮುದಾಯದ ಚಂದ್ರಶೇಖರ್ ಗೆದ್ದರು. ರಾಜಾಜಿನಗರದಲ್ಲಿ ಹಿಂದುಳಿದ ವರ್ಗದವರು ಶಾಸಕರಾಗಿ ಆಯ್ಕೆಯಾಗಲಿಲ್ಲವೆ? ಜಿಬಿಎಯಲ್ಲಿ ಮಹಿಳೆಯರಿಗೆ 50ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಹೊಸ ಪ್ರದೇಶಗಳನ್ನು ಚರ್ಚಿಸಿ ತೀರ್ಮಾನ ಮಾಡಲಾಗುತ್ತಿದೆ ಎಂದರು.
ಬಿಜೆಪಿಯವರು ಪ್ರಾಧಿಕಾರದ ಸಭೆಗೆ ಬರಲಿಲ್ಲ. ಆರ್ ಅಶೋಕ್ ಅವರು ಬದಲಾವಣೆ ಮಾಡುತ್ತೇನೆ ಎಂದು ಹೇಳಿದರು. ಬಿಜೆಪಿಯವರಿಗೆ ಕಾಂಗ್ರೆಸ್ ಸರ್ಕಾರ ಮಾಡಿದ ಯೋಜನೆಗಳಲ್ಲಿ ಒಂದನ್ನೂ ತೆಗೆಯಲು ಸಾಧ್ಯವಾಗಿಲ್ಲ. ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮೂರು ಗ್ಯಾರೆಂಟಿ ಯೋಜನೆಗಳು ಮಹಿಳೆಯರಿಗೆ ಸಹಕಾರಿಯಾಗಿವೆ ಎಂದರು.
ಚುನಾವಣೆಗೆ ನಿಲ್ಲುವ ಆಸೆ ಇದ್ದರೆ, ಇಂದಿನಿಂದ ರೆಡಿಯಾಗಿ ವಾರ್ಡ್ ಜನರ ಜೊತೆಯಲ್ಲಿ ನಿಕಟ ಸಂಪರ್ಕ ಮಾಡಿ ಜನರ ಹೃದಯ ಗೆಲ್ಲುವ ಕೆಲಸ ಮಾಡಿ. 369 ಹೊಸ ಪಾಲಿಕೆ ಸದಸ್ಯರಾಗಿ ಮಾಡಲು, ಹೊಸ ನಾಯಕರ ಸೃಷ್ಟಿಗೆ ಕಾರಣವಾಗಲಿದೆ. ಪ್ರತಿ ವಾರ್ಡ್ ನಲ್ಲಿ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಭೆ ನಡೆಸಬೇಕು ಎಂದರು.
ಆಯುಕ್ತರು, ಮೇಯರ್ ಅವರು ತುರ್ತು ಅವಶ್ಯಕತೆ ಸಂದರ್ಭದಲ್ಲಿ 50 ಕೋಟಿವರೆಗೆ ಅನುದಾನ ಬಳಕೆಗೆ ತೀರ್ಮಾನ ಮಾಡಿಕೊಳ್ಳಬಹುದು. 100 ಕಿಲೋ ಮೀಟರ್ ಬಿಸಿನೆಸ್ ಕಾರಿಡಾರ್ ಮಾಡಲಾಗುವುದು. ಪಾಲಿಕೆಯಲ್ಲಿ ಮೊದಲು ಖಾತೆ ಮಾಡಿಕೊಳ್ಳುವಲ್ಲಿ ಮೋಸವಾಗುತ್ತಿತು. ಇ-ಖಾತೆ ಮಾಡಿರುವುದರಿಂದ ಮೋಸ ಮಾಡಲು ಸಾಧ್ಯವಾಗುವುದಿಲ್ಲ. ಪ್ರತಿ ಕ್ಷೇತ್ರದಲ್ಲಿ ಇ-ಖಾತ ಅಭಿಯಾನ ಮಾಡಿ. ಜನರ ಮನೆ ಬಾಗಿಲಿಗೆ ಹೋಗುವ ಸುವರ್ಣವಕಾಶವಿದೆ ಎಂದರು.
ಬೀದಿ ವ್ಯಾಪಾರಿಗಳಿಗೆ ಸಹಾಯ ಮಾಡಲಾಗುವುದು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ನಗರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಮತಗಳು ಪಡೆದಿತ್ತು. ನಗರದ ಬಿಜೆಪಿಯ 4 ಎಂಪಿಗಳು ಪ್ರಧಾನಿಗಳನ್ನು ಭೇಟಿ ಮಾಡಿ, ನಗರದ ಅಭಿವೃದ್ದಿಗೆ ಅನುದಾನ ಕೇಳಿಲ್ಲ, ಬರಿ ಮಾತನಾಡುತ್ತಾರೆ ಎಂದರು.
369 ವಾರ್ಡ್ ಗಳಲ್ಲಿ ಕಮಿಟಿ ರಚನೆಯಾಗಬೇಕು. ಕಮಿಟಿಯಲ್ಲಿ ಎಲ್ಲ ಜಾತಿ ಜನಾಂಗ ಯುವ ಕಾಂಗ್ರೆಸ್ ನ ಒಬ್ಬರು ಸದಸ್ಯರು ಇರಬೇಕು. ಎಲ್ಲರಿಗೂ ಜವಾಬ್ದಾರಿ ನೀಡಲಾಗುವುದು. ಲೀಡರ್ ಹಿಂದೆ ಒಡಾಡಿದರೆ ಟಿಕೇಟು ಸಿಗುವುದಿಲ್ಲ. 5 ಪಾಲಿಕೆ ಚುನಾವಣೆ ಕಾಂಗ್ರೆಸ್ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಬೇಕು. ಆಗ ಪಕ್ಷ ಸರ್ಕಾರಕ್ಕೆ ಗೌರವ ಬರುವುದು ಎಂದರು.




