ವೀರಾವೇಶದಿಂದ ಹೋರಾಡಲು ಶಕ್ತಿಯಿಲ್ಲದ ಹೇಡಿ ಬಿಜೆಪಿಯವರಿಂದ ಬೆನ್ನಿಗೆ ಇರಿಯುವ ಕೆಲಸ: ದಿನೇಶ್ ಗುಂಡೂರಾವ್

2 years ago

ಚುನಾವಣಾ ರಣರಂಗದಲ್ಲಿ ಮುಖಾಮುಖಿಯಾಗಿ ವೀರಾವೇಶದಿಂದ ಹೋರಾಡಲು ಶಕ್ತಿಯಿಲ್ಲದ ಹೇಡಿ ಬಿಜೆಪಿಯವರು ಬೆನ್ನಿಗೆ ಇರಿಯುವ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗ, ಇಡಿ, ಸಿಬಿಐ, ಐಟಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ದೇಶದ ಎಲ್ಲಾ ವಿರೋಧ ಪಕ್ಷಗಳ ಕತ್ತುಗಳನ್ನು ಹಿಸುಕುತ್ತಿದ್ದಾರೆ.

ದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜನ ಬೆಂಬಲ ಹೆಚ್ಚುತ್ತಿರುವುದನ್ನು ಸಹಿಸಲಾಗದೇ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳನ್ನು ಫ್ರೀಜ್‌ ಮಾಡುತ್ತಿದ್ದಾರೆ. ಚುನಾವಣಾ ಬಾಂಡ್‌ಗಳಿಂದ ಬಿಜೆಪಿಯ ಖಜಾನೆ ತುಂಬಿದೆ  ಆದರೆ ನಮ್ಮ ಪಕ್ಷದ ಬ್ಯಾಂಕ್‌ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಚುನಾವಣಾ ಬಾಂಡ್‌ಗಳಿಂದ ಬಿಜೆಪಿಗೆ 56% ಹಣ ಸಂಗ್ರಹವಾಗಿದೆ. ದೇಶದ ಎಲ್ಲಾ ಮಾಧ್ಯಮಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡು ಜಾಹಿರಾತುಗಳನ್ನೂ ಕೂಡ ಏಕಸ್ವಾಮ್ಯ ಮಾಡಿಕೊಂಡಿದ್ದಾರೆ.

1994-1995ರ ಅವಧಿಯಲ್ಲಿ ನಡೆದಿರುವ ಕಾಂಗ್ರೆಸ್‌ ಪಕ್ಷದ ಹಣಕಾಸಿನ ಐಟಿ ಮೌಲ್ಯಮಾಪನವನ್ನು 2024ರ ಪಕ್ಷದ ಹಣಕಾಸಿಗೆ ಸಂಬಂಧಿಸಿದಂತೆ ಬಿಂಬಿಸಿರುವುದು ನಾಚಿಕೆಗೆಟ್ಟ ರಾಜಕೀಯ ಸೇಡಿನ ಕ್ರಮವಲ್ಲವೇ?
ಭಾರತದ 70 ವರ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಪರಿಸ್ಥಿತಿ ಎಂದಿಗೂ ಬಂದಿರಲಿಲ್ಲ.

ಚುನಾವಣೆಯನ್ನು ಗೆಲ್ಲಲೇಬೇಕೆಂದು ಹಠತೊಟ್ಟು ಅನಾಚಾರದ ಹಾದಿಯನ್ನು ಬಿಜೆಪಿ ಪಕ್ಷ ತುಳಿದಿದೆ. ಪ್ರಜಾಪ್ರಭುತ್ವದಲ್ಲಿ ನಿಷ್ಪಕ್ಷಪಾತ ಚುನಾವಣೆಗಳು ನಡೆಯಬೇಕೇ ಹೊರತು ಯಾವುದೇ ರಾಜಕೀಯ ಪಕ್ಷವನ್ನು ಅಸಹಾಯಕರನ್ನಾಗಿಸಿ ಚುನಾವಣೆಗೆ ಸ್ಪರ್ಧಿಸಲು ಅಡೆತಡೆಗಳನ್ನು ಸೃಷ್ಟಿಸಿ ಅದನ್ನು ನ್ಯಾಯಸಮ್ಮತ ಚುನಾವಣೆ ಎನ್ನಬಾರದು.

ಬಿಜೆಪಿಯವರ ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಪಾರದರ್ಶಕವಾಗಿ ನ್ಯಾಯಸಮ್ಮತವಾಗಿ ಚುನಾವಣೆ ಎದುರಿಸಿ ಗೆದ್ದು ತೋರಿಸುತ್ತೇವೆ.

– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

Leave a Reply