ಬೆಂಗಳೂರು ಕಿಡ್ನಿ ಫೌಂಡೇಷನ್ ವತಿಯಿಂದ ಕಿಡ್ನಿ ಆರೋಗ್ಯದ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮ
ಬೆಂಗಳೂರು: ಶಂಕರ ಕ್ಯಾನ್ಸರ್ ಆಸ್ಪತ್ರೆಯಿಂದ ಜಾಥಾ ಕಾರ್ಯಕ್ರಮದಲ್ಲಿ ಬೆಂಗಳೂರು ಕಿಡ್ನಿ ಫೌಂಡೇಷನ್ ಅಧ್ಯಕ್ಷ ಡಾ.ಶ್ರೀರಾಮ್ ಚಾಲನೆ ನೀಡಿದರು. ಸಾವಿರಾರು ಜನರು ಕಿಡ್ನಿ ಸುರಕ್ಷತೆ ಜಾಥಾದಲ್ಲಿ ಪಾಲ್ಗೊಂಡಿದ್ದರು.
- ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿ, ತುರ್ತು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಿ: ಕೃಷ್ಣ ಬೈರೇಗೌಡ
- ಎಮ್ಆರ್ ಪಿಎಲ್ ಸ್ಫೋಟ
- ಒಟ್ಟು ಸಾಲಗಳಲ್ಲಿ ಸಿದ್ದರಾಮಯ್ಯನವರ ಪಾಲು 52.33%, ಸರ್ವಕಾಲಿಕ ದಾಖಲೆ: ಆರ್.ಅಶೋಕ
- ಒಕ್ಕಲಿಗ ಮುದ್ದಣ್ಣನ ವಚನಗಳು
- ಸಾರಾ ಜಾಸ್ಮಿನ್ ಶ್ರೀಲಂಕಾದ ಜೈಲಿನಲ್ಲಿದ್ದಾಳೆಯೇ?
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಶ್ರೀರಾಮ್, ಹೃದಯದಂತೆ ಕಿಡ್ನಿ ಸಹ ಮನುಷ್ಯನಿಗೆ ಬೇಕಾದ ಬಹು ಮುಖ್ಯವಾದ ಅಂಗ. ಸಕ್ಕರೆ ಪ್ರಮಾಣ ಮತ್ತು ಬಿ.ಪಿ. ಸಮ ಪ್ರಮಾಣದಲ್ಲಿ ಇರಬೇಕು ಮತ್ತು ವಂಶಪಾರಂಪರ್ಯವಾಗಿ ಕಿಡ್ನಿ ಸಮಸ್ಯೆ ಇರುವವರು ಇರುತ್ತಾರೆ. ಪ್ರಥಮ ಹಂತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದರು.
ಪ್ರತಿಯೊಬ್ಬರೂ ಪ್ರತಿದಿನ ವಾಕಿಂಗ್ ಮತ್ತು ಉತ್ತಮ ಆಹಾರ ಸೇವನೆ ಹಾಗೂ ಚೆನ್ನಾಗಿ ನಿದ್ರೆ ಮಾಡಬೇಕು. ಕರಿದ ಪದಾರ್ಥ ಮತ್ತು ರಾಸಾಯನಿಕಯುಕ್ತ ಆಹಾರ ಸೇವನೆ, ಧೂಮಪಾನ, ಮದ್ಯಪಾನ ಬೀಡಬೇಕು. ಆರೋಗ್ಯವಂತ ಕಿಡ್ನಿ ಸುರಕ್ಷತೆ ವೈದ್ಯರು ಹೇಳುವ ಸಲಹೆ ಪಡೆದು ಆರೋಗ್ಯವಂತರಾಗಿ ಇರಿ ಎಂದರು.









