ನರದೌರ್ಬಲ್ಯ ವ್ಯಕ್ತಿಗೆ ಉಚಿತ ಔಷಧಿ ವಿತರಣೆ
ಜನರೊಂದಿಗೆ ಜನಸೇವಕ ಸಮಾಜಮುಖಿ ಕಾರ್ಯಗಳಿಗೆ ಸಹಕಾರ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಸಂಪರ್ಕ ಕಛೇರಿ ಅವರಣದಲ್ಲಿ 40ನೇ ಜನರೊಂದಿಗೆ ಜನಸೇವಕ, ಜನಸ್ಪಂದನಾ ಕಾರ್ಯಕ್ರಮ ಶಾಸಕ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ಜರುಗಿತು.ಜಿಬಿಎ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಸುರೇಶ್ ಕುಮಾರ್, ಜನರೊಂದಿಗೆ ಜನಸೇವಕ 40 ವಾರಗಳು ಮತ್ತು ದಿನಕ್ಕೊಂದು ವಾರ್ಡ್ 41 ದಿನಗಳ ಕಾಲ ಯಶ್ವಸಿಯಾಗಿ ಸಾಗಿ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದರು.
34 ವರ್ಷದ ಯುವಕನಿಗೆ ಕಿಡ್ನಿ ಡಯಾಲಿಸಿಸ್ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ, ಕಳೆದ ಒಂದು ವರ್ಷದಿಂದ ಲಕ್ಷಾಂತ ರೂಪಾಯಿ ಖರ್ಚು ಮಾಡಿದ್ದರು. ಇದರ ಬಗ್ಗೆ ನಮಗೆ ಸಲ್ಲಿಸಿದ ತಕ್ಷಣ ಯುವಕನಿಗೆ ಬಿಪಿಎಲ್ ಕಾರ್ಡ್ ವ್ಯವಸ್ಥೆ ಹಾಗೂ ವಿಕ್ಟೋರಿಯ ಆಸ್ಪತ್ರೆ ಉನ್ನತ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಬಿಪಿಎಲ್ ಕಾರ್ಡ್ ಇರುವುದರಿಂದ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯಬಹುದು ಮತ್ತು ಉದ್ಯೋಗ ಮಾಡಲು ಈಗಾಗಲೇ ಕ್ರಮವಹಿಸಲಾಗಿದೆ ಜೀವನೋಪಾಯಕ್ಕೆ ದಾರಿಯಾಯಿತು ಎಂದರು.
ನರದೌರ್ಬಲ್ಯದಿಂದ ನರಳುತ್ತಿರುವ ಯುವಕನಿಗೆ ಒಂದು ವರ್ಷಕ್ಕೆ ಬೇಕಾದ ಔಷಧಿಗಳನ್ನು ನೀಡಲಾಗುತ್ತಿದೆ. ಜನರೊಂದಿಗೆ ಜನಸೇವಕ ಸಾಮಾಜಿಕ ಸೇವಾ ಕಾರ್ಯಗಳಿಗೆ ಸಾಕ್ಷಿಯಾಗಿದೆ. ಮಕ್ಕಳ ಆರೋಗ್ಯ ಸಮಸ್ಯೆ, ಖಾತೆ ನೋಂದಾಣಿ, ನೀರಿನ ಪೂರೈಕೆ, ಪೌರ ಕಾರ್ಮಿಕರ ನೇಮಕ ಸಮಸ್ಯೆ ಮತ್ತು ಮರದ ಕೊಂಬೆ ತೆರವುಗೊಳಿಸುವ, ಪಿಂಚಣಿ ಸಂಬಂಧಿಸಿದ ಸಮಸ್ಯೆಗಳಿಗೆ ಕ್ರಮ ಕೈಗೊಳ್ಳಲು ಮನವಿ ಮತ್ತು ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪಾಲಿಕೆ ಮಾಜಿ ಸದಸ್ಯರುಗಳಾದ ಹೆಚ್.ಆರ್.ಕೃಷ್ಣಪ್ಪ, ರಾಜಣ್ಣ, ದೀಪಾ ನಾಗೇಶ್, ವಿಜಯಕುಮಾರ್ ಮತ್ತು ಬಿಜೆಪಿ ಮುಖಂಡರಾದ ಸುದರ್ಶನ್, ಗಿರೀಶ್ ಗೌಡ, ಕಾಮಧೇನು ಸುರೇಶ್, ರಾಕೇಶ್, ಕೇಶವಮೂರ್ತಿ, ವಿಶ್ವನಾಥ್, ಅಮಿತ್ ಜೈನ್, ಸಂಜಯ್ ಕುಮಾರ್ ಮತ್ತು ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಹಾಜರಿದ್ದರು.







