ರೆಡ್ ಇನ್ಕಾರ್ನೇಷನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2025ರ ಸ್ಪರ್ಧೆಯಲ್ಲಿ 8 ಪ್ರಶಸ್ತಿಗಳ ಗರಿ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ರೆಡ್ ಇನ್ಕಾರ್ನೇಷನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2025ರ ಸ್ಪರ್ಧೆಯಲ್ಲಿ ಕನ್ನಡದ ಹರಿಶ್ಚಂದ್ರ ಕಿರುಚಿತ್ರ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಭಾರತೀಯ ಭಾಷೆಗಳಲ್ಲಿ ನೀಡಲಾಗುವ ಈ ಪ್ರಶಸ್ತಿಗಳ ಪೈಕಿ ಬಹು ಪ್ರಶಸ್ತಿಗಳಿಗೆ ಆಯ್ಕೆಯಾಗುವ ಮೂಲಕ ಚಿತ್ರತಂಡ ಅಭೂತಪೂರ್ವ ಸಾಧನೆ ಮೆರೆದಿದೆ.
ಕನ್ನಡ ಅಧ್ಯಾಪಕರಾದ ಪ್ರೊ.ರಾಜಪ್ಪ ದಳವಾಯಿಯವರು, ಕತೆ, ಕವಿತೆ, ನಾಟಕ, ಸಂಶೋಧನೆ, ಚಿತ್ರರಚನೆ, ಸಂಘಟನೆ, ಚಲನಚಿತ್ರಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ರಚಿಸಿದ್ದರು. ಜೊತೆಗೆ, ಹವ್ಯಾಸಿ ರಂಗಭೂಮಿಯಲ್ಲಿ ನಾಟಕಗಳನ್ನು ಕೂಡ ನಿರ್ದೇಶಿಸಿದ್ದಾರೆ. ಕೆಲವು ಚಲನಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದಾರೆ.
ಡಾ.ರಾಜಪ್ಪ ದಳವಾಯಿಯವರು ನಿರ್ಮಿಸಿ, ನಿರ್ದೇಶಿಸಿದ ಹರಿಶ್ಚಂದ್ರ ಕಿರುಚಿತ್ರ ರೆಡ್ ಇನ್ಕಾರ್ನೇಷನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2025ರ ಸ್ಪರ್ಧೆಯಲ್ಲಿ 8 ಪ್ರಶಸ್ತಿಗಳಿಂದ ಪುರಸ್ಕೃತವಾಗಿದೆ.
ಈ ವಿಷಯವನ್ನು ತಿಳಿಸಿರುವ ರೆಡ್ ಇನ್ಕಾರ್ನೇಷನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2025ರ ಸ್ಪರ್ಧೆಯ ಆಯೋಜಕರು ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಕನ್ನಡ ವಿಭಾಗದಲ್ಲಿ ಹರಿಶ್ಚಂದ್ರ ಕಿರುಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳು:
1. ಅತ್ಯುತ್ತಮ ನಿರ್ದೇಶಕ : ರಾಜಪ್ಪ ರಾಮಪ್ಪ ದಳವಾಯಿ
2. ಅತ್ಯುತ್ತಮ ಡಿಒಪಿ: ನಾಗರಾಜ ಆದವಾನಿ
3. ಅತ್ಯುತ್ತಮ ಸಂಕಲನಕಾರ: ಸುರೇಶ್ ಅರಸ್
4. ಅತ್ಯುತ್ತಮ ನಟ: ಸಂಪತ್ ಮೈತ್ರೇಯ
5 ಅತ್ಯುತ್ತಮ ಕಥೆ: ಎಚ್.ಜಿ.ಸೋಮಶೇಖರ್ ರಾವ್
6. ಅತ್ಯುತ್ತಮ ಚಿತ್ರಕಥೆ: ರಾಜಪ್ಪ ರಾಮಪ್ಪ ದಳವಾಯಿ
7. ಅತ್ಯುತ್ತಮ ಪೋಷಕ ನಟ: ಶೋಧನ್ ಬಸರೂರ್
8. ಅತ್ಯುತ್ತಮ ಪೋಷಕ ನಟ: ಪದ ದೇವರಾಜು




