ವರ್ಷ 40 ದೇಶಗಳಿಂದ ಬಂದ 30 ಭಾಷೆಗಳ 150ಕ್ಕೂ ಹೆಚ್ಚಿನ ಚಲನಚಿತ್ರಗಳ ಪ್ರದರ್ಶನ

4 years ago

ವರ್ಷ 40 ದೇಶಗಳಿಂದ ಬಂದ 30 ಭಾಷೆಗಳ 150ಕ್ಕೂ ಹೆಚ್ಚಿನ ಚಲನಚಿತ್ರಗಳ ಪ್ರದರ್ಶನ

ಇನ್ನೋವೇಟಿವ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌

ಐವರು ದಂತಕಥೆಗಳಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ

ಬೆಂಗಳೂರು: ದಕ್ಷಿಣ ಭಾರತದ ಅತ್ಯಂತ ದೊಡ್ಡ ಚಲನಚಿತ್ರೋತ್ಸವವಾದ ಇನ್ನೋವೇಟಿವ್ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ನ 5ನೇ ಆವೃತ್ತಿ ಬೆಂಗಳೂರಿನಲ್ಲಿ ಇಂದು ವೈಭವಯುತವಾಗಿ ಸಮಾರೋಪ ಕಂಡಿದೆ.
ನಾಲ್ಕು ದಿನಗಳ ಈ ಉತ್ಸವದಲ್ಲಿ ಈ 2000ಕ್ಕೂ ಹೆಚ್ಚಿನ ನಿಯೋಗಿಗಳು ಭಾಗವಹಿಸಿದ್ದು, ಇವರಲ್ಲಿ ವಿದ್ಯಾರ್ಥಿಗಳು ಮತ್ತು ಆಕಾಂಕ್ಷಿತ ಚಲನಚಿತ್ರ ಪ್ರತಿಭೆಗಳು ಸೇರಿದ್ದರು. ವಿಸ್ತಾರವಾದ ಶ್ರೇಣಿಯ ಚಲನಚಿತ್ರಗಳನ್ನು ಸಾದರಪಡಿಸಿದ ಚಲನಚಿತ್ರೋತ್ಸವವು 40 ದೇಶಗಳ 30 ಭಾಷೆಗಳಲ್ಲಿನ 150ಕ್ಕೂ ಹೆಚ್ಚಿನ ಅತ್ಯುತ್ತಮ ಚಲನಚಿತ್ರಗಳನ್ನು ಪ್ರದರ್ಶಿಸಿತ್ತು.
ಇನ್ನೋವೇಟಿವ್ ಫಿಲಂ ಅಕಾಡೆಮಿ(ಐಎಫ್‌ಎ)ಯಿಂದ ಆಯೋಜಿಸಲಾದ ಈ ಉತ್ಸವ ಉದ್ಯಮದಲ್ಲಿನ ಹಿರಿಯರ ನೇತೃತ್ವದಲ್ಲಿನ ಕುತೂಹಲಕಾರಿ ಅಧಿವೇಶನವನ್ನು ಕೂಡ ಹೊಂದಿತ್ತಲ್ಲದೆ, ಇದು ಈ ಕಲೆಯ ಸೂಕ್ಷ್ಮತೆಗಳನ್ನೂ ಕಲಿಯಲು ಆಕಾಂಕ್ಷಿತ ಪ್ರತಿಭೆಗಳಿಗೆ ವೇದಿಕೆಗಳನ್ನು ಸಾದರಪಡಿಸಿತ್ತು. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಹೈನುಗಾರಿಕೆ ಇಲಾಖೆ ಸಚಿವ ಡಾ. ಎಲ್. ಮುರುಗನ್‌ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರಿನ ಮಾರತ್‌ಹಳ್ಳಿಯ ಇನ್ನೋವೇಟಿವ್ ಮಲ್ಟಿಫೆಕ್ಸ್ನಲ್ಲಿ ಉತ್ಸವದ ಅಂತಿಮ ದಿನದಂದು ನಡೆದ ಪ್ರದರ್ಶನಗಳ ಸಂದರ್ಭದಲ್ಲಿ ಅಬುದಾಬಿ, ಇಸ್ರೇಲ್, ಕೆನಡಾ ಮತ್ತು ಫ್ರಾನ್ಸ್ಗಳ ಗಣ್ಯರು ಹಾಜರಿದ್ದರು.
ತಮಿಳುನಾಡು ನಿರ್ದೇಶಕರ ಸಂಘದ ಅಧ್ಯಕ್ಷ ಆರ್.ಕೆ. ಸೆಲ್ವಮಣಿ ಮತ್ತು ಇನ್ನೋವೇಟಿವ್ ಫಿಲಂ ಅಕಾಡೆಮಿಯ ಸ್ಥಾಪಕ ಮತ್ತು ನಿರ್ದೇಶಕ ಸರವಣ ಪ್ರಸಾದ್ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಚಲನಚಿತ್ರ ತಯಾರಿಕಾ ಪ್ರಕ್ರಿಯೆ ಕುರಿತು ತಮ್ಮ ಒಳನೋಟ ಪೂರ್ಣ ಜ್ಞಾನವನ್ನು ಸಾದರಪಡಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಇನ್ನೋವೇಟಿವ್ ಫಿಲಂ ಅಕಾಡೆಮಿಯ ಇಸ್ಟುಡಿಯೋ ಎಂಬ ತಮ್ಮದೇ ಆದ ವರ್ಚುವಲ್ ನಿರ್ಮಾಣ ವ್ಯವಸ್ಥೆಯನ್ನು ಆರಂಭಿಸಲಾಗಿದೆ.

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿರುವವರ ಪಟ್ಟಿ :
1. ಕೆ. ಭಾಗ್ಯರಾಜ್ – ಜೀವಮಾನದ ಸಾಧನೆಯ ಪ್ರಶಸ್ತಿ
2. ಎಸ್. ಕೆ. ಭಗವಾನ್ – ದಕ್ಷಿಣ ಭಾರತದ ದಂತ ಕಥೆ ಪ್ರಶಸ್ತಿ
3. ಪರಿಸ್ಥಿತಿ – ಅತ್ಯುತ್ತಮ ಚೊಚ್ಚಲ ಚಲನಚಿತ್ರ ನಿರ್ದೆಶಕ ಪ್ರಶಸ್ತಿ
4. ಕಾರ್ತೀಕ್ ಸುಬ್ಬರಾಜ್ – ಯುವ ಐಕಾನ್ ಪ್ರಶಸ್ತಿ
5. ಬಿ. ಲೆನಿನ್ – ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ

Leave a Reply