ಇತ್ತೀಚಿಗೆ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕಾಟನ್ ಕ್ಯಾಡಿ ಹಾಗೂ ಗೋಬಿ ಮಂಚೂರಿ ಮಾರಾಟ ಮಾಡುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ ಎಂಬುದರ ಬಗ್ಗೆ ಪತ್ರಿಕೆಗಳಲ್ಲಿ ಕಂಡುಬಂತು.
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಸರ್ಕಾರದಿಂದ ತುಂಬಾ ದಿನಗಳ ನಂತರ ಈ ತೀರ್ಮಾನ ಬಂದಿರುವುದು ಜ್ಞಾನೋದಯ ಆಗಿರುವುದು ಸ್ವಾಗತರ್ಹ ವಿಷಯ. ದೇಶ /ರಾಜ್ಯದಲ್ಲಿ ಹೃದಯಘಾತ ಹಾಗೂ ಲಕ್ವಾ ಈ ಕಾಯಿಲೆಗಳಿಂದ ತುಂಬಾ ಜನ ಪ್ರಾಣ ಕಳೆದುಕೊಳ್ಳಿತ್ತಿರುವುದು ಕಂಡುಬರುತ್ತಿದೆ. ಈಗ ಬೀದಿಬದಿಗಳಲ್ಲಿ ಹಾಗೂ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವ ಬಹುತೇಕ ಆಹಾರ ಪದಾರ್ಥಗಳು ವಿಷಕಾರಿ ಆಗಿದೆ ಎಂಬುದು ಪ್ರಜ್ಞಾವಂತ ಜನರಿಂದ ಕೇಳಿ ಬರುತ್ತಿದೆ.
ಆದರೆ ಸಂಬಂಧಪಟ್ಟ ಇಲಾಖೆಗಳು ವಿಷಕಾರಿ ಆಹಾರ ಪದಾರ್ಥಗಳನ್ನು ತನಿಖೆ ಮಾಡಿ ಅವುಗಳನ್ನು ತಯಾರಿಸುವ, ಮಾರಾಟ ಮಾಡುವರ ಮೇಲೆ ಕಠಿಣ ಕ್ರಮಗಳು ತೆಗೆದುಕೊಳ್ಳದ ಕಾರಣ ಜನಸಾಮಾನ್ಯರು, ಮಕ್ಕಳು ಈ ಕಳಪೆ ಆಹಾರ ಪದಾರ್ಥಗಳನ್ನು ತಿನ್ನುತ್ತಿರುವ ಕಾರಣ ಅಕಾಲಿಕ ಮರಣಗಳು ಹೆಚ್ಚಾಗುತ್ತಿವೆ.
ಆದರೆ ಸರ್ಕಾರ ಇದಕ್ಕೆ ಕಡಿವಾಣ ಹಾಕದೆ ಇರುವುದು ನೋಡಿದರೆ ಸರ್ಕಾರ ಮೇಲೆ ಸಂಶಯ ಉಂಟು ಮಾಡುತ್ತದೆ ಎಂಬುದು ನಾಗರೀಕರಿಂದ ಕೇಳಿ ಬರುತ್ತದೆ. ನಿಷೇಧ ಎಂಬ ಪದ ಸಂಬಂಧಪಟ್ಟ ಇಲಾಖೆಗಳಿಗೆ ಲಾಭ ತರುವ ವರ ಆಗಬಾರದು ಅಲ್ಲವೇ?
ರಾಜ್ಯ ಸರ್ಕಾರ ನಿಷೇಧಗಳನ್ನು ಕೆಲವು ಪದಾರ್ಥಾಗಳ ಮೇಲೆ ಹಾಗೂ ಕೆಲವು ವಸ್ತುಗಳು ಮೇಲೆ ಹೇರಿದರೂ ಸಂಬಂಧಪಟ್ಟ ಇಲಾಖೆಗಳು ಜಾರಿಗೆ ತರುತ್ತಿವೆಯಾ ಎಂಬ ಪ್ರಶ್ನೆಗಳು ಕಂಡುಬರುತ್ತಿವೆ. ರಾಜ್ಯ ಸರ್ಕಾರ ಗುಟ್ಕಾ & ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರಿದರೂ ಆದೇಶವನ್ನು ಜಾರಿಗೆ ತರುವಲ್ಲಿ ವಿಫಲ ಆಗುತ್ತಿರುವುದು ಕಂಡುಬರುತ್ತಿದೆ. ಈಗಲೂ ಅಂಗಡಿ ಗಳಲ್ಲಿ ಗುಟ್ಕಾ – ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ನೇರವಾಗಿ ಕಂಡುಬರುತ್ತಿದೆ.
ಸರ್ಕಾರ ನಿಷೇಧ ಪದಕ್ಕೆ ಅರ್ಥ ಇಲ್ಲದಂತೆ ಮಾಡುತ್ತಿದೆ. ಸರ್ಕಾರಗಳು ಬರೀ ನಿಯಮ ಜಾರಿಗೆ ತಂದರೆ ಸಾಲದು, ಇದನ್ನು ಕಾರ್ಯಗತ ಮಾಡಿದಾಗ ಮಾತ್ರ ಆ ನಿಯಮಗಳಿಗೆ ಅರ್ಥ ಬರುತ್ತದೆ. ರಾಜ್ಯದಲ್ಲಿ ಪ್ಲಾಸಿಕ್ ಬ್ಯಾಗ್ ಕವರ್ ಗಳ ಮೇಲೆ ನಿಷೇಧ ಹೇರಿಕೆಮಾಡಿತ್ತು. ಆದರೆ ಕಾರ್ಯಗತ ಆಗುತ್ತಿದೆಯಾ? ಅದೇ ರೀತಿ ಹೋಟೆಲ್ ಗಳಲ್ಲಿ ಟೀ ಕಾಫಿಯನ್ನು ಪ್ಲಾಸಿಕ್ ಲೋಟಗಳಲ್ಲಿಯೆ ನೀಡಲಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ಹೆಚ್ಚು ಅಪಾಯಕಾರಿ ಎಂದು ಸಂಶೋಧನೆಗಳು ಹೇಳುತ್ತಿದ್ದರು ಸಹಾ ಟೀ ಕಾಫಿಯನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ನೀಡಲಾಗುತ್ತಿದೆ.
ಇವುಗಳ ಮೇಲೆ ನಿಷೇಧ ಪೂರ್ಣವಾಗಿ ಜಾರಿಗೆ ಬಂದಿಲ್ಲ. ಅನುಷ್ಠಾನಕ್ಕೆ ತರುವ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತದೆ. ಪಾಲನೆ ಮಾಡದ ತಯಾರಿಕ ಘಟಕಗಳು ಮಾರಾಟ ಮಾಡುವ ಅಂಗಡಿಗಳ ಮೇಲೆ ಕಠಿಣ ಕ್ರಮ ಕೈಗೊಂಡರೆ ಸರ್ಕಾರ ತರುವ ನಿಯಮಗಳಿಗೆ ಸಾಮಾನ್ಯ ಜನರಿಂದ ಗೌರವ ಬರುತ್ತದೆ. ಇಲ್ಲದೆ ಇದ್ದಲ್ಲಿ ಸರ್ಕಾರ ನಿಯಮಗಳ ಬಗೆ ಅಸಡ್ಡೆ ಮೂಡಲು ಕಾರಣ ಆಗುತ್ತದೆ.
ಎಷ್ಟೊ ಆಹಾರ ಪದಾರ್ಥಗಳು ಔಷಧಿಗಳು ಅಪಾಯಕಾರಿಗಳು ಎಂದೂ ತಿಳಿದು ಬಂದರೂ ಸಹ ನಿಷೇಧ ಹೇರಿಕೆ ಸರಿಯಾಗಿ ಜಾರಿಗೆ ಬಾರದೆ ಇರುವುದು ಅಭಾಸ ಉಂಟು ಮಾಡುತ್ತದೆ. ಇತ್ತೀಚೆಗೆ ಚುನಾವಾಣ ಬಾಂಡುಗಳನ್ನು ಕೊಂಡಿರುವ ಅನೇಕ ಸಂಸ್ಥೆಗಳಲ್ಲಿ ಅಪಾಯಕಾರಿ ಔಷಧಿ ಕಂಪನಿಗಳು ಇದೆ ಎಂದರೆ ಸರ್ಕಾರಕ್ಕೆ ಜನಸಾಮಾನ್ಯರ ಆರೋಗ್ಯ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಸರ್ಕಾರಗಳು ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಅಹಾರ ಪದಾರ್ಥಗಳು ಔಷಧಿಗಳ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅವಶ್ಯಕತೆ ಇದೆ.
- N.S.ಈಶ್ವರ ಪ್ರಸಾದ್, ನೇರಳೇಕೆರೆ, ಮಧುಗಿರಿ ತಾಲ್ಲುಕು




