ಏಪ್ರಿಲ್ 1: ಮೂರ್ಖರ ದಿನದ ಮಹಾ ಲಾಭಗಳು (ಭಾರತೀಯರಿಗೆ ಮಾತ್ರ)
ಮೋಡಗಳಿಂದ ರೆಡಾರ್‍ಗಳನ್ನು ಯಾಮಾರಿಸಿ ವೈಮಾನಿಕ ದಾಳಿ ಮಾಡಬಹುದು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಗಟಾರದಿಂದ ನೇರವಾಗಿ ಗ್ಯಾಸ್ ಕನೆಕ್ಷನ್ ತೆಗೆದುಕೊಂಡು ಸ್ಟೌವ್ ಉರಿಸಬಹುದು.
ಚಿಕ್ಕವಯಸ್ಸಿನ ಹುಡುಗನೊಬ್ಬ ನದಿಯಿಂದ ಮೊಸಳೆ ಹಿಡಿದು ತರಬಹುದು.
ರೈಲುಗಳೇ ಸಂಚರಿಸಿದ ಊರಿನಲ್ಲಿ ರೈಲ್ವೇ ಸ್ಟೇಷನ್ ಇದ್ದಿರಬಹುದು. ಆ ಕಲ್ಪಿತ ಸ್ಟೇಷನ್ನಲ್ಲಿ ನೀವು ಚಹಾ ಕೂಡಾ ಮಾರಬಹುದು.
* ಪ್ರಪಂಚದಲ್ಲಿಯೇ ಅಸ್ತಿತ್ವದಲ್ಲಿಲ್ಲದ ಎಂಟೈರ್ ಪೊಲಿಟಿಕಲ್ ಸೈನ್ಸ್ನಲ್ಲಿ ನೀವು ಮಾಸ್ಟರ್ ಡಿಗ್ರಿ ಮಾಡಬಹುದು. ಹಾಗೆ ಸಂಪಾದಿಸಿದ ಡಿಗ್ರಿ ಸರ್ಟಿಫಿಕೇಟನ್ನು ರಾಷ್ಟ್ರೀಯ ರಹಸ್ಯ ದಾಖಲೆಯೆಂದು ಘೋಷಿಸಿ ಯಾರಿಗೂ ತೋರಿಸದೆ ಮುಚ್ಚಿಟ್ಟುಕೊಳ್ಳಬಹುದು.
* ಹವಾಮಾನ ಏರುಪೇರು ಎಂಬುದೆಲ್ಲ ಬೊಗಳೆ; ನಮಗೆ ವಯಸ್ಸಾಗುತ್ತಿರುವುದರಿಂದ ಸಹನ ಶಕ್ತಿ ಕಡಿಮೆಯಾಗಿರೋದ್ರಿಂದ ಹವಾಮಾನ ಏರುಪೇರಾದಂತೆ ಭಾಸವಾಗುತ್ತಿದೆಯಷ್ಟೆ ಎಂದು ಜನರನ್ನು ನಂಬಿಸಬಹುದು.
* ಬಡವರ ಮಕ್ಕಳು ಮೈತುಂಬಾ ಬಟ್ಟೆ ಹಾಕಿಕೊಳ್ಳುವುದೇ ದುಸ್ಥರವಾಗಿದ್ದ ಕಾಲದಲ್ಲೂ, ನೀವು ಕಡುಬಡವರಾಗಿ ಶಾಲೆಗೆ ಯೂನಿಫಾರ್ಮ್ ಮತ್ತು ಬಿಳಿ ಶೂ ಹಾಕಿಕೊಂಡು ಹೋಗಬಹುದು. ಕೊಳೆಯಾಗುವ ಆ ಶೂಗಳನ್ನು ಸೀಮೆಸುಣ್ಣದಿಂದ ತೀಡಿಕೊಂಡು ಬೆಳ್ಳಗೆ ಮಾಡಿಕೊಳ್ಳಬಹುದು.
* ಡಿಜಿಟಲ್ ಕ್ಯಾಮೆರಾಗಳು ಶೋಧನೆಯಾಗುವುದಕ್ಕೆ ಮೊದಲೇ ನೀವು ಡಿಜಿಟಲ್ ಕ್ಯಾಮೆರಾ ಬಳಸಿ ಫೋಟೊ ತೆಗೆಯಬಹುದು. ಇಮೇಲ್ ಭಾರತಕ್ಕೆ ಕಾಲಿಡುವುದಕ್ಕು ಮೊದಲೇ ಆ ಫೋಟೊಗಳನ್ನು ಇಮೇಲ್ ಮೂಲಕ ರವಾನಿಸಬಹುದು.
* ಏರ್‍ಕಂಡೀಷನ್ಡ್ ಗುಹೆಯಲ್ಲಿ ಕೂತೋ, ಆಕ್ಸಿಜನ್ ಮುಖವಾಡ ಸಮೇತ ನೀರಿನಲ್ಲಿ ಮುಳುಗಿಯೋ ಸುತ್ತಲೂ ಕ್ಯಾಮೆರಾಮನ್ಗಳ ಕಾಟವಿಟ್ಟುಕೊಂಡು ನೀವು ಧ್ಯಾನ ಮಾಡಬಹುದು.
* `ನನಗೆ ಕೇವಲ 50 ದಿನ ಅವಕಾಶ ಕೊಡಿ. ಆನಂತರವೂ ಸಮಸ್ಯೆ ಮುಂದುವರೆದರೆ, ನೀವು ಹೇಳಿದ ಚೌಕದಲ್ಲಿ ನಿಲ್ಲುತ್ತೇನೆ, ಬೆಂಕಿ ಹಚ್ಚಿ ಸುಟ್ಟುಬಿಡಿ’ ಎಂದು ಹೇಳಿ, ಗ್ಯ್ರಾಂಡ್ ಫೇಲ್ಯೂರ್ ನಂತರವೂ ನೀವು ಆರಾಮಾಗಿ ಅಧಿಕಾರ ನಡೆಸಬಹುದು.
* ‘ನಾ ಖಾವೂಂಗಾ, ನಾ ಖಾನೇ ದೂಂಗಾ,’ `ಮೇ ಚೌಕಿದಾರ್ ಹೂ’ ಅಂತ ಹೇಳಿಯೂ ರಫೇಲ್ ಹಗರಣ, ಎಲೆಕ್ಟ್ರೋಲ್ ಬಾಂಡ್, ಪಿಎಂ ಕೇರ್‍ಸ್ ಹಗರಣಗಳನ್ನು ಬಿಂದಾಸ್ ಆಗಿ ನಡೆಸಬಹುದು.
* ನಾನು ಸೀದಾಸಾದಾ ಪಕೀರ, ನಿಮ್ಮ ಪ್ರಧಾನ ಸೇವಕ ಅಂತ ಹೇಳಿ ಜನರನ್ನು ಯಾಮಾರಿಸುತ್ತಲೇ ಹತ್ತು ಲಕ್ಷದ ಚಿನ್ನದ ಸೂಟು ತೊಡಬಹುದು; ಎಂಟೂವರೆ ಸಾವಿರ ಕೋಟಿ ರೂಪಾಯಿಯ ಐಷಾರಾಮಿ ವಿಮಾನದಲ್ಲಿ ಓಡಾಡಬಹುದು.
* ಚೀನಾದವರ ಅತಿಕ್ರಮಣ, ಅಮೆರಿಕಾದವರ ತೆರಿಗೆ ಭಯೋತ್ಪಾದನೆಗೆ ಹೆದರಿ ಬಾಲ ಮುದುರಿ ಕೂತರೂ ವಿಶ್ವಗುರು ಎಂದು ಪರಾಕು ಹಾಕಿಸಿಕೊಳ್ಳಬಹುದು.
* ನಮ್ಮದೇ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಅತ್ತ ಮುಖ ಹಾಕದೆ, ಒಂದೇಒಂದು ಫೋನ್ ಕಾಲ್ನಲ್ಲಿ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದ್ದ ಕ್ರೆಡಿಟ್ಟು ದೇಬಿಕೊಳ್ಳಬಹುದು.
* ತಟ್ಟೆ-ಪಾತ್ರೆ ಬಡಿದು ಮತ್ತು ಹಣತೆಯನ್ನು ಹಚ್ಚಿಟ್ಟು ಕೊರೊನಾ ವೈರಸ್ಸನ್ನು ಡಿಸೈನ್ಡಿಸೈನ್ ಆಗಿ ಕೊಂದುಹಾಕಬಹುದು.
* ನಿಮ್ಮ ವೈಫಲ್ಯವನ್ನೆಲ್ಲ ಸತ್ತು ಸ್ವರ್ಗಸ್ಥರಾದ ನೆಹರೂ ಕುತ್ತಿಗೆಗೆ ನೇತುಹಾಕಿ ನೀವು ನಿರುಮ್ಮಳವಾಗಿ ರಾಜ್ಯಭಾರ ಮಾಡಬಹುದು.
ಕೊನೆಯದಾಗಿ….
* ಎಲ್ಲರ ಮೂಗಿಗೆ ಹದಿನೈದು ಲಕ್ಷದ ತುಪ್ಪ ಸವರಿ, ನೀವು ಮಾತ್ರ ಅದಾನಿ-ಅಂಬಾನಿಗಳ ಪಾದಸೇವೆ ಮಾಡಿಕೊಂಡು ನೆಮ್ಮದಿಯಾಗಿ ಅಧಿಕಾರ ಹಿಡಿಯಬಹುದು!!!
ಬೈದಬೈ…. ಎರಡು ಸಾವಿರ ರೂಪಾಯಿ ನೋಟಿನಲ್ಲಿ ಮೈಕ್ರೋ ಚಿಪ್ಪು ಮಡುಗಿದ ಮೇಧಾವಿ ಟೀವಿ ಆಂಕರಪ್ಪನ ಉಪಟಳವ ಸಹಿಸಿಕೊಂಡು ‘ಆಲ್ರೈಟ್ ಮುಂದಕ್ಕೋಗೋಣ’ ಎಂದು ಮೈಮರೆತವರಿಗೆಲ್ಲ ಮೂರ್ಖರ ದಿನದ ಶುಭಾಶಯಗಳು
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




