ಅ.26 ರಂದು ಜಿಲ್ಲಾ ಮಟ್ಟದ ಸಭೆ
ಧಾರವಾಡ: ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರುಗಳ ಕುಂದುಕೊರತೆ ಸಭೆಯನ್ನು ಅಕ್ಟೋಬರ್ 26, 2025 ರಂದು ಧಾರವಾಡ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರುಗಳು ಸದರಿ ಕುಂದುಕೊರತೆ ಸಭೆಗೆ ಹಾಜರಾಗಬೇಕು ಎಂದು ಧಾರವಾಡ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ತಿಳಿಸಿದ್ದಾರೆ.




