ವ್ಯಕ್ತಿ, ಸಂಸ್ಥೆಯ ವಿಶೇಷ ಶಿಕ್ಷಕರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

2 years ago

ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆಯ ವಿಶೇಷ ಶಿಕ್ಷಕರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬಳ್ಳಾರಿ: ಡಿ.03ರಂದು ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಪ್ರಸ್ತಕ ಸಾಲಿಗೆ ವಿಕಲಚೇತನರ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ವಿಶೇಷ ಶಿಕ್ಷಕರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಅಹ್ವಾನಿಸಲಾಗಿದೆ.

ರಾಜ್ಯ ಪ್ರಶಸ್ತಿಗಾಗಿ ವೈಯಕ್ತಿಕ ವಿಭಾಗ, ವಿಶೇಷ ಶಿಕ್ಷಕರ ವಿಭಾಗ ಮತ್ತು ಸಂಸ್ಥೆಗಳ ವಿಭಾಗದಲ್ಲಿ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಗಳನ್ನು ಅ.15 ರೊಳಗಾಗಿ ಆಯಾ ತಾಲ್ಲೂಕು ಮಟ್ಟದ MRW ಗಳ ಮುಖಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ತಾಲ್ಲೂಕು MRW ಮೊ.8880875620, ಸಂಡೂರು ತಾಲ್ಲೂಕು MRW ಮೊ.9632052270, ಸಿರುಗುಪ್ಪ MRW ಮೊ.9743509698 ಮತ್ತು ಕುರುಗೋಡು MRW ಮೊ.9538000887 ಗೆ ಸಂಪರ್ಕಿಸಬಹುದು.

Leave a Reply