ಕರ್ನಾಟಕ ಸರಕಾರ ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ನೆಂದು ಘೋಷಣೆ ಮಾಡಿದ ನಂತರ ವೈರಿಪಡೆ ಎಚ್ಛೆತ್ತುಕೊಂಡಿದೆ. ಅದೀಗ Now or never ಎಂಬಂತೆ ಮೈಕೊಡವಿಕೊಂಡು ತಂತ್ರಗಳನ್ನು ಹೆಣೆಯಲಾರಂಭಿಸಿದೆ. ಶರಣರ ವಚನಗಳನ್ನು ತಾವೇ ಪ್ರಚಾರಮಾಡುವಂತೆ ನಟಿಸಿ, ಬಸವಣ್ಣನವರನ್ನು ಕೇವಲ ಧಾರ್ಮಿಕ ವ್ಯಕ್ತಿ ಎಂಬಂತೆ ಚಿತ್ರಿಸಿ, ಅವರನ್ನು ಭಕ್ತಿ ಚಳುವಳಿಗೆ ಸೀಮಿತಗೊಳಿಸಿ, ಅವರನ್ನು ಹಿಂದೂ ಧರ್ಮದ ಒಬ್ಬ ಉಧಾರವಾದಿ ಧಾರ್ಮಿಕ ಚಿಂತಕನೆಂಬಂತೆ ಬಿಂಬಿಸಿ, ಅವರಿಗೂ ಕಬೀರ, ಮೀರಾ, ವಿವೇಕಾನಂದರಂತೆ ಇವರೂ ಸಹ ಒಬ್ಬ ಹಿಂದೂಧರ್ಮದ ‘ಭಕ್ತಿಪಂಥದ ನಾಯಕರು’ ಎಂದು ಪಟ್ಟ ಕಟ್ಟುವ ಆಲೋಚನೆಯಲ್ಲಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ವೈದಿಕರ ಕುರುಹಾದ ಆರ್.ಎಸ್.ಎಸ್. ಸಂಘಟನೆಯು ಇಂದು ಬಸವಣ್ಣನವರ ಬಗ್ಗೆ ಅಪಾರ ಕಾಳಜಿಯನ್ನು ವ್ಯಕ್ತಪಡಿಸುತ್ತಲಿದೆ. ಅವರೇ “ವಚನ ದರ್ಶನ” ಪುಸ್ತಕದ ರೂವಾರಿಗಳು. ಅದನ್ನು ಮುದ್ರಿಸಿದ್ದಲ್ಲದೆ ಅಪಾರ ಪ್ರಮಾಣದ ಹಣ ಖರ್ಚು ಮಾಡಿ ಜಿಲ್ಲೆ ಜಿಲ್ಲೆಗಳಲ್ಲಿ ಆರ್.ಎಸ್.ಎಸ್. ನಾಯಕರಿಂದ ಬಿಡುಗಡೆಗೊಳಿಸುತ್ತಲಿದ್ದಾರೆ. ಕೇವಲ ಮುದ್ರಣ ಮಾಧ್ಯಮವಲ್ಲದೆ ದೃಶ್ಯ ಮಾಧ್ಯಮದಲ್ಲಿಯೂ ನಮ್ಮ ಶರಣರನ್ನು ಚಿತ್ರೀಕರಿಸಲಾರಂಭಿಸಿದ್ದಾರೆ. “ಶರಣರ ಶಕ್ತಿ” ಎಂಬ ಚಲನಚಿತ್ರವನ್ನು ಆರ್.ಎಸ್.ಎಸ್. ಸಂಸ್ಥೆಯೇ ನಿರ್ಮಿಸಿದೆಯಂತೆ.
ಮೂರನೆಯದಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಎಂಬ ಆರ್.ಎಸ್.ಎಸ್. ಅಂಗ ಸಂಸ್ಥೆಯು ಕಾಲೇಜು ವಿದ್ಯಾರ್ಥಿಗಳಿಗೆ ಲಿಂಗಧಾರಣ ಮಾಡಿ, ವಚನಪಾಠ ಮಾಡಿಸುವುದಾಗಿ ಚಿಂತಿಸುತ್ತಿದ್ದಾರಂತೆ. ಎಂಟುನೂರು ವರ್ಷಗಳಿಂದ ಲಿಂಗಾಯತವನ್ನು ದ್ವೇಷಿಸಿಕೊಂಡು ಬಂದ ವೈದಿಕ ಧರ್ಮಗಳು ಮತ್ತು ಅದರ ಅಂಗಸಂಸ್ಥೆಗಳು ಇಂದೇಕೆ ಶರಣ ಸಂಕುಲದ ಪ್ರಚಾರಕ್ಕಿಳಿದಿವೆ?
ಇದನ್ನೆಲ್ಲ ಗಮನಿಸಿದರೆ, ಲಿಂಗಾಯತ ವಿರೋಧಿ ಶಕ್ತಿಗಳು ದೊಡ್ಡ ಮಟ್ಟದ ಯುದ್ಧಕ್ಕಿಳಿದಂತಿದೆ. ಆದರೆ ಈ ಬಾರಿಯ ಯುದ್ಧವು ‘conventional ಯುದ್ದ’ವಲ್ಲ, ಇದು ‘ಗೋರಿಲ್ಲಾ ವಾರ್’. ಇದು ಎದುರು ಬಂದು ಕೊಲ್ಲುವ ಯುದ್ಧವಲ್ಲ. ಬೆನ್ನಿಗೆ ಚೂರಿ ಹಾಕುವ ಯುದ್ಧ. ವೈರಿ ಪಡೆಯವರನ್ನು ಖರೀದಿಸಿ ಮೋಸದಿಂದ ನಮ್ಮವರನ್ನೇ ನಮ್ಮೆದುರು ಎತ್ತಿಕಟ್ಟುವ ನೀಚ ಯುದ್ಧ. ವಿರೋಧಿಗಳು ನಮ್ಮ ‘ನಮಕ್ ಹರಾಮ್’ ಗಳನ್ನು ಖರೀದಿಸಿ ನಮ್ಮೆದುರೆ ಎತ್ತಿ ಕಟ್ಟುತ್ತಿದ್ದಾರೆ. ಎದೆಯ ಮೇಲೆ ಇಷ್ಟಲಿಂಗ ಧರಿಸಿ, ಅದೆ ಲಿಂಗಕ್ಕೆ ಗುಂಡಿನ ಗುರಿ ಇಡಿ ಎಂದು ಹೇಳುವ ನೀಚರು ಅವರ ಕೈ ಸೇರಿದ್ದಾರೆ. ಭಾರತದ ಇತಿಹಾಸವನ್ನು ಒಮ್ಮೆ ಗಮನಿಸಿದರೆ ಪರಕೀಯರು ನಮ್ಮ ಮೇಲೆ ಯುದ್ಧಗಳನ್ನು ಗೆದ್ದಿದ್ದು ಇಂತಹ ನಮಕ್ ಹರಾಮಗಳನ್ನು ಖರಿದಿಸಿಯೇ ಅಲ್ಲವೆ?
ಇರಲಿ. ವಿಷಯಕ್ಕೆ ಬರೋಣ. ಈಗಾಗಲೇ “ವಚನ ದರ್ಶನ” ಪುಸ್ತಕ ಮುದ್ರಣಗೊಂಡು ಜಿಲ್ಲೆ ಜಿಲ್ಲೆಗಳಲ್ಲಿ ಆರ್.ಎಸ್.ಎಸ್. ನಾಯಕರಿಂದ ಬಿಡುಗಡೆಗೊಂಡಿದೆ. ಮೇಲಾಗಿ “ವಚನ ದರ್ಶನ” ವೆಂಬ ೨೫೦ ಪುಟಗಳ ಕನ್ನಡದ ಒಂದು ಪುಸ್ತಕವು ಭಾರತದ ರಾಜಧಾನಿ ದೆಹಲಿಯಲ್ಲಿ ಬಿಡುಗಡೆಯಾಗುತ್ತಿದೆ. ಬಲಪಂಥೀಯ ಸರಕಾರದ ಮಂತ್ರಿಗಳು ಅದನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಇನ್ನೊಂದು ಕಡೆ “ಶರಣರ ಶಕ್ತಿ” ಎಂಬ ಚಲನಚಿತ್ರ ಮುಂದಿನ ತಿಂಗಳ ೮ರಂದು ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ಬಸವಣ್ಣನವರನ್ನು ಕೊಲ್ಲಲಾಗಿದೆಯಂತೆ, ಅಕ್ಕನಾಗಮ್ಮನ ತೇಜೋವಧೆ ಮಾಡಲಾಗಿದೆಯಂತೆ. ಜಂಗಮರನ್ನು ‘ಪುಂಡ ಜಂಗಮ’ ಎಂದು ಕರೆಯಲಾಗಿದೆಯಂತೆ. ಕಾರಣ ಕೇಳಿದರೆ ಇದಕ್ಕೆ ಗ್ರಂಥಗಳ ಆಧಾರವಿದೆಯೆಂದು ಉತ್ತರಿಸುತ್ತಿದ್ದಾರೆ. ‘ಮಹತ್ಮಾಗಾಂಧಿಯಿಂದ ಸ್ವಾತಂತ್ರ್ಯ ದೊರಕಿಲ್ಲ ಅವನೊಬ್ಬ ಹೇಡಿ’ ಎಂದು ಬರೆದ ಗ್ರಂಥಗಳನ್ನು ಬರೆಸಿದ್ದಾರೆ. ಅಂತಹ ಒಂದು ಗ್ರಂಥದ ಆಧಾರದಲ್ಲಿ ಮಹಾತ್ಮರ ವ್ಯಕ್ತಿತ್ತ ಅಳೆಯಲು ಸಾಧ್ಯವೆ?
ತೆರೆಕಾಣಲಾಗುವ ಈ ಚಿತ್ರವನ್ನು ಪುನರ್ ಪರಿಶೀಲಿಸಬೇಕು ಎಂಬ ಮನವಿಯನ್ನು ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರಿಗೆ ನಿನ್ನೆ ಸ್ನೇಹಿತರೊಂದಿಗೆ ಸಲ್ಲಿಸಿದೆ. ಸಂಸ್ಥೆಯ ಅಧ್ಯಕ್ಷರು ನಮ್ಮ ಸಮಕ್ಷಮದಲ್ಲಿ ನಿರ್ಮಾಪಕರನ್ನು ಸಂಪರ್ಕಿಸಿ ನಮ್ಮ ಆಕ್ಷೇಪಣೆಯನ್ನು ವಿವರಿಸಿದರು. ಆಗ ನಿರ್ಮಾಪಕರು ತೆರೆಕಾಣುವ ಮುಂಚೆ ಚಿತ್ರವನ್ನು chamber of commerce ನವರೊಂದಿಗೆ ನಮ್ಮ ವಿದ್ವಾಂಸರಿಗೂ ಸಹ ಪ್ರದರ್ಶನ ಮಾಡುತ್ತೇವೆ ಎಂದು ಮಾತುಕೊಟ್ಟಿದ್ದಾರೆ. ನೋಡೋಣ.

ಮುಂದಿನ ಹಂತಕ್ಕೆ ನಮ್ಮ ಮಠ ಮಾನ್ಯಗಳು ಸಿದ್ಧತೆ ಮಾಡಿಕೊಳ್ಳಬೇಕು. ಇಂದು ಲಿಂಗಾಯತ ಮಠಗಳು ಧರ್ಮ ಉಳಿಸಲು ಹೊರಬರಬೇಕಾಗಿದೆ ಮತ್ತು ಲಿಂಗಾಯತವನ್ನು ಜಾಗತೀಕರಣಗೊಳಿಸಬೇಕಾಗಿದೆ.
-ಜಿ.ಬಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ







