ಪ್ರೀತಿ ಮತ್ತು ದ್ವೇಷ
ಪ್ರೀತಿ ಮತ್ತು ದ್ವೇಷವನ್ನ ಎರಡನ್ನು ಏಕಕಾಲಕ್ಕೆ ಪ್ರಕಟಿಸುವ ಕಾರಣದಿ ಸಮಾಜದಲ್ಲಿ ಸಮಸ್ಯೆಗಳು ತಲೆದೋರಿದೆ
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ತನ್ನ ಒಪ್ಪಿತ ಸಿದ್ದಾಂತವನ್ನು ಪ್ರೀತಿಸುವವರು ಅನ್ಯರ ಒಪ್ಪಿತ ಸಿದ್ದಾಂತವನ್ನು ಒಪ್ಪಬೇಕು ಇಲ್ಲದಿದ್ದರೆ ಭಿನ್ನ ಅಭಿಪ್ರಾಯವನ್ನಷ್ಟೇ ಪ್ರಕಟಿಸಬಹುದು ಆದರೆ ದ್ವೇಷಿಸುವುದು ಸರಿಯಲ್ಲ
ತಮ್ಮ ಸಂಸ್ಕೃತಿಯನ್ನು ಪ್ರೀತಿಸುವವರು ಅನ್ಯ ಸಂಸ್ಕೃತಿಯನ್ನು ಪ್ರೀತಿಸದಿದ್ದರೂ ಚಿಂತೆ ಇಲ್ಲ ದ್ವೇಷಿಸುವ ಅವಶ್ಯಕತೆ ಇರುವುದಿಲ್ಲ
ತನ್ನವರ ಬದುಕು ಶಾಂತಿಯುತವಾಗಿ ಇರಬೇಕೆಂದು ಬಯಸುವವರು ಅನ್ಯರ ಬದುಕನ್ನು ಶಾಂತತೆಯಿಂದಲೇ ಕಾಣಬೇಕೆ ಹೊರತು ಅಶಾಂತಿಯ ಮೂಲಕ ಬಗ್ನಗೊಳಿಸುವ ದಾರಿಯಲ್ಲಿ ಸಾಗಬಾರದು
ತನ್ನವರನ್ನು ಪ್ರೀತಿಸುವವರು ಅನ್ಯರನ್ನು ಪ್ರೀತಿಸಬೇಕೆಂದೇನಿಲ್ಲ ಆದರೆ ದ್ವೇಷಿಸುವಂತಹ ಅವಶ್ಯಕತೆ ಇರುವುದಿಲ್ಲ
ಒಬ್ಬರು ಇಷ್ಟಪಡುವ ಆಚಾರ ವಿಚಾರ ನಂಬಿಕೆ ಇವುಗಳನ್ನು ಎಲ್ಲರೂ ಒಪ್ಪ ಬೇಕೆಂಬ ಒತ್ತಡವನ್ನ ಹೇರುವುದು ಪರೋಕ್ಷವಾಗಿ ಹಿಂಸೆಯ ಪ್ರಚೋದನೆಗೆ ಕಾರಣವಾಗುತ್ತದೆ
ಪ್ರೀತಿಗೆ ಪ್ರೀತಿಯೇ ಸಾಟಿ ,ಪ್ರೀತಿಗೆ ದ್ವೇಷ ಮಧ್ಯಲ್ಲ, ಶಾಂತಿಗೆ ಶಾಂತಿಯೇ ಮದ್ದು, ಅಶಾಂತಿ ಎಂದಿಗೂ ಮದ್ದಾಗುವುದಿಲ್ಲ, ನಾವು ಒಪ್ಪುವ ಸಿದ್ದಾಂತವನ್ನು ಎಲ್ಲರೂ ಒಪ್ಪಲೇಬೇಕೆಂದು ಅಭಿಪ್ರಾಯ ಪಡುವುದು ಒತ್ತಡದ ತಂತ್ರವಾಗುತ್ತದೆ, ಅವರವರ ಅಭಿಪ್ರಾಯವನ್ನು ಗೌರವಿಸುವುದರ ಮೂಲಕ ಬದುಕುವುದು ಸ್ವಾಸ್ಯ ಸಮಾಜದ ಬುನಾದಿಯಾಗುತ್ತದೆ.
ಪ್ರೀತಿ ಮತ್ತು ದ್ವೇಷ, ಶಾಂತಿ ಮತ್ತು ಅಹಿಂಸೆ, ಏಕಕಾಲದಲ್ಲಿ ಬಳಸಬಹುದಾದ ಅಸ್ತ್ರಗಳಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




