ತಾಯಿತನ ದೃಢವಾದ ದಿನದಿಂದ ಹೆರಿಗೆಯಾಗಿ ಮನೆಯ ಸೇರುವ ತನಕ ಲಕ್ಷ ರೂಪಾಯಿಗಳ ಪ್ಯಾಕೇಜಿನ ಸೌಲತ್ತುಗಳ ಹೊಂದಿರುವ ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಬಾಣಂತಿಯರ ಸಾವಿನ ಬಗ್ಗೆ ಆಡುವ ಮಾತುಗಳೆಲ್ಲವೂ ಚಪ್ಪಾಳೆಗಾಗಿ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇವರೇಖೆ ಇವರ ದೂರದ ನೆಂಟರ ಬಂಧುಗಳು ಒಂದು ಬಾರಿಯೂ ಹೆರಿಗೆಗೆ ಸರ್ಕಾರಿ ಆಸ್ಪತ್ರೆಯ ಕಡೆಗೆ ತಿರುಗಿ ನೋಡಿರುವುದಿಲ್ಲ? ಅಲ್ಲಿನ ಸ್ಥಿತಿಗತಿಗಳ ಅರಿವೇ ಇರುವುದಿಲ್ಲ. ಯಾರೋ ಹೇಳಿದ ಮಾತು ಕೇಳಿ ಆಡುವ ಮಾತುಗಳಷ್ಟೇ ಆಗಿರುತ್ತದೆ.
ಕನ್ನಡ ಶಾಲೆಗಳು ಉಳಿಯಬೇಕು ಎಲ್ಲ ಮಕ್ಕಳು ಕನ್ನಡ ಶಾಲೆಗೆ ಸೇರಬೇಕು ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಎಂದೆಲ್ಲ ಕೆಲವು ಮಂದಿ ವೇದಿಕೆ ಸಿಕ್ಕಿದ ತಕ್ಷಣ ಆಡುವ ಮಾತುಗಳು ಕೇವಲ ಚಪ್ಪಾಳೆಗಾಗಿ.
ಇವರ ಮಕ್ಕಳು ಇವರ ಮರಿ ಮಕ್ಕಳು ಇವರ ಬಂಧು ಬಳಗದವರು ಯಾರು ಸೇರಿಸುತ್ತಿಲ್ಲ ಸರ್ಕಾರಿ ಶಾಲೆಗೆ, ಕನ್ನಡ ಮಾಧ್ಯಮದ ಶಾಲೆಗೆ. ಇವರ ವಂಶದ ಕುಡಿಗಳೆಲ್ಲ ಓದಬೇಕು ಪ್ರತಿಷ್ಠಿತ ಶಾಲೆಗಳಲ್ಲಿ, ಓದಿ ವಿದ್ಯಾವಂತರಾಗಬೇಕು, ಹೊರದೇಶದಲ್ಲಿ ನೆಲೆಸಿ ಕೈ ತುಂಬಾ ಹಣವ ಸಂಪಾದಿಸಬೇಕು.
ಅನುಭವವೇ ಇರುವುದಿಲ್ಲ, ಯಾರೋ ಹೇಳಿದ ಮಾತು, ಜನ ಚಪ್ಪಾಳೆ ಹೊಡೆಯುತ್ತಾರೆ, ಅದಕ್ಕಾಗಿ ಅಬ್ಬರದ ಮಾತು.
ಸರ್ಕಾರದ ಬಸ್ಸುಗಳಲ್ಲಿ ಒಮ್ಮೆಯೂ ಪ್ರಯಾಣಿಸಿರುವುದಿಲ್ಲ, ಬಸ್ ನಿಲ್ದಾಣಗಳಲ್ಲಿ ಒಮ್ಮೆಯೂ ಪ್ರಯಾಣಿಸಲು ಬಸ್ ಗಳಿಗಾಗಿ ಕಾದಿರುವುದಿಲ್ಲ. ಆದರೂ ಸರ್ಕಾರಿ ಬಸ್ಸುಗಳ ಸುಧಾರಣೆಯಾಗಬೇಕು, ಬಸ್ ನಿಲ್ದಾಣಗಳು ಅಭಿವೃದ್ಧಿಯಾಗಬೇಕು ಎಂಬ ಮಾತುಗಳು, ಇಲ್ಲಿಯೂ ಒಮ್ಮೆಯೂ ಅನುಭವವೇ ಪಡೆದಿರುವುದಿಲ್ಲ ಅವರಿವರು ಹೇಳಿದ್ದು ಇವರಿಗೆ ಮಾತನಾಡಲು ಸುದ್ದಿ.
ಸರ್ಕಾರಿ ಆಸ್ಪತ್ರೆಯ ಅಪ್ಪಿತಪ್ಪಿಯು ಇವರಾಗಲಿ ಇವರ ಬಂಧು ಬಳಗವಾದವರಾಗಲಿ, ಸಣ್ಣ ಕಾಯಿಲೆಗು ದಾಖಲಾಗುವುದಿಲ್ಲ. ಸಾಲಿನಲ್ಲಿ ನಿಂತು ಚಿಕಿತ್ಸೆಗಳ ಪಡೆಯುವುದು ಕನಸಿನ ಮಾತು, ಮತ್ತೆ ಅದೇ ಮಾತುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಕರ್ಯಗಳಿಲ್ಲ.
ಓದಿದ ಇವರ ಮಕ್ಕಳು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಇಲ್ಲವೇ, ವಿದೇಶದ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ, ಸೇವೆ ಸಲ್ಲಿಸಲು ಬರುವವರಿಲ್ಲ ಸರ್ಕಾರಿ ಆಸ್ಪತ್ರೆಗಳಿಗೆ. ಆದರೂ ಜನ ಚಪ್ಪಾಳೆ ಹೊಡೆಯಬೇಕು ವೇದಿಕೆಯ ಮೇಲೆ ಏರಿದಾಗ ಮಾತನಾಡಲೇಬೇಕು.
ಅಪ್ಪಿತಪ್ಪಿಯು ತಮ್ಮ ಮಕ್ಕಳಿಗೆ ಅನ್ಯ ಜಾತಿ ಇರಲಿ, ಅನ್ಯ ಪಂಗಡದ ಸಂಬಂಧಗಳ ಬೆಳೆಸುವುದಿಲ್ಲ. ಮೂರು ಹೊತ್ತು ಜಾತಕಗಳ ಹೊತ್ತು ಶಾಸ್ತ್ರದವರ ಬಳಿಯಲ್ಲಿ ತಿರುಗಾಡುತ್ತಾ, ಜಾತಿಯ ಬೆನ್ನೇರಿ ಹೊರಟವರು ವೇದಿಕೆಗಳ ಮೇಲೆ ನಿಂತು ಮಾತನಾಡುತ್ತಾರೆ ಜಾತಿ ವ್ಯವಸ್ಥೆ ನಾಶವಾಗಬೇಕು, ಕುವೆಂಪುರವರ ಆಶಯಗಳು ಈಡೇರಬೇಕು, ಅಂಬೇಡ್ಕರ್ ರವರ ವಿಚಾರಗಳನ್ನ ಎತ್ತಿ ಹಿಡಿಯಬೇಕು ಎಂದು ನಿಜವಾದ ಜಾತ್ಯತೀತರನ್ನು ನಾಚಿಸುವಂತೆ ರಸವತ್ತಾಗಿ ಮಾತನಾಡುತ್ತಾರೆ ಚಪ್ಪಾಳೆಗಾಗಿ.
ಆತ್ಮಸಾಕ್ಷಿಯ ಕಳೆದುಕೊಂಡ ಜನರಿಂದ ಆಡುವ ಮಾತುಗಳಿಗೆ ಎಲ್ಲಿ ಬರುತ್ತದೆ ಮಹತ್ವ? ಮಾತಿಗೂ ನಡವಳಿಕೆಗೂ ಇರದಿದ್ದರೆ ಸಾಮಿಪ್ಯ ಎಲ್ಲಿ ಬರುತ್ತದೆ ಆ ಮಾತಿಗೆ ಅರ್ಥ?
– ಕೆ ಎಸ್ ನಾಗರಾಜ್, ಬೆಂಗಳೂರು




