ಬೆಂಗಳೂರು: ಹೆಬ್ಬಾಳ ಶಾಂತಿ, ಸೌರ್ಹದತೆ ಇರುವ ಕ್ಷೇತ್ರ. ಭಾರತ ದೇಶಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಹಿಂದೂ, ಮುಸ್ಲಿಂ, ಕೈಸ್ತರು, ಸಿಖ್ ಎಲ್ಲ ಧರ್ಮದವರು ಒಂದೇ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಎಲ್ಲ ಧರ್ಮದವರು ಪ್ರಾಣ ಕೊಟ್ಟಿರುವುದಕ್ಕೆ ನಮಗೆ ಸ್ವಾತಂತ್ಯ್ರ ಲಭಿಸಿತು ಎಂದು ಶಾಸಕ ಭೈರತಿ ಸುರೇಶ್ ಹೇಳಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರ ಪ್ಲಬಿಕ್ ಶಾಲೆ ಸಭಾಂಗಣದಲ್ಲಿ ಆರ್.ಟಿ.ನಗರ ಈದ್ಗಾ ಕಮಿಟಿ ವತಿಯಿಂದ ಸರ್ವ ಧರ್ಮ ಸಮುದಾಯದ ಏರ್ಪಡಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತಾಡಿದ ಅವರು, ಭಾರತದ ಇತಿಹಾಸ ತಿರುಚಲು ಸಾಧ್ಯವಿಲ್ಲ. ಇತಿಹಾಸ ನೋಡಿ ಜನರು ಜೀವನ ನಡೆಸಬೇಕು. ಅಸಹಿಷ್ಣುತೆ ದೇಶದಲ್ಲಿ ಮೊದಲು ಇರಲ್ಲಿಲ. ಆದರೆ ಇಂದು ಅಸಹಿಷ್ಣುತೆ ಎದ್ದು ಕಾಣುತ್ತಿದೆ ಎಂದರು.
ಆಸ್ಪತ್ರೆ, ಶಿಕ್ಷಣ ಸಂಸ್ಥೆಯಲ್ಲಿ ಕೈಸ್ತರು ಅಪಾರ ಕೊಡುಗೆ ನೀಡಿದ್ದಾರೆ. ಸೌಹಾರ್ದತೆ ಸಭೆ ಮಾಡಲು ಕಾರಣ ಜಾತಿ ರಾಜಕಾರಣ ಮತ್ತು ಧರ್ಮ ರಾಜಕಾರಣ ನಿಲ್ಲಬೇಕು. ದೇಶ ಕಟ್ಟುವ ಕೆಲಸವಾಗಬೇಕು, ದೇಶ ಒಡೆಯುವ ಕೆಲಸವಾಗಬಾರದು. ರಾಜಕಾರಣ ಚುನಾವಣೆಗೆ ಮಾತ್ರ ಇರಲಿ. ದೇಶದ ಸಮಗ್ರತೆ ಏಕತೆಯಿಂದ ಕೊಡಿರಲಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಕಾಯಕಯೋಗಿ ಬಸವಣ್ಣ, ಕನಕದಾಸರ ಜಾತ್ಯತೀತ ಸಿದ್ದಾಂತಗಳನ್ನು ಎಲ್ಲರು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಎಲ್ಲ ಧರ್ಮ, ಜಾತಿಯವರು ಸಹೋದರತ್ವದಲ್ಲಿ ಬಾಳಿದರೆ ಮಾತ್ರ ದೇಶ ಅಭಿವೃದ್ದಿ ಸಾಧ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸ್ವಾತಂತ್ಯ್ರ ಹೋರಾಟಗಾರರ ಬಗ್ಗೆ ಇಂದಿನ ಯುವಕರು ಅರಿಯಬೇಕು. ಅವರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ಯ್ರ ಸಿಕ್ಕಿದೆ. ಅದನ್ನ ದೇಶದ ಅಭಿವೃದ್ದಿ ಬಳಸಬೇಕು. ದೇಶದಲ್ಲಿ ಬಡ ಜನರಿಗೆ ಊಟ, ಉದ್ಯೋಗ ಮತ್ತು ಆಶ್ರಯದ ಬಗ್ಗೆ ಸರ್ಕಾರಗಳು ಗಮನಹರಿಸಬೇಕು. ಮಾನವೀಯತೆ ಮುಖ್ಯ ಎಂದರು.
ಸಾಯಿ ಮಂಜುನಾಥ್ ಮಹಾರಾಜ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ವಿ.ಆನಂದ್, ಎಂ.ನಾಗರಾಜ್, ರಾಜಶೇಖರ್ ಹಾಗೂ ಧರ್ಮಗುರುಗಳಾದ ಜಾನ್ಸ್ಸನ್ ವರ್ಗೀಸ್, ಮೌಲನಾ ಮಸೂದ್ ಇಮ್ರಾನ್ ಸಾಬ್, ಹರ್ವಿಂದರ್ ಕಲ್ಸ್, ಪ್ರೊ. ರಾಮಚಂದ್ರ, ಮಹಮದ್ ಕುನ್ನಿ ಸಾಬ್, ಪತ್ರಕರ್ತ ಸಮೀವುಲ್ಲಾ ಮೊದಲಾದವರು ಹಾಜರಿದ್ದರು.



